Ramanagar: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಹಲವು ಅತಿ ಹೆಚ್ಚು ಅಪಘಾತಗಳು, ಸಾವು ನೋವಿಗೆ ಕಾರಣವಾಗುತ್ತಿದೆ (Bangalore Mysore Killer Highway) ಮತ್ತು ಈ ಹೆದ್ದಾರಿಯು ಹಲವಾರು
ನ್ಯೂನತೆಗಳಿಂದ ಕೂಡಿರುವುದು ಜಿಲ್ಲಾ ಪೊಲೀಸರ ವರದಿಯಲ್ಲಿ ಬಹಿರಂಗವಾಗಿದೆ.ಸದ್ಯ ಪೊಲೀಸರ ತಲೆನೋವಿಗೆ ಕಾರಣವಾಗಿರುವ ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತಗಳಾಗುತ್ತಿದೆ. ಈ ಕುರಿತು ಪೊಲೀಸರು ಈ
ಅಪಘಾತಗಳಿಗೆ ಕಾರಣವಾದ ಅಂಶಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಬೆಳಕು ಚೆಲ್ಲಿದ್ದು,
ನ್ಯೂನತೆಗಳನ್ನು ಶೀಘ್ರ ಸರಿಪಡಿಸಬೇಕು (Bangalore Mysore Killer Highway) ಎಂದು ವರದಿ ಸಲ್ಲಿಸಿದ್ದಾರೆ.

ಎಐ ಕ್ಯಾಮೆರಾ ಎಲ್ಲಿ?
ಸಂಚಾರಿ ನಿಯಮ ಉಲ್ಲಂಘನೆಗಳನ್ನು ತಡೆಯುವ ನಿಟ್ಟಿನಲ್ಲಿ ಎನ್‌ಎಚ್‌ಎಐ ಅತ್ಯಾಧುನಿಕ ಎಐ ಕ್ಯಾಮೆರಾ ವ್ಯವಸ್ಥೆಯನ್ನು ಅಳವಡಿಸುವುದಾಗಿ ಈ ಹಿಂದೆ ಹೇಳಿದ್ದರೂ ಈವರೆಗೆ ಕಾರ‍್ಯರೂಪಕ್ಕೆ ಬಂದಿಲ್ಲ.
ಈ ಕ್ಯಾಮೆರಾಗಳು ಕೇವಲ ಟೋಲ್‌ಗಳ ಬಳಿ ಮಾತ್ರ ಇವೆ. ಆದರೆ ಹಿಟ್ ಆ್ಯಂಡ್ ರನ್ ಕೇಸ್‌ಗಳ ತನಿಖೆ ಮಾಡಲು ಈ ಹೆದ್ದಾರಿಯಲ್ಲಿ ಕ್ಯಾಮೆರಾ ಇಲ್ಲದ ಕಾರಣ ಪೊಲೀಸರ ತಲೆನೋವಿಗೆ ಕಾರಣವಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಸಂಚಾರಿ ನಿಯಮಗಳ ಉಲ್ಲಂಘನೆಗಳನ್ನು ಮತ್ತು ವಾಹನದ ವೇಗ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಹೆಚ್ಚು ಸಾವು ನೋವು ಅತಿಯಾದ ವೇಗದಿಂದ ಸಂಭವಿಸುತ್ತಿದೆ.
ವಾಹನ ಸವಾರರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ಬಳಿ ಗೊಂದಲಕ್ಕೆ ಈಡಾಗುತ್ತಿದ್ದಾರೆ.
ಟೋಯಿಂಗ್ ವ್ಯವಸ್ಥೆ ಇಲ್ಲ:
ವರದಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಕಾರ ಅಪಘಾತವಾದಾಗ ವಾಹನಗಳನ್ನು ತೆರವು ಮಾಡಲು ಹೆಚ್ಚಿನ ಸಂಖ್ಯೆಯ ಟೋಯಿಂಗ್ ವಾಹನಗಳ ಅಗತ್ಯವನ್ನು ಕೊಡಬೇಕು ಆದರೆ ಇಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ.
