ಬಿಜೆಪಿ ಸರ್ಕಾರವು(BJP Government) ಸಾಕ್ಷರರ ನಾಡನ್ನು ಕಟ್ಟುವ ಮಹೋನ್ನತ ಕನಸನ್ನು ಹೊತ್ತಿದೆ. 2017-18ರ ಸಾಲಿನಲ್ಲಿದ್ದ ಕಾಂಗ್ರೆಸ್ ಸರ್ಕಾರ(Congress Government) ನೀಡಿದ್ದು 20,008 ಕೋಟಿ ರೂ. ಆದರೆ ಬೊಮ್ಮಾಯಿ ಸರಕಾರ ಶೈಕ್ಷಣಿಕ ಹೊಂಗನಸನ್ನು ನನಸು ಮಾಡಲು 31,980 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಬಿಜೆಪಿಗಿರುವ ಶೈಕ್ಷಣಿಕ ಬದ್ಧತೆಯ ಪ್ರತೀಕ ಎಂದು ಬಿಜೆಪಿ(BJP) ಹೇಳಿದೆ.
ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ, ಮಕ್ಕಳ ಶಾಲಾ ಸಮವಸ್ತ್ರವನ್ನೂ ಬಿಡದೆ ಹಗರಣ ಮಾಡಿದ ಕಾಂಗ್ರೆಸ್ ಈಗ ಮಳ್ಳಾಟ ಆಡುವುದನ್ನು ರಾಜ್ಯದ ಜನತೆ ಗಮನಿಸುತ್ತಿದೆ. ಮಕ್ಕಳ ಶಾಲಾ ಸಮವಸ್ತ್ರಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ 11.33 ಕೋಟಿ ರೂ.ಗಳನ್ನೂ ದೋಚಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಕೈಪಕ್ಷದ ನಾಯಕರು ಮರೆಯಬಾರದು ಎಂದು ವ್ಯಂಗ್ಯವಾಡಿದೆ. ಈ ಹಿಂದೆ ಬಿಎಸ್‌ವೈ(BSY) ಸರ್ಕಾರ ಹೆಣ್ಣು ಮಕ್ಕಳಿಗೆ ಸೈಕಲ್ ನೀಡಿತ್ತು. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರಿ ಶಾಲಾ ಬಸ್ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಬೊಮ್ಮಾಯಿ ಸರ್ಕಾರ.
ಈ ನಡೆಯಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಅಸಮತೋಲನ ನಿವಾರಣೆಯಾಗಲಿದೆ. “ಬೇಟಿ ಬಚಾವೋ ಬೇಟಿ ಪಢಾವೋ” ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ(Narenedra Modi) ಅವರು ಆದ್ಯತೆ ನೀಡಿದರು. ಅದೇ ಹಾದಿಯಲ್ಲಿ ಸಾಗಿರುವ ಬೊಮ್ಮಾಯಿ ನೇತೃತ್ವದ ಸರ್ಕಾರ ಬಜೆಟ್‌ನ ಶೇ.12ರಷ್ಟು ಪಾಲನ್ನು ಶೈಕ್ಷಣಿಕ ಅಭಿವೃದ್ಧಿಗೆ ನೀಡುವ ಮೂಲಕ ಶಾಲಾಮಕ್ಕಳ ಹಿತ ಕಾಪಾಡುತ್ತಿದೆ. ಶಾಲಾಮಕ್ಕಳ ವಿದ್ಯಾಭ್ಯಾಸ ಸುಗಮವಾಗಿ ಸಾಗಲು ಶೂ-ಸಾಕ್ಸ್ ವಿತರಣೆಗೆ 132 ಕೋಟಿ ರೂ. ಅನುಮೋದನೆ ನೀಡಿದೆ ನಮ್ಮ ಸರ್ಕಾರ.
ಶಾಲಾಭಿವೃದ್ಧಿ, ಮೇಲ್ವಿಚಾರಣಾ ಸಮಿತಿಗಳ ಮೂಲಕ ರಾಜ್ಯದ ಮಕ್ಕಳಿಗೆ ಶೂ, ಸಾಕ್ಸ್ ತಲುಪಿಸುತ್ತಿರುವುದು ಬೊಮ್ಮಾಯಿ ಸರಕಾರ. ರಾಜ್ಯದ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ 2022-23ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (ಎಸ್‌ಡಿಎಂಸಿ) ಮೂಲಕ ‘ಶೂ ಮತ್ತು ಸಾಕ್ಸ್’ ಖರೀದಿಸಿ, ವಿತರಿಸಲು ರಾಜ್ಯ ಸರ್ಕಾರ ₹ 132 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಹೇಳಿದೆ.