ಬಂಗುಡೆ ಮೀನು (Bangude fish) ಸಮುದ್ರದ ಮೀನಿನಲ್ಲಿ ಕಂಡು ಬರುವ ಒಂದು ಮೀನಿನ ಪ್ರಭೇದ. ಇದನ್ನು ಇಂಡಿಯನ್ ಮ್ಯಾಕೆರೆಲ್ (Indian Mackerel) ಅಥವಾ ರಾಸ್ಟ್ರೆಲ್ಲಿಗರ್ ಕನಗುರ್ಟಾ (Rastrelliger Kanagurta) ಎಂದು ಕರೆಯುತ್ತಾರೆ.(Bangude fish: Delicious to eat) ಇದು ಸಾಮಾನ್ಯವಾಗಿ ಭಾರತೀಯ ಮತ್ತು ಪಶ್ಚಿಮ ಪೆಸಿಫಿಕ್ ಸಮುದ್ರಗಳಲ್ಲಿ (Pacific Ocean) ಕಂಡುಬರುತ್ತದೆ.
ಇದನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪಾಕಪದ್ಧತಿಯಲ್ಲಿ (Southeast Asian cuisine) ಬಳಸಲಾಗುತ್ತದೆ. ಇದನ್ನು ಗುಜರಾತಿನಲ್ಲಿ ಬಂಗ್ಡಿ (ಬಾಂಗ್ಡಿ), ಮರಾಠಿ ಭಾಷೆಯಲ್ಲಿ ಬಂಗ್ಡಾ (ಬಾಂಗ್ಡಾ) ಮತ್ತು ತುಳು, ಕೊಂಕಣಿ ಮತ್ತು ಕನ್ನಡದಲ್ಲಿ ‘ಬಂಗುಡೆ’ ಎಂದು ಕರೆಯುತ್ತಾರೆ.
ಬಂಗುಡೆ ಮೀನಲ್ಲಿರುವ ಆರೋಗ್ಯಾಂಶಗಳು:
ಬಂಗುಡೆ ಮೀನು ಆರೋಗ್ಯಕ್ಕಂತು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ (Omega 3 fatty acids) ಅಂಶವಿದೆ. ಬಿ12 ಕೊರತೆಯಿಂದ ಬಳಲುವವರಿಗೆ ಇದು ಉತ್ತಮ ಆಹಾರ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು ಕೊಬ್ಬಿನಾಂಶ (Fat content) ಇಲ್ಲದಿರುವ ಬಂಗುಡೆ ಮೀನನ್ನು ಸೇವಿಸಬಹುದು.

ಇದರಲ್ಲಿ ಅಪಾರ ಪ್ರಮಾಣದ ಪೊಟ್ಯಾಷಿಯಂ (Potassium) ಅಡಗಿದ್ದು ಮಧಮೇಹ ಹಾಗೂ ರಕ್ತದೊತ್ತಡವನ್ನು (Blood pressure) ನಿಯಂತ್ರಣದಲ್ಲಿಡುತ್ತದೆ. ಮೂಳೆಗಳ ಸಾಂದ್ರತೆ (Bone density) ಹಾಗೂ ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಇದರಲ್ಲಿ ಸ್ಯಾಚುರೇಟೆಡ್ (Saturated) ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇದೆ. ಬಂಗುಡೆ ಮೀನು ತಿನ್ನಲು ರುಚಿ ಹಾಗೂ ಆರೋಗ್ಯಕ್ಕೂ ಹಿತ.
ಬಂಗುಡೆ ಸಾರು ಮಾಡುವುದು ಹೇಗೆ?
ಮೀನು ಸಾರು ಮಾಡಲು ಬೇಕಾಗುವ ಸಾಮಗ್ರಿಗಳು
ಬಂಗುಡೆ -4, ಬ್ಯಾಡಗಿ ಮೆಣಸು -10 ರಿಂದ 12, ಗುಂಟೂರು ಮೆಣಸು 8 ರಿಂದ 9, ಅರ್ಧ ಹೋಳು ತೆಂಗಿನಕಾಯಿ, ನಿಂಬೆ ಹಣ್ಣು ಗಾತ್ರದ ಹುಣಸೆ ಹುಳಿ, 4-5 ಎಸಳು ಬೆಳ್ಳುಳ್ಳಿ ಒಂದು ಟೀ ಸ್ಪೂನ್ ಕೊತ್ತಂಬರಿ ಬೀಜ, ಹರಶಿನ ಪುಡಿ, ಮೆಂತ್ಯೆ, ಕರಿಮೆಣಸು, ಈರುಳ್ಳಿ 1, ಹಸಿ ಮೆಣಸಿನ ಕಾಯಿ 2, ಸಣ್ಣ ಗಾತ್ರದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ:ಉಷ್ಣತೆಯನ್ನು ಶಮನಗೊಳಿಸುವ ಬಾದಾಮ್ ಗೊಂದ್ ದೇಹಕ್ಕೆ ದಿವ್ಯೌಷಧಿ
ಮಾಡುವ ವಿಧಾನ: ಬಂಗುಡೆ ಮೀನನ್ನು ಕತ್ತರಿಸಿ ಚೆನ್ನಾಗಿ ತೊಳೆದಿಡಿ. ಮೇಲೆ ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಸಾಲೆಗೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಹೆಚ್ಚಿದ ಶುಂಠಿಯನ್ನು ಸೇರಿಸಿ. ಬಳಿಕ ಮಣ್ಣಿನ ಪಾತ್ರೆ ಅಥವಾ ಕಡಾಯಿಯಲ್ಲಿ ಮಸಾಲೆಯನ್ನು ಚೆನ್ನಾಗಿ ಕುದಿಸಿ. (Bangude fish: Delicious to eat) ಈ ವೇಳೆ ಉಪ್ಪು ಹಾಕಿ. ಹೀಗೆ ಕುದಿಯುತ್ತಿರುವಾಗ ಕತ್ತರಿಸಿದ ಮೀನನ್ನು ಹಾಕಿ. ಮತ್ತೆ ಮುಚ್ಚಳ ಮುಚ್ಚಿ ಚೆನ್ನಾಗಿ ಕುದಿಸಿ, ಮೀನು ಬೆಂದ ಬಳಿಕ ಕೆಳಗಿಳಿಸಿದರೆ ರುಚಿಯಾದ ಬಂಗುಡೆ ಮೀನು ಸಾರು ರೆಡಿ.