Bengaluru : ಬೆಂಗಳೂರು ಸಂಚಾರಿ ಪೊಲೀಸರು ಶುಕ್ರವಾರ ಒಂದೇ ದಿನದಲ್ಲಿ ಸಂಚಾರ ಉಲ್ಲಂಘನೆಯ ದಂಡದಲ್ಲಿ 5.6 ಕೋಟಿಗೂ (Bangalore Police collected 5.6crores) ಅಧಿಕ ಮೊತ್ತವನ್ನು ಸಂಗ್ರಹಿಸಿದ್ದಾರೆ.
ಕರ್ನಾಟಕದಾದ್ಯಂತ ಸಂಚಾರಿ ಕಾನೂನು ಉಲ್ಲಂಘಿಸುವವರು ಪೊಲೀಸ್ ಇಲಾಖೆಗೆ(Police Department) ಸುಮಾರು 530 ಕೋಟಿ ದಂಡ ಶುಲ್ಕವನ್ನು ಪಾವತಿಸಬೇಕಾಗಿದೆ.
ಇದರಲ್ಲಿ 500 ಕೋಟಿ ರಾಜ್ಯ ರಾಜಧಾನಿ ಬೆಂಗಳೂರಿನಿಂದಲೇ(Bengaluru) ಬರಬೇಕಿತ್ತು.
ದಂಡ ವಸೂಲಿಗಾಗಿ ರಾಜ್ಯ ಪೊಲೀಸರು ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಶೇಕಡಾ 50ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದ್ದವು.
ಫೆಬ್ರವರಿ 11 ರವರೆಗೆ ಮಾತ್ರ ಮಾನ್ಯವಾಗಿರುವ ಶೇಕಡಾ 50 ರಷ್ಟು ರಿಯಾಯಿತಿ ಪಡೆಯಲು ಬೆಂಗಳೂರಿನ ನಿವಾಸಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಉಲ್ಲಂಘನೆಗಳಿಗೆ ದಂಡ ಪಾವತಿಸಲಾಗಿದೆ ಎಂದು ಬೆಂಗಳೂರಿನ ವಿಶೇಷ ಟ್ರಾಫಿಕ್ ಪೊಲೀಸ್ ಕಮಿಷನರ್ ಎಂ ಎ ಸಲೀಂ(MA Salim) ತಿಳಿಸಿದ್ದಾರೆ.

ಇನ್ನು ಸಂಚಾರಿ ಕಾನೂನು ಉಲ್ಲಂಘಿಸಿದವರು ದಂಡವನ್ನು ಸ್ಥಳೀಯ ಟ್ರಾಫಿಕ್ ಪೊಲೀಸ್ ಠಾಣೆಗಳು ಮತ್ತು ಬೆಂಗಳೂರಿನ ಬೆಂಗಳೂರು ಒನ್(Bengaluru One) ಕೇಂದ್ರಗಳಲ್ಲಿ ಪಾವತಿಸಬಹುದು ಅಥವಾ ಬೆಂಗಳೂರು
ಟ್ರಾಫಿಕ್ ಪೊಲೀಸ್ ವೆಬ್‌ಸೈಟ್: https://bangaloretrafficpolice.gov.in ಗೆ ಭೇಟಿ ನೀಡಬಹುದು.
ಆದರೆ ಬೆಂಗಳೂರಿನ ಹೊರಗಿನವರು ಕರ್ನಾಟಕ ಒನ್ (Karnataka One)ಕೇಂದ್ರಗಳಿಗೆ ಅಥವಾ ಹತ್ತಿರದ ಪೊಲೀಸ್‌ಠಾಣೆಗೆ ಭೇಟಿ ನೀಡಬಹುದು.
ಇನ್ನು ಬೆಂಗಳೂರಿನ ಸ್ಥಳೀಯರು ನಗರದ 48 ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಸುಮಾರು 2.2 ಕೋಟಿ(Bangalore Police collected 5.6crores) ಪಾವತಿಸಿದರೆ,
ಆನ್‌ಲೈನ್ ಮೋಡ್‌ಗಳ ಮೂಲಕ 3.2 ಕೋಟಿ ಮತ್ತು ಬೆಂಗಳೂರು ಒನ್ ಕೇಂದ್ರಗಳ ಮೂಲಕ 19 ಲಕ್ಷ ಪಾವತಿಸಲಾಗಿದೆ.
ಸಂಚಾರ ನಿರ್ವಹಣಾ ಕೇಂದ್ರದಲ್ಲಿಯೂ 1.4 ಲಕ್ಷ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಇದನ್ನೂ ಓದಿ: ಅದಾನಿ ಅದ್ವಾನ ; ಭಾರತದ ಮಾರುಕಟ್ಟೆ ಉತ್ತಮವಾಗಿದೆ, ಉತ್ತಮವಾಗಿ ನಿಯಂತ್ರಿಸಲಾಗಿದೆ : ನಿರ್ಮಲಾ ಸೀತಾರಾಮನ್
ಇನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ.ವೀರಪ್ಪ(B Veerappa)
ಅವರ ಸಮ್ಮಖದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಚಾರಿ ನಿಮಯ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಇದರ ನಂತರ, ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಒಂದು ಬಾರಿ 50% ರಿಯಾಯಿತಿಯನ್ನು ಪ್ರಸ್ತಾಪಿಸಿದ್ದಾರೆ.
ಈ ಪ್ರಸ್ತಾಪಕ್ಕೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಅಂತಿಮವಾಗಿ ಒಪ್ಪಿಗೆ ನೀಡಿತ್ತು.
ಹೀಗಾಗಿ ಸಾರ್ವಜನಿಕರು ದಂಡವನ್ನು ಪಾವತಿಸಲು ಹೆಚ್ಚಿನ ಒಲವು ತೋರಿದ್ದಾರೆ.