ಬೆಂಗಳೂರು, ಆಗಸ್ಟ್ 10: ಬೆಂಗಳೂರಿನಲ್ಲಿ(Bengaluru) ಬಾಡಿಗೆಗೆ ಮನೆ ಹುಡುಕುತ್ತಿದ್ದೀರಾ?? ಹಾಗಾದರೆ ಗಮನಿಸಿ… ಪ್ರಸುತ ವಿದ್ಯಾಮಾನದಲ್ಲಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ(Rent) ಗಗನಕ್ಕೇರುತ್ತಿದೆ. ಈ ಮಹಾನಗರದ ಕೆಲ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆಗಳ ಬಾಡಿಗೆ ದರಗಳು ಮುಂಬೈಗಿಂತಲೂ(Mumbai) ಹೆಚ್ಚಾಗಿವೆ ಎಂದು ವರದಿ ಆಗಿದೆ .
ಇದಕ್ಕೆ ನಿದರ್ಶನ ವೆಂಬತೆ ಬೆಂಗಳೂರಿನಲ್ಲಿ ಒಂದು ರೂಮ್-ಕಿಚನ್ (1RK) ಅಪಾರ್ಟ್‌ಮೆಂಟ್‌ಗಾಗಿ(Apartment) ದಿಬ್ಯಾಂಗನಾ ಪೌಲ್(Dibyangana Paul) ಎಂಬುವವರು ಎಷ್ಟು ಹುಡುಕುತ್ತಿದ್ದರೂ, ಅವರಿಗೆ ಬೇಕಿರುವ ಬಾಡಿಗೆ ಮನೆ ಸಿಕ್ಕಿಲ್ಲವೆಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ 13,000ರಿಂದ 15,000 ರೂಪಾಯಿಗಳಲ್ಲಿ ‘1 ಆರ್‌ಕೆ ಅಪಾರ್ಟ್‌ಮೆಂಟ್‌ಗಳು ಲಭ್ಯವಿದೆ. ಆದರೆ, 2 ಬಿಎಚ್‌ಕೆ(2BHK) ಮನೆಗಳು ಬೇಕೆಂದುಕೊಂಡಿರುವವರಿಗೆ (ಎರಡು ಬೆಡ್‌ರೂಮ್-ಹಾಲ್-ಕಿಚನ್) 30,000 ರೂಪಾಯಿಗಿಂತ ಹೆಚ್ಚು ಬಾಡಿಗೆ ಇದೆ ಎಂದು ಪೌಲ್ ಹೇಳಿದ್ದಾರೆ.

ಮನೆ ಬಾಡಿಗೆ ವಿಷಯ ಹೆಚ್ಚು ಇದೆ ಹಾಗಂತ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ (Paying Guest) ವಸತಿ ಗೃಹದ ಬಾಡಿಗೆ ಕೂಡ ಕಮ್ಮಿ ಇಲ್ಲ ಬರೋಬ್ಬರಿ ಒಬ್ಬರಿಗೆ ತಿಂಗಳಿಗೆ ರೂ 7000 ಬಾಡಿಗೆಯನ್ನು ಪೌಲ್ ಪಾವತಿಸುತ್ತಿದ್ದಾರೆ. ನಗರದ ಪ್ರಮುಖ ಪ್ರದೇಶವಾದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ(HSR Layout) 1 ಆರ್‌ಕೆ ಅಪಾರ್ಟ್‌ಮೆಂಟ್‌ಗಳ ಬಾಡಿಗೆಗಳು ಇದೀಗ ತಿಂಗಳಿಗೆ 24,000 ರೂಪಾಯಿಗಳ ಬಾಡಿಗೆಯೊಂದಿಗೆ ಈಗ 2 ಲಕ್ಷ ರೂಪಾಯಿ ಅಡ್ವಾನ್ಸ್‌ನೊಂದಿಗೆ(Advance) ಮುಟ್ಟಿವೆ.
ಇದನ್ನೂ ಓದಿ : ಬ್ಯಾಂಕ್ ಸಾಲ ಪಡೆದವರಿಗೆ ಗುಡ್‌ನ್ಯೂಸ್ : ಆರ್‌ಬಿಐ ಸಿಹಿ ಸುದ್ದಿ ! ರೆಪೋ ದರದಲ್ಲಿ ಬದಲಾವಣೆ ಇಲ್ಲ, 6.5% ಮುಂದುವರಿಕೆ!
2 ಬಿಎಚ್‌ಕೆಗೆ 2.5 ಲಕ್ಷ ರೂಪಾಯಿ ಅಡ್ವಾನ್ ಜೊತೆಗೆ ತಿಂಗಳಿಗೆ ಬಾಡಿಗೆ 25 ಸಾವಿರ ರೂಪಾಯಿಗಳು ನಗರದ ಕೇಂದ್ರ ಭಾಗಕ್ಕೆ ಸಮೀಪವಿರುವ ಪ್ರದೇಶಗಳಲ್ಲಿ ಇವೆ.ಅಷ್ಟೇ ಅಲ್ಲದೆ ಬೆಂಗಳೂರಿನ ಉಪನಗರಗಳಲ್ಲಿ (ಸರ್ಜಾಪುರ(Sarjapura), ವೈಟ್‌ಫೀಲ್ಡ್(Whitefield) ಮತ್ತು ದಕ್ಷಿಣ ಭಾಗಗಳ ಹೊರವಲಯದಲ್ಲಿ) ಇನ್ನೂ ಕೈಗೆಟುಕುವ ದರದಲ್ಲಿ ಬಾಡಿಗೆಗಳು ಇವೆ. ನಿಕೂ ಹೋಮ್ಸ್(Nikoo Homes) ಪಾಜೆಕ್ಟ್(Project) ಅಡಿಯಲ್ಲಿ ಪೂರ್ವ ಬೆಂಗಳೂರಿನಲ್ಲಿ 1ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗೆ ಅಂದರೆ ಸುಮಾರು 1,400 ಚದರ ಅಡಿ ವಿಸ್ತೀರ್ಣದಲ್ಲಿದೆ ಇದರ ಬಾಡಿಗೆಯು ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ದಾಟಿದೆ.

ಈ ಕುರಿತು ಬ್ರೋಕರ್(Broker) ಒಬ್ಬರು ಮಾತನಾಡಿ ಇಂತಹ ಬಾಡಿಗೆಗಳನ್ನು ‘ನಾವು ಮೊದಲು ಬರೀ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ನೋಡುತ್ತಿದ್ದೆವು. ಆದರೆ, ಅವುಗಳು ಸಹ ಕನಿಷ್ಠ 4,000-6,000 ಚದರ ಅಡಿ ಅಪಾರ್ಟ್‌ಮೆಂಟ್‌ಗಳಾಗಿದ್ದವು. ಆದರೆ ಇದೀಗ ಮುಂಬೈನಂತೆಯೇ ಪ್ರತಿ ಚದರ ಅಡಿಗೆ 100 ರೂ.ಗಳನ್ನು ಬೆಂಗಳೂರಿನ ಹೆಚ್ಚಿನ ಪ್ರೀಮಿಯಂ ಅಪಾರ್ಟ್ಮೆಂಟ್(Premium Apartment) ಬಾಡಿಗೆಗಳು ಮುಟ್ಟಿವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೃದಯಾಘಾತಕ್ಕೆ ಕಾರಣವಾಗುವ ಈ ಲೋ ಬಿಪಿ ಆಗಲು ಕಾರಣಗಳೇನು ಗೊತ್ತಾ? ಹೇಗಿರುತ್ತವೆ ಲಕ್ಷಣಗಳು?? ಚಿಕಿತ್ಸೆ ಏನು.. ಇಲ್ಲಿದೆ ಮಾಹಿತಿ
ಇಂದು ಮುಂಬೈನ ಅತ್ಯಂತ ಪ್ರಮುಖ ಸ್ಥಳಗಳಾದ ವರ್ಲಿ(Varli), ಬಾಂದ್ರಾ(Bandra), ಜುಹು ಮತ್ತು ವರ್ಸೋವಾಗಳಿಗೆ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಬಾಡಿಗೆಗಳು ಸರಿಸಮಾನವಾಗಿದೆ. ಅಂದರೆ ಸರಾಸರಿ ರೂ 90,000ದಿಂದ 2 ಲಕ್ಷ ಬಾಡಿಗೆ ಇದೆ. ಪ್ರಸ್ತುತ ಬಾಡಿಗೆ ಹೆಚ್ಚಳದ ವಿಷಯದಲ್ಲಿ ಸಾಂಕ್ರಾಮಿಕ ರೋಗವಾದ ಕೋವಿಡ್(Covid) ಪ್ರಮುಖ ಪಾತ್ರ ವಹಿಸಿದೆ ಎಂದು ಬೆಂಗಳೂರಿನ ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್‌ನ(Property Consultancy Nite Frank) ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್(Shantanu majundar), ಹೇಳಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಆಕ್ಯುಪೆನ್ಸಿ ಮಟ್ಟಗಳು ‘ಕೋವಿಡ್ -19ರ ಮೊದಲ ಅಲೆಯ ನಂತರ, ಗಮನಾರ್ಹವಾಗಿ ಕುಸಿದವು’ ಎಂದು ಅವರು ತಿಳಿಸಿದ್ದಾರೆ. ‘2021 ರ ವರೆಗೆ ಶೇಕಡಾ 25 ರಷ್ಟು ಬೆಂಗಳೂರಿನಲ್ಲಿ ಬಾಡಿಗೆಗಳು ಕಡಿಮೆಯಾಗಿದ್ದವು. ಆದರೆ ಇದೀಗ ಶೇಕಡಾ 10ರಿಂದ 15 ರಷ್ಟು 2022 ರ ನಂತರ ಏರಿಕೆ ಕಂಡಿದ್ದೇವೆ. ಆದರೆ ಇದೀಗ 2023 ರಲ್ಲಿ ಇನ್ನೂ ಗರಿಷ್ಠ ಏರಿಕೆಯಾಗಿದೆ’ ಎಂದು ಅವರು ಹೇಳಿದ್ದಾರೆ.
ರಶ್ಮಿತಾ ಅನೀಶ್