- ಬಿಬಿಎಂಪಿ (BBMP) ಇಂದ ಫೆಲೋಶಿಪ್, ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ (Invitation to apply)
- ಒಂದು ವರ್ಷದ ಅವಧಿಗೆ ಎರಡು ವಿವಿಧ ಹುದ್ದೆಗಳಿಗೆ (Various posts) ಅರ್ಜಿ ಆಹ್ವಾನ
- ಆನ್ಲೈನ್ ಮೂಲಕ ಅರ್ಜಿ (Apply online) ಸಲ್ಲಿಸಬಹುದಾಗಿದೆ (BBMP calls for job)
Bengaluru: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಬೆಂಗಳೂರು ಹವಾಮಾನ ಕ್ರಿಯಾ ಕೋಶದ (Climate Action Cell) ಫೆಲೋಶಿಪ್ ಹುದ್ದೆಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಮುಖ್ಯ ಆಯುಕ್ತರ (Chief Commissioner) ಪರವಾಗಿ ಹವಾಮಾನ ಕ್ರಿಯಾ ಕೋಶ (CAC) ದಲ್ಲಿ ಹವಾಮಾನ ಬದಲಾವಣೆ ಮತ್ತು ನಗರ ಆಡಳಿತದ ಬಗ್ಗೆ ಆಸಕ್ತಿ ಹೊಂದಿರುವ ಉಜ್ವಲ ಮನಸ್ಸಿನ (Bright minded) ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ನಿಜ ಜೀವನದ (Real life) ಸವಾಲುಗಳನ್ನು ಪರಿಹರಿಸಲು ಹೊಸ ದೃಷ್ಟಿಕೋನಗಳು, ಕೌಶಲ್ಯಗಳು (Perspectives, skills) ಮತ್ತು ನಾವೀನ್ಯತೆಯನ್ನು ತರಬಲ್ಲ (Innovative) ವ್ಯಕ್ತಿಗಳನ್ನು ತೊಡಗಿಸಿಕೊಳ್ಳಲು ಹವಾಮಾನ ಕ್ರಿಯಾ ಕೋಶವು (Action cell) ಪ್ರಯತ್ನಿಸುತ್ತದೆ. ಈ ಹಿನ್ನೆಲೆಯಲ್ಲಿ, ಈ ಕೆಳಗಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು (Applications are invited) , ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವವರು ಕಂಪ್ಲೀಟ್ ಡೀಟೇಲ್ಸ್ ಅನ್ನು ಕೆಳಗಿನಂತೆ ತಿಳಿದು, ಆನ್ಲೈನ್ ಮೂಲಕ ಅರ್ಜಿ (Apply online) ಸಲ್ಲಿಸಿ. ಅರ್ಜಿಗೆ ಡೈರೆಕ್ಟ್ ವೆಬ್ ಲಿಂಕ್ ನೀಡಲಾಗಿದೆ.
ನೇಮಕಾತಿ ಪ್ರಾಧಿಕಾರ (Appointing Authority) : ಬೃಹತ್ ಬೆಂಗಳೂರು ಮಹಾನಗರ ಪಾಲಿಕ
ಹುದ್ದೆ ಹೆಸರು: ಫೆಲೋ-ಎಂ.ಇ.ಆರ್, ಹವಾಮಾನ ಆಯವ್ಯಯ (MER, climate budget) (1 ಹುದ್ದೆ), ಸಲಹೆಗಾರ ಸಂವಹನ ಮತ್ತು ಪ್ರಚಾರ (1 ಹುದ್ದೆ
ಫೆಲೋಶಿಪ್ ಹುದ್ದೆ ಅರ್ಹತೆ: ನಗರ ಯೋಜನೆ / ಇಂಜಿನಿಯರಿಂಗ್ (Engineering) / ಮ್ಯಾನೇಜ್ಮೆಂಟ್ / ಟೆಕ್ನಾಲಜಿ / ಅರ್ಥಶಾಸ್ತ್ರ / ನಗರ ಅಧ್ಯಯನ (Urban studies) / ಸಾರ್ವಜನಿಕ ನಿಯಮಗಳು / ಪರಿಸರ ಅಧ್ಯಯನ ಅಥವಾ ತತ್ಸಮಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜತೆಗೆ, ಕನಿಷ್ಠ ಒಂದು ವರ್ಷ ಕಾರ್ಯಾನುಭವ (Years of work experience) ಹೊಂದಿರಬೇಕು.
