Banana Health Benefits : ಬಾಳೆಹಣ್ಣು ಎನ್ನುವುದು ಬಡವರ ಪಾಲಿನ ಸೇಬು ಇದ್ದಂತೆ. ಇದರ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂದರೆ ದಿನವೂ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಹಲವು ಕಾಯಿಲೆಗಳನ್ನು ದೂರವಿಡಬಹುದು.
ಬಾಳೆಹಣ್ಣಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಎಂದರೆ 110 ಕ್ಯಾಲರಿ, 5 ಗ್ರಾಂ ಕೊಬ್ಬು, 27 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 3 ಗ್ರಾಂ ನಾರಿನಾಂಶ, 14 ಗ್ರಾಂ ಸಕ್ಕರೆ, ಶೇ.25ರಷ್ಟು ವಿಟಮಿನ್ ಬಿ6,
1 ಗ್ರಾಂ ಪ್ರೋಟೀನ್, ಶೇ. 16ರಷ್ಟು ಮ್ಯಾಂಗನೀಸ್, ಶೇ.14ರಷ್ಟು ವಿಟಮಿನ್ ಸಿ, ಶೇ. 12ರಷ್ಟು ನಾರಿನಾಂಶ, ಶೇ. 10ರಷ್ಟು ಬಿಯೊಟಿನ್, ಶೇ. 10ರಷ್ಟು ತಾಮ್ರ ಮತ್ತು ಶೇ 8ರಷ್ಟು ಮ್ಯಾಂಗನೀಸ್ ಇದೆ.
- ರಕ್ತಹೀನತೆಯು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆ ಕಡಿಮೆಯಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದಾದ ಅಂಶಗಳನ್ನು ದೂರ ಮಾಡುತ್ತದೆ.
- ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದರಿಂದ ದೇಹವು ಸುಮಾರು 26 ಪ್ರತಿಶತದಷ್ಟು ವಿಟಮಿನ್ ಬಿ 6 ಅನ್ನು ಪಡೆಯುತ್ತದೆ. ವಿಟಮಿನ್ ಬಿ6 ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಇದು ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಪರಿವರ್ತಿಸುತ್ತದೆ.
- ಅಧಿಕ ಬಿಪಿ ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಸೋಡಿಯಂನಲ್ಲಿ ಕಡಿಮೆ ಮತ್ತು ಹೆಚ್ಚಿನ ಪೊಟ್ಯಾಸಿಯಮ್ ಸಂಯೋಜನೆಯು ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
- ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯಾಘಾತ, ಹೃದ್ರೋಗದಿಂದ ಬಾಳೆಹಣ್ಣು ಮುಕ್ತಿ ನೀಡುತ್ತದೆ.
- ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳಲ್ಲಿ ಟ್ರಿಪ್ಟೋಫಾನ್ (tryptophan) ಸಹಾ ಒಂದು. ಇದು ಮನಸ್ಸನ್ನು ಶಾಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮನ ಪ್ರಶಾಂತಗೊಂಡು ಮತ್ತೆ ಸಹಜಸ್ಥಿತಿಗೆ ಬರಲು ಸಹಕರಿಸುತ್ತದೆ.
https://vijayatimes.com/azim-prem-ji-donates-highest-in-2020/