• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ನೆನಪಾಗಿ ಉಳಿದ ಬಪ್ಪಿ ಲಹರಿ ಅವರ ಕೊಡುಗೆಗಳು ಏನು ಗೊತ್ತಾ?

Mohan Shetty by Mohan Shetty
in ದೇಶ-ವಿದೇಶ, ಪ್ರಮುಖ ಸುದ್ದಿ
bappi lehari
0
SHARES
0
VIEWS
Share on FacebookShare on Twitter

2022 ವರ್ಷಕ್ಕೆ ಕಾಲಿಟ್ಟರು ಕೂಡ ಸಾವು-ನೋವುಗಳು ಮಾತ್ರ ಕಡಿಮೆಯಾಗಿಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಎಲ್ಲರನ್ನು ಕಳೆದುಕೊಳ್ಳುತ್ತಾ ಬರ್ತಾ ಇದ್ದೀವಿ. ಒಳ್ಳೆಯ ಕಲಾವಿದರನ್ನು ಬಹು ಬೇಗ ಬೇಗ ಕಳಿಸಿಕೊಡುವ ಸಂದರ್ಭ ಬಂದಂತಾಗಿದೆ. ಅದರಲ್ಲೂ ಬಾಲಿವುಡ್ ಗಂತೂ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಲೇ ಇದೆ ಎನ್ನಬಹುದು. ಇನ್ನು ಮೊನ್ನೆಯಷ್ಟೇ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಕಳೆದುಕೊಂಡಿರುವ ನೋವು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಮತ್ತೊಂದು ಅಪಘಾತ ಬಾಲಿವುಡ್ ಮಂದಿಯನ್ನು ಮತ್ತಷ್ಟು ದುಖಃದ ಸಮಯಕ್ಕೆ ತಳ್ಳಿದೆ.

 Bappi Lahiri

ಖ್ಯಾತ ಗಾಯಕ, ಸಂಗೀತ ಸಂಯೋಜಕ, ಡಿಸ್ಕೊ ಕಿಂಗ್ ಎಂದು ಹೆಸರು ಮಾಡಿದ್ದ ಬಪ್ಪಿ ಲಹರಿ ಇಂದು ನಿಧನರಾಗಿದ್ದಾರೆ. ಇದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಹಾಗಿದ್ರೆ ಬಪ್ಪಿ ಲಹರಿ ಅವರ ಸಾಧನೆ ಹಾಗೂ ಅವರ ಬಾಲ್ಯ ಹೇಗಿತ್ತು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಬಾಲಿವುಡ್ ,ಟಾಲಿವುಡ್ ಸ್ಯಾಂಡಲ್ ವುಡ್ ,ಕಾಲಿವುಡ್ ಸೇರಿದಂತೆ ಹಲವೆಡೆ ಬಪ್ಪಿ ಲಹರಿ ಕೆಲಸ ಮಾಡಿರುವ ಅತ್ಯಂತ ಪ್ರಭಾವಿತ ಹಾಡುಗಾರ. ಅದರಲ್ಲೂ ತಮ್ಮದೇ ಆದ ಛಾಪನ್ನು ಈ ಗಾಯಕ ಮೂಡಿಸಿದ್ದರು. ಆದರೆ ಮಂಗಳವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಇದಕ್ಕೆ ಇಡೀ ಭಾರತವೇ ಕಂಬನಿ ಮಿಡಿದಿದೆ.

ಬಪ್ಪಿ ಲಹರಿ 1970-80ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ ಹಾಡುಗಾರ. ಇವರು ಬಾಲಿವುಡ್ ಸಂಗೀತ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 1970-80ರ ದಶಕದಲ್ಲಿ ಸದ್ದು ಮಾಡಿದ ಡಿಸ್ಕೋ ಡ್ಯಾನ್ಸರ್, ಶರಾಬಿ ಮುಂತಾದ ಹಾಡುಗಳಿಗೆ ತಮ್ಮ ಕಂಠವನ್ನು ದಾನ ಮಾಡಿದ್ದಾರೆ ಹಾಗೂ ಜನರ ಮೆಚ್ಚುಗೆ ಮತ್ತು ಪ್ರೀತಿಯನ್ನು ಗಳಿಸಿದ ಹೆಸರಾಂತ ಹಾಡುಗಾರರಾಗಿ ಹೊರಹೊಮ್ಮಿದವರು. ಅದರಲ್ಲೂ 2020ರಲ್ಲಿ ಬಿಡುಗಡೆ ಗೊಂಡ ಬಾಗಿ ಥ್ರೀನಲ್ಲಿ ಕೂಡ ಇವರು ಹಾಡಿದ್ದಾರೆ.

