ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತಿಂದಾಗಿ (Atmospheric pressure drop) ದೇಶದ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ದಕ್ಷಿಣ ಭಾರತ,(South India) ಕರ್ನಾಟಕದಲ್ಲಿ ಈಗಾಗಲೇ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಇನ್ನು ಮುಂದಿನ 24 ಗಂಟೆ ತಮಿಳುನಾಡು, ಆಂಧ್ರಪ್ರದೇಶದ ವಿಜಯನಗರ, ವಿಶಾಖಪಟ್ಟಣಂ, ಅನಕಾಪಲ್ಲಿ, (Tamil Nadu, Vijayanagara, Visakhapatnam, Anakapally in Andhra Pradesh) ಕಾಕಿನಾಡ ಜಿಲ್ಲೆಗಳು, ಶ್ರೀಕಾಕುಳಂ, ಅಲ್ಲೂರಿ ಸೀತಾರಾಮರಾಜು, (Kakinada Districts, Srikakulam, Alluri Sitharamaraju,) ಕೋನಸೀಮಾದಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದು ಹಾಗೂ ನಾಳೆ ಕರ್ನಾಟಕದ ಕರಾವಳಿ (Coast of Karnataka) ಭಾಗ ಸೇರಿ ಹಲವೆಡೆ ಭಾರೀ ಮಳೆಯಾಗಲಿದೆ. ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಚಾಮರಾಜನಗರ ಜಿಲ್ಲೆಗಳಲ್ಲಿ (Bengaluru, Kolar, Bangalore Rural, Ramanagara and Chamarajanagar districts) ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಇಂದಿನಿಂದ 2 ದಿನಗಳ ಕಾಲ ಚಳಿ ಹೆಚ್ಚಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 55 ಕಿ.ಮೀ ವೇಗದಲ್ಲಿ (Speed of 55 kmph) ಗಾಳಿ ಬೀಸಲಿದೆ. ಈ ಸಮಯದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಭಾನುವಾರದವರೆಗೆ ಮೀನುಗಾರಿಕೆಗೆ (Fishing) ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಅತ್ತ ಜಮ್ಮು- ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ (Atta in Jammu-Kashmir, Himachal Pradesh and Ladakh) ಕನಿಷ್ಠ ತಾಪಮಾನ ಶೂನ್ಯ ಡಿಗ್ರಿಗಿಂತ ಕಡಿಮೆ ದಾಖಲಾಗುತ್ತಿದೆ. ಪಂಜಾಬ್, ಹರಿಯಾಣ, ಉತ್ತರ ರಾಜಸ್ಥಾನ ಮತ್ತು ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ (Punjab, Haryana, North Rajasthan and Madhya Pradesh, Uttar Pradesh) ಕನಿಷ್ಠ ತಾಪಮಾನವು 0-6 ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದರೆ, ವಾಯುವ್ಯ ಭಾರತ, ಮಧ್ಯ ಮತ್ತು ಪಶ್ಚಿಮ ಭಾರತದ ಉಳಿದ ಭಾಗಗಳಲ್ಲಿ ಇದು 6-12 ಡಿಗ್ರಿಗಳ ನಡುವೆ ಇದೆ.