ಪೌರಕಾರ್ಮಿಕರಿಗೆ ಅಕ್ಷರಾಭ್ಯಾಸ ; ಬಿಬಿಎಂಪಿಯಿಂದ ಪೌರಕಾರ್ಮಿಕರಿಗೆ ಜ್ಞಾನ ಭಾಗ್ಯದ `ಸೌಭಾಗ್ಯ’!

ಇವರೆಲ್ಲಾ ನಮ್ಮ ನಗರವನ್ನು ಸ್ವಚ್ಛಗೊಳುಸಿ, ನಮ್ಮ ಆರೋಗ್ಯ ಕಾಪಾಡೋ ಬಿಬಿಎಂಪಿಯ ಹೆಮ್ಮೆಯ ಪೌರಕಾರ್ಮಿಕರು. ಆದ್ರೆ ಪೊರಕೆ ಹಿಡಿದು ಸ್ವಚ್ಛ ಮಾಡೋ ಕೈಗಳು ಪೆನ್ನು ಪುಸ್ತಕ ಹಿಡಿದಿರುವ ದೃಶ್ಯ ಎಲ್ಲಾದರೂ ನೋಡಿದ್ದೀರಾ? ಹಾಗಾದ್ರೆ ಬಿಬಿಎಂಪಿ ಪೌರ ಕಾರ್ಮಿಕರು ಅಕ್ಷರಾಭ್ಯಾಸ ಮಾಡಿರುವ ದೃಶ್ಯ ಸಂಭವಿಸಿದೆ.

ಹೌದು, ಇದು ಬಿಬಿಎಂಪಿ ತನ್ನ ಕಾರ್ಮಿಕರಿಗೆ ಕೈಗೊಂಡಿರುವ ವಿನೂತನ ಯೋಜನೆ. ಪೌರಕಾರ್ಮಿಕರಿಗೆ ಅಕ್ಷರ ಭಾಗ್ಯ ಕೊಟ್ಟು ಅವರಲ್ಲಿ ಜ್ಞಾನ ದೀವಿಗೆ ಬೆಳಗಿಸೋ ಪ್ರಶಂಸನೀಯ ಪ್ರಯತ್ನ ನಡೆದಿದೆ. ಕಡು ಬಡತನದಿಂದ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದ ಪೌರಕಾರ್ಮಿಕರಿಗೆ ಅಕ್ಷರ ಕಲಿಸುವ ದಿಟ್ಟ ಹೆಜ್ಜೆಯನ್ನು ಬಿಬಿಎಂಪಿ ಇಟ್ಟಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಏನೆಲ್ಲಾ ಯೋಜನೆಗಳನ್ನು ಮಾಡಲಾಗಿದೆ ಅನ್ನೋದನ್ನು ಈ ಯೋಜನೆಯ ಮೇಲ್ವಿಚಾರಕರಾದ ಪದ್ಮಶ್ರೀ ವಿವರಿಸಿದ್ದಾರೆ ಮುಂದೆ ಓದಿ.

ಈ ಲಿಂಕ್ ಕ್ಲಿಕ್ ಮಾಡಿ : https://fb.watch/cgTKCVCO6-/

ವಯಸ್ಕರ ಶಿಕ್ಷಣ ಕಾರ್ಯಕ್ರಮದ ಅಡಿ ಸರ್ಕಾರದ ಈ ಹೊಸ ಪ್ರಯತ್ನವನ್ನ ಮಾಡ್ತಿದೆ. ಇದರಿಂದಾಗಿ ಕನಿಷ್ಠ ಅಕ್ಷರ ಜ್ಞಾನ ಇಲ್ಲದ ಪೌರಕಾರ್ಮಿಕರಿಗೆ ಅಕ್ಷರ ಜ್ಞಾನ ಪಡೆಯೋ ಸೌಭಾಗ್ಯ ಸಿಕ್ಕಂತಾಗುತ್ತೆ. ಇದರಿಂದ ತಮಗೆ ಬಹಳ ಅನುಕೂಲ ಆಗುತ್ತೆ ಅಂತಾರೆ ಪೌರ ಕಾರ್ಮಿಕರು. ಈ ರೀತಿಯ ಹೊಸ ವಿನೂತನ, ವಿಭಿನ್ನ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಪೌರ ಕಾರ್ಮಿಕರಿಗೂ ಪ್ರೋತ್ಸಾಹ, ಉತ್ತೇಜನ ನೀಡಿದಂತೆಯೇ ಸರಿ.

  • ಪದ್ಮಶ್ರೀ

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.