7 ಪಾಲಿಕೆಗಳಾಗಿ ವಿಭಜನೆಯಾದ ಬಿಬಿಎಂಪಿ (BBMP divided into 7 corporations)
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆ
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಪರಿಶೀಲನೆ
Bangalore: ಬೆಂಗಳೂರಿನಲ್ಲಿ ಆಡಳಿತ ಸುಧಾರಣೆ ಮಾಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (The Greater Bengaluru Municipal Corporation) 7 ಪಾಲಿಕೆಗಳನ್ನಾಗಿ ಬೇರ್ಪಡಿಸಲಾಗುವುದು,ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವುದರ ಜೊತೆಗೆ ಅನೇಕ ಮಹತ್ವದ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ವಿಧಾನಸಭೆಯಲ್ಲಿ (Assembly) ಮಂಡಿಸಲಾಯಿತು.
ಶಿವಾಜಿನಗರ ಕ್ಷೇತ್ರದ (Shivajinagar Constituency) ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿ 2024 ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಶೀಲಿಸಲು ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯನ್ನು (Joint Scrutiny Committee of the Karnataka Legislative Assembly) ರಚಿಸಲಾಗಿತ್ತು.
ವರದಿಗಳ ಪ್ರಕಾರ ಪ್ರಕಾರ ಗ್ರೇಟರ್ ಬೆಂಗಳೂರು (Greater Bangalore) ಪ್ರಾಧಿಕಾರ ಕಾಯಿದೆ ಅಧಿಸೂಚನೆ ಜಾರಿಯಾದ ತಕ್ಷಣ ಅನುಷ್ಟಾನಗೊಳ್ಳಲಿದೆ.ಬೆಂಗಳೂರಿನಲ್ಲಿ 7 ಕ್ಕೂ ಹೆಚ್ಚು ಮಹಾನಗರ ಪಾಲಿಕೆಗಳಿರಬೇಕು ಎಂದು ಶಿಫಾರಸ್ಸಿನ ಮೇರೆಗೆ ಸಲಹೆ ನೀಡಲಾಗಿದೆ.ಪ್ರತಿ ಪಾಲಿಕೆಯೂ ಕನಿಷ್ಠ 10 ಲಕ್ಷ ಜನಸಂಖ್ಯೆಯನ್ನು ಹೊಂದಿರಬೇಕು.
ಸ್ಥಳೀಯ ಆಡಳಿತದಿಂಧ ವರ್ಷಕ್ಕೆ ಗರಿಷ್ಠ 300 ಕೋಟಿಗೂ ಹೆಚ್ಚಿನ ಆದಾಯವಿರಬೇಕು. ಕೃಷಿಯೇತರ ಚಟುವಟಿಕೆಗಳ (Non-agricultural activities) ಉದ್ಯೋಗ ಪ್ರಮಾಣ ಶೇ.50 ಕ್ಕಿಂತಲೂ ಕಡಿಮೆ ಇರಬಾರದು ಎಂದು ಉಲ್ಲೇಖಿಸಲಾಗಿದೆ.

ಗ್ರೇಟರ್ ಬೆಂಗಳೂರು ಮಾಡಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶವನ್ನೂ ಸೇರ್ಪಡೆ ಮಾಡಬಹುದು.ಬಿಬಿಎಂಪಿ ಪಾಲಿಕೆಗಳಿಗೆ ಅಧಿಕಾರಿಗಳು ಇರಲಿದ್ದು,ಅಧಿಕಾರಿಗಳ ಅಧಿಕಾರಾವಧಿ 5 ವರ್ಷ ಆಗಿರಲಿದೆ.ಮುಖ್ಯಮಂತ್ರಿಗಳ (Chief Ministers) ಸಮ್ಮುಖದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ.
ಅದರ ಕೆಳಗೆ ಮಹಾನಗರ ಪಾಲಿಕೆಗಳಿರಲಿದ್ದು, ಮೇಯರ್, ಆಯುಕ್ತರು, ಜಂಟಿ ಆಯುಕ್ತರು. ಸ್ಥಾಯಿ ಸಮಿತಿ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲಾಗುತ್ತದೆ. ಬೆಂಗಳೂರು ನಗರಾಭಿವೃದ್ಧಿ (Bangalore Urban Development Corporation) ಸಚಿವರು ಗ್ರೇಟರ್ ಬೆಂಗಳೂರಿನ ಉಪಾಧ್ಯಕ್ಷರಾಗಿರಲಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹೆಸರಲ್ಲಿ BESCOM ಸುಲಿಗೆ: ವಿದ್ಯುತ್ ಸ್ಮಾರ್ಟ್ ಮೀಟರ್ ದರದಲ್ಲಿ ಡಬ್ಬಲ್ ಏರಿಕೆ
ಏಳು ನಿಗಮಗಳಲ್ಲಿ ಪ್ರತಿಯೊಂದೂ ಸಮಾನ ಸಂಖ್ಯೆಯ ವಾರ್ಡ್ಗಳನ್ನು ಹೊಂದಿರಬೇಕು ಮತ್ತು ಒಂದು ನಿಗಮವು 100 ಕ್ಕಿಂತ ಹೆಚ್ಚು ವಾರ್ಡ್ಗಳನ್ನು (More wards) ಹೊಂದಿರಬಾರದು ಎಂದು ಸಮಿತಿ ಒತ್ತಿ ಹೇಳಿದೆ.
ಸಮುದಾಯದ ಭಾಗವಹಿಸುವಿಕೆಯನ್ನು ಸುಲಭಗೊಳಿಸಲು ವಾರ್ಡ್ ಸಮಿತಿಗಳನ್ನು ಸಬಲೀಕರಣಗೊಳಿಸಬೇಕು ಮತ್ತು ನಗರ ಆಡಳಿತದ ಮೂಲ ಘಟಕಗಳನ್ನಾಗಿ ಮಾಡಬೇಕು ಎಂದು ತಿಳಿಸಲಾಗಿದೆ.ಕಾಮಗಾರಿಗಳಿಗೆ ಸರ್ಕಾರ ನಿಗದಿ (BBMP divided into 7 corporations) ಪಡಿಸುವ ಅನುದಾನವನ್ನು ಬೆಂಗಳುರು ಪ್ರಾಧಿಕಾರ ಬಿಡುಗಡೆ ಮಾದಬೇಕು ಎಂದು ಶಿಫಾರಸು ಮಾಡಲಾಗಿದೆ.