ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಲು ನದಿಯನ್ನು ಈಜಿ, ಕಾಡು ದಾಟಿ ಬಂದಿರುವ ಘಟನೆ ನಡೆದಿದೆ. ಬಾಂಗ್ಲಾದೇಶ(Bangladesh) ಮೂಲದ ಕೃಷ್ಣ ಮಂಡಲ್ ಹಾಗೂ ಭಾರತದ ಮೂಲದ ಅಭಿಕ್ ಮಂಡಲ್ ನಡುವೆ ಫೇಸ್ ಬುಕ್ಕಿನಲ್ಲಿ ಪ್ರೇಮ(Love)ಹುಟ್ಟಿತ್ತು.

ಫೇಸ್ ಬುಕ್ಕಿನಲ್ಲಿ(Facebook) ಪ್ರೀತಿ ಹುಟ್ಟಿ ವಾಟ್ಸಪ್(What’sApp)ನಲ್ಲಿ ಹುಡುದಾಟವಾಡಿ ಇನ್ಸ್ಟಾಗ್ರಾಮ್( Instagram) ದಲ್ಲಿ ಬ್ರೇಕ್ ಅಪ್ ಮಾಡಿಕೊಳ್ಳುವ ಈ ಕಾಲದಲ್ಲಿ ಆನ್ಲೈನ್ನಲ್ಲಿ ಹುಟ್ಟಿದ ಪ್ರೀತಿಗೋಸ್ಕರ ಬಾಂಗ್ಲಾದೇಶದ(Bangadesh) ಡೇಂಜರಸ್ ಹುಲಿಗಳು ಇರುವ ಕಾಡು ಅಂತಲೇ ಕರೆಯಲ್ಪಡುವ ಸುಂದರ್ ಬನ್ಸ್(SundarBans) ಕಾಡನ್ನು(Forest) ದಾಟ್ಟಿದ್ದಲ್ಲದೇ, ಮೊಸಳೆಗಳಿರುವ ಮಟ್ಲಾದ (Mathla) ನದಿಯನ್ನು ಸುಮಾರು ಒಂದು ಗಂಟೆಗಳ ಕಾಲ ಈಜಿ (Swimming)ಪ್ರಿಯತಮನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾರೆ ಕೃಷ್ಣ ಮಂಡಲ್ ಎಂಬ ಬಾಂಗ್ಲಾದೇಶದ ಯುವತಿ.
ಅಷ್ಟಕ್ಕೂ ಏನು ಇವರ ಪ್ರೀತಿಯ ಕಥೆ ? ಕೃಷ್ಣ ಮಂಡಲಿಗೆ ಫೇಸ್ ಬುಕ್ಕಿನಲ್ಲಿ ಭಾರತ ಮೂಲದ ಅಭಿಕ್ ಮಂಡಲ್ ನಡುವೆ ಫೇಸ್ಬುಕ್ಕಿನಲ್ಲಿ ಸ್ನೇಹ ಶುರುವಾಗುತ್ತೆ ನಂತರ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಗೆ ಧರ್ಮ, ಜಾತಿ, ಗಡಿಗಳ ಭೇದವಿಲ್ಲ ನೋಡಿ ಹಾಗಾಗಿ ಈ ಪ್ರೀತಿ ಅಂತರಾಷ್ಟ್ರೀಯ ಗಡಿಯನ್ನೇ ದಾಟಿತ್ತು. ಪ್ರೀತಿಯಲ್ಲಿದ್ದವರು ಸುತ್ತಮುತ್ತಲಿನ ಜ್ಞಾನ ಮರೆಯುತಾರಂತೆ. ಇನ್ನೂ ಹೇಗಾದರೂ ಮಾಡಿ ಒಂದಾಗಬೇಕು ಅಂದುಕೊಂಡ ಕೃಷ್ಣ ಮಂಡಲ್ ಗೆ ಭಾರತಕ್ಕೆ ಹೋಗಲು ನನ್ನ ಹತ್ತಿರ ಪಾಸ್ ಪೋರ್ಟ್(Passport) ಇಲ್ಲವೆಂದು ಅರಿತ ಅವಳು ಬೇರೆ ಮಾರ್ಗದ ಆಯ್ಕೆ ಮಾಡಿಕೊಳ್ಳುತ್ತಾಳೆ.
ಬಾಂಗ್ಲಾದೇಶದ ಡೇಂಜರಸ್ ಹುಲಿಗಳು ಇರುವ ಸುಂದರ್ ಬನ್ಸ್ ಕಾಡಿನ ಮಾರ್ಗವಾಗಿ, ಮಟ್ಲಾದ ನದಿಯನ್ನು ಈಜಿ ಭಾರತಕ್ಕೆ ಬಂದಿದ್ದಾಳೆ. ನಂತರ ತನ್ನ ಪ್ರಿಯಕರನನ್ನು ಭೇಟಿ ಮಾಡಿ ಕೊಲ್ಕತಾದ ಕಾಳಿಘಾಟ್ ದೇವಸ್ಥಾನದಲ್ಲಿ ಇವರಿಬ್ಬರು ಮದುವೆಯನ್ನು ಸಹ ಮಾಡಿಕೊಂಡಿದ್ದಾರೆ. ಆದರೆ ಅಕ್ರಮ ಗಡಿ ಪ್ರವೇಶ ಮಾಡಿದ ಕಾರಣ ಬಂಗಾಲದ ನರೇಂದ್ರಪುರ ಠಾಣೆಯ ಪೊಲೀಸರು ಕೃಷ್ಣಳನ್ನು ವಶಕ್ಕೆ ಪಡೆದು.

ಮೂಲಗಳ ಮಾಹಿತಿ ಅನ್ವಯ, ನಂತರ ಬಾಂಗ್ಲಾ ದೇಶದ ಕಮಿಷನರ್ ಗೆ ಹಸ್ತಾತರಿಸಿದ್ದಾರೆ. ಇವರಿಬ್ಬರ ಪ್ರೀತಿಗೆ ಉಭಯ ದೇಶಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತವೆ ಎಂಬುದನ್ನು ಕಾದು ನೋಡಬೇಕು.