ಚೂಯಿಂಗ್ ಗಮ್ : ಸಿಂಗಾಪುರದಲ್ಲಿ, ಚೂಯಿಂಗ್ ಗಮ್ ಆಮದು ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ, ಆದ್ದರಿಂದ ಇದು ದೇಶದ ನಿವಾಸಿಗಳಿಗೆ ಲಭ್ಯವಿಲ್ಲ. 1992 ರಿಂದ ಈ ನಿಷೇಧ ಜಾರಿಯಲ್ಲಿದೆ.

ಹಳದಿ ಬಟ್ಟೆಗಳು : 2011 ರಲ್ಲಿ ಮಲೇಷ್ಯಾದಲ್ಲಿ ಹಳದಿ ಬಟ್ಟೆ ಧರಿಸುವುದನ್ನು ನಿಷೇಧಿಸಲಾಯಿತು. ಏಕೆಂದರೆ ಈ ಬಣ್ಣವು ಸರ್ಕಾರದ ಚುನಾವಣಾ ಹಕ್ಕುಗಳ ನೀತಿಗಳನ್ನು ಪ್ರತಿಭಟಿಸುವ ಕಾರ್ಯಕರ್ತರ ಗುಂಪಿನ ಬಣ್ಣವಾಗಿದೆ.
ಕೆಚಪ್ : ಫ್ರಾನ್ಸ್ ನಲ್ಲಿ, 2011 ರಿಂದ, ಕೆಚಪ್ ಬಳಕೆಯನ್ನು ಎಲ್ಲಾ ಶಾಲಾ ಮತ್ತು ವಿಶ್ವವಿದ್ಯಾಲಯಗಳ ಕ್ಯಾಂಟೀನ್ ಗಳಲ್ಲಿ ನಿಷೇಧಿಸಲಾಗಿದೆ. ಏಕೆಂದರೆ,
ಇದು ಸಾಂಪ್ರದಾಯಿಕ ಫ್ರೆಂಚ್ ಪಾಕಪದ್ಧತಿಯನ್ನು ವಿರೋಧಿಸುತ್ತದೆ ಮತ್ತು ಅಧಿಕ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ.

ಮಧ್ಯರಾತ್ರಿಯ ನಂತರ ಆನ್ಲೈನ್ ಆಟಗಳು : 2011 ರಲ್ಲಿ, ದಕ್ಷಿಣ ಕೊರಿಯಾ ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಕ್ಕಳು ಆನ್‌ಲೈನ್ ಆಟಗಳನ್ನು ಆಡುವುದನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಿತು.
ಆದರೆ 2013 ರಲ್ಲಿ ಈ ಕಾನೂನನ್ನು ಸಡಿಲಗೊಳಿಸಲಾಯಿತು, ಈ ವಿಷಯದ ಬಗೆಗಿನ ನಿರ್ಧಾರವನ್ನು ಪೋಷಕರಿಗೆ ಬಿಡಲಾಯಿತು.
ಇದನ್ನೂ ಓದಿ : https://vijayatimes.com/ed-collects-cd-mentioned-mamata-banerjee/
ಗಣಕಯಂತ್ರದ ಆಟಗಳು : ಹೀಗೆ ಕಂಪ್ಯೂಟರ್ ಆಟಗಳ ವಿರುದ್ಧ ಕೇವಲ ಚೀನಾ ಮಾತ್ರ ಕ್ರಮವನ್ನು ಕೈಗೊಂಡಿಲ್ಲ. ಕಂಪ್ಯೂಟರ್ ಪೈರಸಿಯನ್ನು ಎದುರಿಸಲು ಗ್ರೀಸ್ ಕೂಡ ಇದೇ ರೀತಿಯ ನಿಷೇಧವನ್ನು ಜಾರಿಗೊಳಿಸಿತ್ತು.
ಆದರೆ 2003 ರಿಂದ, ಈ ನಿಷೇಧವನ್ನು ಸಡಿಲಗೊಳಿಸಲಾಗಿದೆ. ಅಂದಿನಿಂದ, ಇಂಟರ್ನೆಟ್ (Banned Laws In other Countries) ಕೆಫೆಗಳನ್ನು ಮಾತ್ರ ನಿಷೇಧಿಸಲಾಗಿದೆ.

