Henceforth, Bengaluru Residents must follow this rule before throwing ‘Garbage’: BBMP order
Bengaluru: ಬೆಂಗಳೂರು ಮಹಾನಗರದಲ್ಲಿ ಪ್ರತಿ ನಿತ್ಯವೂ 6 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ಹಾಗಾಗಿ ಕಸದ ವಿಲೇವಾರಿ ಎನ್ನುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೆಂಗಳೂರು ನಿವಾಸಿಗಳಿಗೆ ಮೊದಲಿನಿಂದಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಸಹ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಲ್ಲೇ ಇದೆಯಾದರೂ ಕೆಲವರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬಿಡ್ತಿಲ್ಲ.
ಪಾಲಿಕೆಯ ಕೆಲವು ಕಸ ಸಂಗ್ರಹಕಾರರು ಸಹ ಮಿಕ್ಸ್ ಮಾಡಿ ಕಸ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಇದೆ. ಇದೀಗ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕಸ ವಿಲೇವಾರಿಯ ಬಗ್ಗೆ ಸ್ಟ್ರಾಂಟ್ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಹಸಿ ಕಸ, ಒಣ ಕಸ ಬೇರೆ ಬೇರೆ ಕೊಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು ಈ ರೀತಿ ಕಸ ಎಸೆಯುವವರು ಕಂಡರೆ ಕೂಡಲೇ ತಡೆಯಿರಿ.
ಹಸಿ ಕಸ ಹಾಗೂ ಒಣಕಸವನ್ನು ಪ್ರತ್ಯೇಕ ಮಾಡಿ ಕೊಡುವುದು ಸೇರಿದಂತೆ ಸ್ವಚ್ಛತಾ ಕೆಲಸಕ್ಕೆ ಲಿಂಕ್ ವರ್ಕರ್ಸ್‌ಗಳು (Link Workers) ಮನೆ ಮನೆ ಭೇಟಿ ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸಿ, ಯಾವುದೇ ಕಾರಣಕ್ಕೂ ಕಸ ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಎಸೆಯಬಾರದು ಎಂದು ವಾರ್ನ್ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿಯೂ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಪುಲ್ ಕ್ಲೀನ್ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ನಗರದ ರಸ್ತೆ ಬದಿ ಕಸ ಬಿಸಾಡುವುದನ್ನು ತಪ್ಪಿಸಬೇಕು.
ರಸ್ತೆ ಬದಿ ಕಸ ಬಿಸಾಡದೆ ಮನೆಗಳ ಬಳಿ ಬರುವ ಆಟೋಟಿಪ್ಪರ್‌ಗಳಿಗೆ (Auto Tipper) ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ, ಕೊಡುವಂತೆ ಜನರಿಗೆ ಹೇಳಬೇಕು.ಯಾವುದೇ ಕಾರಣಕ್ಕೂ ಹಸಿ ಕಸ ಹಾಗೂ ಒಣಕಸವನ್ನು ಮಿಶ್ರಣ ಮಾಡಿಕೊಟ್ಟರೆ ತೆಗೆದುಕೊಳ್ಳಬಾರದು. ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿಯೇ ನೀಡುವಂತೆ ಜನರಿಗೆ ಹೇಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ, ಇನ್ಮುಂದೆ ಅಪ್ಪಿ ತಪ್ಪಿಯೂ ಒಣ ಕಸ ಹಾಗೂ ಹಸಿಕಸವನ್ನು ಮಿಕ್ಸ್ ಮಾಡಿ ಕೊಡುವಂತಿಲ್ಲ ಎಂದಿದ್ದಾರೆ.