ಬಪ್ಪಿ ಲಹರಿ ಅವರ ಬಾಲ್ಯದ ದಿನಗಳು :

Bappi Lahiri

ಬಪ್ಪಿ ಲಹರಿ ಅವರು ನವೆಂಬರ್ 27, 1952 ರಲ್ಲಿ ಬಂಗಾಳದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ಅಲೋಕೇಶ್ ಲಹರಿ. ಇವರ ತಂದೆ ಒಬ್ಬ ಬಂಗಾಲಿಯ ಪ್ರಸಿದ್ಧ ಗಾಯಕ ಮತ್ತು ಅವರ ತಾಯಿ ಬನ್ಸಾರಿ ಲಹರಿ ಕೂಡ ಅತ್ಯುತ್ತಮ ಸಂಗೀತ ಗಾಯಕರಾಗಿದ್ದರು ಮತ್ತು ಶಾಸ್ತ್ರೀಯ ಸಂಗೀತ ಶ್ಯಾಮ ಸಂಗೀತದಲ್ಲಿ ಪಾರಂಗತರಾದವರು. ಒಬ್ಬನೇ ಮಗನಾದ ಬಪ್ಪಿ ಅವರಿಗೆ ತಂದೆ, ತಾಯಿ ಇಬ್ಬರೂ ಸಂಗೀತದ ಪ್ರತಿಯೊಂದು ವಿಷ್ಯದಲ್ಲೂ ತರಬೇತಿ ನೀಡಿದ್ದರು. ಬಪ್ಪಿ ಲಹರಿ ತಮ್ಮ ಮೂರನೆಯ ವಯಸ್ಸಿನಲ್ಲಿಯೇ ತಬಲವನ್ನು ನುಡಿಸಲು ಪ್ರಾರಂಭಿಸಿದರು. ಇದರಲ್ಲಿ ಅವರು ಸಾಕಷ್ಟು ಪರಿಣಿತಿಯನ್ನು ಕೂಡ ಹೊಂದಿದ್ದರು. ಇವರು ದಾದಾ ಎನ್ನುವ ಬಂಗಾಲಿ ಚಲನಚಿತ್ರಕ್ಕೆ ಮೊದಲ ಅವಕಾಶವನ್ನು ತಮ್ಮದಾಗಿಸಿಕೊಂಡರು ಮತ್ತು ಇವರು ಸಂಗೀತ ಸಂಯೋಜನೆ ಮೊದಲ ಈ ಚಲನಚಿತ್ರ ನನ್ಹಾ ಶಿಕಾರಿ.

ಬಪ್ಪಿ ಲಹರಿ ಅವರ ಸಾಧನ :

Bappi Lahiri

ಬಪ್ಪಿ ಲಹರಿ ಅವರ ವೃತ್ತಿಜೀವನ 1973 ರಲ್ಲಿ ಪ್ರಾರಂಭವಾಗಿ ಹಲವಾರು ಹೃದಯಗಳನ್ನು ಗೆದ್ದಿದ್ದಾರೆ ಮತ್ತು ಅನೇಕ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇವರು 1982 ರಿಂದ 2018ರ ನಡುವೆ 6 ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಅತ್ಯುತ್ತಮ ಸಂಗೀತ ನಿರ್ದೇಶಕನಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಇವರ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಅರ್ಮಾನ್ ಸಿನಿಮಾಗೆ 1982 ರಲ್ಲಿ ಲಭಿಸಿತ್ತು. ತದನಂತರ 1983 ರಲ್ಲಿ ಮತ್ತೊಮ್ಮೆ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ನಾಮಿನೆಟ್ ಗೊಂಡರು. 1985 ರಲ್ಲಿ ಶರಾಬಿ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ತನ್ನ ಮೊದಲ ಫಿಲಂಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Bappi Lahiri

ನಂತರದ ವರ್ಷಗಳಲ್ಲಿ ಕಸಂ ಪೈದಾ , ಕರ್ಣನೆ ವಾಲೆರೆ, ಆಜ್ ಕಾ ಅರ್ಜುನ್ ಚಿತ್ರಕ್ಕೆ ಅತ್ಯುತ್ತಮ ಗಾಯಕನೆಂದು ನಾಮನಿರ್ದೇಶನಗೊಂಡರು. 2018 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಅವರಿಗೆ ಗೌರವಿಸಲಾಯಿತು. ಅವರು ದಿ ಡರ್ಟಿ ಪಿಕ್ಚರ್ ಊಲಾಲ ಹಾಡಿಗೆ ವರ್ಷದ ಅತ್ಯುತ್ತಮ ಐಟಂ ಸಾಂಗ್ ಗೆದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅನೇಕ ಚಲನಚಿತ್ರ ನಟ-ನಟಿಯರು ಟ್ವೀಟ್ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇಡೀ ಬಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎದುರಾಗಿದೆ ಎಂದೇ ಹೇಳಬಹುದು.

  • ಪ್ರೀತು ಮಹೇಂದರ್
Tags: bappilehariBollywoodmusiciansaddemisesinger

Related News

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !
ದೇಶ-ವಿದೇಶ

ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.