ಕ್ಲಬ್‌ಗಳಲ್ಲಿ ನೃತ್ಯ: ಜಪಾನ್‌ನಲ್ಲಿ, ಮಧ್ಯರಾತ್ರಿಯ ನಂತರ (Banned Laws In other Countries) ಕ್ಲಬ್‌ಗಳಲ್ಲಿ ನೃತ್ಯ ಮಾಡುವುದನ್ನು ನಿಷೇಧಿಸಲಾಗಿದೆ ಎನ್ನುವ ವಿಷಯದಲ್ಲಿ ಕೆಲವೇ ಜನರಿಗೆ ತಿಳಿದಿದೆ.
ಬೆಳಕು ಕೊಡುವ ಬಲ್ಬ್ ಅನ್ನು ಬದಲಾಯಿಸುವುದು : ಆಸ್ಟ್ರೇಲಿಯಾದ ಅತ್ಯಂತ ಜನನಿಬಿಡ ರಾಜ್ಯಗಳಲ್ಲಿ ಒಂದಾದ ವಿಕ್ಟೋರಿಯಾದಲ್ಲಿ, ವೃತ್ತಿಪರ ಎಲೆಕ್ಟ್ರಿಷಿಯನ್ ಅಲ್ಲದೆ ಬೇರೆ ಯಾರಾದರೂ ಸುಟ್ಟುಹೋದ ಬೆಳಕಿನ ಬಲ್ಬ್ ಅನ್ನು ಬದಲಾಯಿಸುವುದು ಕಾನೂನುಬಾಹಿರ ಎಂದೇ ಪರಿಗಣಿಸಲಾಗಿದೆ.

ಆಲ್ಕೊಹಾಲ್ ಯುಕ್ತ ಪಾನೀಯಗಳ ಜಾಹೀರಾತು : 1990 ರಿಂದ, ಭಾರತದಲ್ಲಿ ಆಲ್ಕೊಹಾಲ್ ಯುಕ್ತ ಪಾನೀಯಗಳ ಜಾಹೀರಾತನ್ನು ನಿಷೇಧಿಸಲಾಗಿದೆ.
ಸಮಯ ಪ್ರಯಾಣದ ಕುರಿತಾಗಿರುವ ಚಲನಚಿತ್ರಗಳು ಮತ್ತು ಪ್ರದರ್ಶನಗಳು : ಸಮಯ ಪ್ರಯಾಣ ಸಾಧ್ಯವಿಲ್ಲ ಎಂಬ ವಾಸ್ತವದ ಹೊರತಾಗಿಯೂ, ಈ ಕಲ್ಪನೆಯು ಒಂದು ಕಾಲದಲ್ಲಿ ಚೀನೀ ದೂರದರ್ಶನದಲ್ಲಿ ಬಹಳ ಜನಪ್ರಿಯವಾಗಿತ್ತು.
https://youtu.be/W2PNMvtfaoo PROMO | ಆಸ್ಪತ್ರೆಯಲ್ಲಾ ಲಂಚಕೂಪ!
ಚೀನೀ ಅಧಿಕಾರಿಗಳ ಪ್ರಕಾರ, ಇಂತಹ ಕಾರ್ಯಕ್ರಮಗಳು ಇತಿಹಾಸವನ್ನು ತಿರುಚುತ್ತಿದ್ದವು. ಹಾಗಾಗಿ ಅವುಗಳನ್ನು ನಿಷೇಧಿಸಲಾಗಿದೆ, ಹಾಗೂ ಈ ನಿಷೇಧ ಇನ್ನೂ ಜಾರಿಯಲ್ಲಿದೆ.
- ಪವಿತ್ರ