ಸಲಹೆಗಾರ ಹುದ್ದೆಗೆ ಅರ್ಹತೆ: ಸಂವಹನ, ಪಬ್ಲಿಕ್ ರಿಲೇಶನ್, ಪತ್ರಿಕೋದ್ಯಮ (Journalism) , ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ (Graduate Education) ಪಡೆದಿರಬೇಕು. ಒಂದು ವರ್ಷ ಕನಿಷ್ಠ ಕಾರ್ಯಾನುಭವ (Minimum work experience) ಪಡೆದಿರಬೇಕು.
ವಯಸ್ಸಿನ ಅರ್ಹತೆಗಳು: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕಕ್ಕೆ ಗರಿಷ್ಠ 35 ವರ್ಷ ವಯಸ್ಸು (35 years old) ಮೀರಿರಬಾರದು.

ಹುದ್ದೆಯ ಅವಧಿ: 12 ತಿಂಗಳ
ಮಾಸಿಕ ವೇತನ: ರೂ.50,000
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 04-04-2025
ಸೇವೆಯ ದಿನಾಂಕ ಆರಂಭ: 15 – 05-2025
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು : ಆಧಾರ್ ಕಾರ್ಡ್ (Aadhaar card) , ಎಸ್ಎಸ್ಎಲ್ಸಿ ಅಂಕಪಟ್ಟಿ / ಜನ್ಮ ದಿನಾಂಕ ದಾಖಲೆ (Date of Birth Record) ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ,ಒಂದು ವರ್ಷ ಕನಿಷ್ಠ ಕಾರ್ಯಾನುಭವದ ದಾಖಲೆ,ಇಮೇಲ್ ವಿಳಾಸ (Email address) ,ಮೊಬೈಲ್ ನಂಬರ್ ಇತರ ಬೇಸಿಕ್, ವೈಯಕ್ತಿಕ ಮಾಹಿತಿಗಳು
12 ತಿಂಗಳ ಅವಧಿಯ ಈ ಹುದ್ದೆಗಳಿಗೆ, ತಿಂಗಳಿಗೆ ರೂ.50,000 ವೇತನವನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು (Selected candidates) ಹವಾಮಾನ ಕ್ರಿಯಾ ಕೋಶ (CAC) ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುವುದರ ಜೊತೆಗೆ ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ (BCAP) ಅನುಷ್ಠಾನಕ್ಕೆ ಕೊಡುಗೆ ನೀಡಬಹುದಾಗಿದೆ.
ಇನ್ನು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://apps.bbmpgov.in/bcap/ ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು (Can apply) ಮತ್ತು ನಿಗದಿತ ಪ್ರಕ್ರಿಯೆಯನ್ನು ಅನುಸರಿಸಬೇಕು. ವಿವರವಾದ ಮಾಹಿತಿ ಮತ್ತು ಮಾರ್ಗಸೂಚಿಗಳು ಪೋರ್ಟಲ್ನಲ್ಲಿ ಲಭ್ಯವಿದೆ (Available on the portal) .ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 30, 2025 ಆಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಮೇ 15, 2025 ರಿಂದ ಸೇವೆ ಪ್ರಾರಂಭಿಸಬಹುದಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಇಮೇಲ್ bbmpclimateactioncell@gmail.com ಗೆ ಸಂದೇಶ ಕಳುಹಿಸಬಹುದು.ಅರ್ಜಿ ಸಲ್ಲಿಸಿದವರಿಗೆ ಅರಣ್ಯ ಇಲಾಖೆ (BBMP calls for job) ವಿಶೇಷ ಕಮಿಷನರ್ (Special Commissioner, Forest Department) ರವರು ಸಂದರ್ಶನ ನಡೆಸಿ ಆಯ್ಕೆ ಮಾಡಲಿದ್ದಾರೆ.