ಸ್ಕೈವಾಕ್
ವರದಿಯಲ್ಲಿ ತಿಳಿಸಿರುವಂತೆ ಬಾಬಾ ಸಾಹೇಬರ ಪಾಳ್ಯ, (ಕೆಂಗೇರಿ ಚೆಕ್‌ಪೋಸ್ಟ್), ಹನುಮಂತನಗರ, ಕಣಿಮಿಣಿಕಿ, ಎಸ್.ಬಿ ದೊಡ್ಡಿ,ಬೆಳಕೆರೆ ಗೇಟ್, ಸಂಕಲಗೆರೆ ಕ್ರಾಸ್ ಸೇರಿದಂತೆ ಸ್ಥಳೀಯರು ರಸ್ತೆ ದಾಟಲು ನೆರವಾಗುವಂತೆ
ಸ್ಕೈವಾಕ್‌ಗಳನ್ನು ಮಂಡ್ಯ ಮತ್ತು ಮೈಸೂರು ವ್ಯಾಪ್ತಿಯ ಹಲವೆಡೆ ಅಳವಡಿಸಲು ಬಗ್ಗೆ ಈಗಾಗಲೇ ಹೆದ್ದಾರಿ ಪ್ರಾಧಿಕಾರ ಸಹ ಚಿಂತಿಸಿದೆ.

ಗುರುತಿಸಿರುವ ನ್ಯೂನತೆಗಳು
- ವಾಹನ ಸವಾರರಿಗೆ ಬ್ಲಿಂಕರ್ಸ್ ಅಳವಡಿಕೆ, ಅವೈಜ್ಞಾನಿಕವಾಗಿ ಸೂಚನಾ ಫಲಕ,ಮತ್ತು ಹಾಕಿದ ಸಿಗ್ನಲ್ ಚಿಹ್ನೆ ಸಹ ಗೋಚರಿಸುತ್ತಿಲ್ಲ.
- ಬಿಡದಿ ಮತ್ತು ರಾಮನಗರದ ತಾತ್ಕಾಲಿಕ ಎಂಟ್ರಿ ಎಕ್ಸಿಟ್‌ಗಳಿಗೆ ಸೂಚನ ಫಲಕಗಳು ಇಲ್ಲ.
- ಜಯಪುರ ಗೇಟ್ ಸೇರಿದಂತೆ ಇನ್ನೂ ಹಲವೆಡೆ ರಸ್ತೆ ಸಮತಟ್ಟಾಗಿ ನಿರ್ಮಿಸಿಲ್ಲ
- ಜಯಪುರ ಬ್ರಿಡ್ಜ್ ಬಳಿ ಏಕಾಏಕಿ ಎತ್ತರಗೊಳ್ಳುವ ರಸ್ತೆ 300 ಮೀಟರ್ ನಂತರ ಏಕಾಏಕಿ ತಗ್ಗಿನಿಂದ ಕೂಡಿದೆ.
- ರಸ್ತೆಯಲ್ಲಿ ಶೇಖರವಾಗುತ್ತಿರುವ ಮರಳು ಮಣ್ಣುಗಳನ್ನು ಕ್ಲಿನ್ ಮಾಡುತ್ತಿಲ್ಲ
- ಇಳಿಜಾರು ಇರುವ ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿಲ್ಲ
- ಅಲ್ಲಲ್ಲಿಕ್ಯಾಮೆರಾ ಅಳವಡಿಸಿಲ್ಲ
9 ತಿಂಗಳಲ್ಲಿ 158 ಸಾವು 54 ಅಂಶಗಳ ವರದಿ ಸಲ್ಲಿಕೆ
ನಾವು ಅಪಘಾತಗಳ ನಿಯಂತ್ರಣಕ್ಕೆಈಗಾಗಲೇ ಎಲ್ಲಾಕ್ರಮ ಕೈಗೊಳ್ಳುತ್ತಿದ್ದೇವೆ. ವಾಹನ ಸವಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ 54 ಅಂಶಗಳ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿ,
ಹೆದ್ದಾರಿಯಲ್ಲಿ ಹಲವು ನ್ಯೂನತೆಗಳನ್ನು ಗುರುತಿಸಿ ಸರಿಪಡಿಸಲು ತಿಳಿಸಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ರಶ್ಮಿತಾ ಅನೀಶ್