- ಬೆಂಗಳೂರಿಗರೇ ಬೀ ಕೇರ್ ಫುಲ್
- ಜನರಿಗೆ ಎಚ್ಚರ ವಹಿಸಲು ವೈದ್ಯರಿಂದ ಸೂಚನೆ
- ಜ್ವರ, ಡೆಂಗ್ಯೂ, ಚಿಕನ್ ಗುನ್ಯಾ ಉಲ್ಬಣ (Bangaloreans be careful)
Bangalore: ಬೆಂಗಳೂರಿನಲ್ಲಿ ಬದಲಾಗುತ್ತಿರುವ ವಾತಾವರಣದಿಂದ ಮಕ್ಕಳಿಂದ ಹಿಡಿದು ದೊಡ್ಡವರೂ ಹೈರಾಣಾಗಿದ್ದಾರೆ. ಕಳೆದ ಕೆಲವು ವಾರದಿಂದ ಮಳೆ ಮಳೆ ಹಾಗೂ ಬಿಸಲು ಬಿಟ್ಟು ಬಿಟ್ಟು ಬರುತ್ತಿದ್ದು,
ವಾತಾವರಣ ಬದಲಾವನಣೆ ಹಿನ್ನಲೆ ಜ್ವರ,ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಉಲ್ಬಣವಾಗುತ್ತಿದೆ. ಜೊತೆಗೆ ನೆಗಡಿ, ಕೆಮ್ಮು, ಶೀತದ ಸಮಸ್ಯೆ ಕಂಡು ಬರುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳಿಂದ ಒಂದು ವಾರ ಮಳೆ, ಮತ್ತೊಂದು ವಾರ ಚಳಿ, ಮತ್ತಿಂದು ವಾರ ಬಿಸಿಲು ಹೀಗೆ ವಾತಾವರಣ ಬದಲಾವಣೆ ಆಗುತ್ತಿದೆ. ಇದರಿಂದ ಬೆಂಗಳೂರಿನ ಜನ ಹೈರಾಣಾಗಿದ್ದಾರೆ.
ರಾಜ್ಯದಲ್ಲಿ ಸದ್ದಿಲ್ಲದೇ ಡೆಂಗ್ಯೂ, ಚಿಕನ್ ಗುನ್ಯಾ ಕೇಸ್‌ಗಳು ಏರಿಕೆಯಾಗುತ್ತಿವೆ. ಕರ್ನಾಟಕದಲ್ಲಿ ಡೆಂಗ್ಯೂ 5,000 ದಾಟಿದರೆ, 1,000 ಕ್ಕಿಂತಲೂ ಹತ್ತಿರ ಚಿಕನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣಗಳ ಹೆಚ್ಚಳ ಒಂದು ಕಡೆಯಾದರೆ ಮತ್ತೊಂದು ಕಡೆ ಬೆಂಗಳೂರಿನಲ್ಲಿ 2,478 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ 734 ಚಿಕನ್ ಗುನ್ಯಾ ಕೇಸ್ಗಳಿದ್ದರೆ, ಬೆಂಗಳೂರಿನಲ್ಲಿಯೇ 120 ಕೇಸ್‌ಗಳು ದಾಖಲಾಗಿವೆ.
ಈಡೀಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಕಾಯಿಲೆಗಳು ಕಂಡು ಬರುತ್ತಿದ್ದು, ನಿಂತ ನೀರಿನಲ್ಲಿ ಈ ಡೇಂಜರಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಈ ಹಿನ್ನಲೆ ಎಚ್ಚರವಹಿಸುವಂತೆ ವೈದ್ಯರು ಜನರಿಗೆ ಸೂಚನೆ
ನೀಡಿದ್ದಾರೆ. ವಿಪರೀತ ಜ್ವರ, ತಲೆನೋವು, ಮೈಕೈ ನೋವು, ಕೀಲುನೋವು, ವಾಂತಿ- ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿದರೆ ನಿರ್ಲಕ್ಷ್ಯ ವಹಿಸದೇ ಕೂಡಲೇ ವೈದ್ಯರನ್ನು ಭೇಟಿ ಮಾಡಿ
ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದ್ದಾರೆ. ಬದಲಾಗುತ್ತಿರುವ ವಾತಾವರಣದಿಂದ ಜನರಿಗೆ ಜ್ವರ, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಗಳು ಹೆಚ್ಚುತ್ತಿದ್ದು,
ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ 15% ರಷ್ಟು ಜ್ವರದ ಪ್ರಕರಣ ಏರಿಕೆ ಕಂಡಬರುತ್ತಿದೆ. ಇದಕ್ಕೆಲ್ಲಾ ಸಿಲಿಕಾನ್ ಸಿಟಿಯಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಹವಾಮಾನದ ಎಫೆಕ್ಟ್
ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.ಜ್ವರ, ನೆಗಡಿ, ತೀವ್ರ ಜ್ವರ, ಉಸಿರಾಟದ ಸಮಸ್ಯೆ, ನೆಗಡಿ ಕೆಮ್ಮು, ತೀವ್ರ ಸುಸ್ತು, ಮೈಕೈ ನೋವು, ತಲೆ ಸಿಡಿತ, ಚಳಿ ಜ್ವರ, ಕೆಲವರಲ್ಲಿ ಶೀತ ಜ್ವರ ಕಂಡು ಬರುತ್ತಿದೆ.
ಮಳೆ, ಚಳಿ ಹಾಗು ಬಿಸಿಲಿನ ವಾತಾವರಣದ ಹಿನ್ನಲೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಂಡುಬರುತ್ತಿದ್ದು, ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು,
ಇದನ್ನು ಓದಿ: ಎಲ್ಲಾ ತಾಲೂಕುಗಳಿಗೂ ವಿಸ್ತರಣೆಯಾಗಲಿದೆ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ
ಆರೋಗ್ಯಕರ ಆಹಾರ ಸೇವನೆ ಮಾಡುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. (Bangaloreans be careful)