Bengaluru: ನಿನ್ನೆ ಬಿಬಿಎಂಪಿ (BBMP Occupancy operation continued) ಅಧಿಕಾರಿಗಳು ದೊಡ್ಡೇನಕುಂದಿ ಸಮೀಪದ ಫರ್ನ್ ಸಿಟಿಯಲ್ಲಿ (Ferns City) ಒತ್ತುವರಿ ಮಾಡಿಕೊಂಡಿರುವ
ಜಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ, ವಾಕಿಂಗ್ ಪಾತ್, ಹೈಟೆಕ್ ಈಜುಕೊಳ, ಐಶಾರಾಮಿ ಕ್ಲಬ್ ಅನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದ್ದಾರೆ. ಬಿಬಿಎಂಪಿಯು ಇಂದು ಕೂಡ ಸಿಲಿಕಾನ್
ಸಿಟಿ ಬೆಂಗಳೂರಿನಲ್ಲಿ ಜೆಸಿಬಿಗಳ ಮೂಲಕ ಕಾರ್ಯಾಚರಣೆಯನ್ನು ಮುಂದುವರೆಸಿದೆ (Anti-encroachment Drive).

ಇಂದು ಕೂಡ ದೊಡ್ಡನಕುಂದಿ ಹಾಗೂ ಪಣತ್ತೂರು ಎರಡು ಕಡೆ ಒತ್ತುವರಿ ಕಾರ್ಯಾಚರಣೆ ನಡೆಯಲಿದೆ. 600 ಅಕ್ರಮ ಸ್ಥಳಗಳು ಸದ್ಯ ಪಾಲಿಕೆಯ ಟಾರ್ಗೆಟ್ನಲ್ಲಿ ಇದ್ದು ರಾಜ್ಯ ಸರ್ಕಾರದಿಂದ ಪಾಲಿಕೆಗೆ ಹದಿನೈದು
ದಿನಗಳ ಡೆಡ್ ಲೈನ್ ಸಿಕ್ಕಿದೆ. ಹೀಗಾಗಿ ಕೋರ್ಟ್(Court) ತಡೆ ಇಲ್ಲದ ಮುಂದಿನ ಹದಿನೈದು ದಿನಗಳಲ್ಲಿ ಅಕ್ರಮ ಒತ್ತುವರಿ ತೆರವು ಮಾಡಲು ಸರ್ಕಾರ ಡೆಡ್ ಲೈನ್ ನೀಡಿದೆ.ಹೀಗಾಗಿ ಕನಿಷ್ಠ 100
ಅಕ್ರಮ ಒತ್ತುವರಿ ಸ್ಥಳಗಳನ್ನು ತೆರವು ಮಾಡುವ ಗುರಿ (BBMP Occupancy operation continued) ಹೊಂದಲಾಗಿದೆ.
ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ
ಸದ್ಯ ಪಾಲಿಕೆ 600 ನಿವೇಶನ ತೆರವು ಮಾಡಲು ಮುಂದಾಗಿದ್ದು, ಈ ಪೈಕಿ 110 ಕಡೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಕಂದಾಯ ಇಲಾಖೆ (Department Of Revenue) ಸರ್ವೆ ವರದಿ
ನೀಡಿದಲ್ಲೆಲ್ಲ ತೆರವಿಗೆ ಪಾಲಿಕೆ ಕ್ರಮ ಕೈಗೊಂಡಿದೆ.ನಿಗದಿತ ಅವಧಿಯೊಳಗೆ ಎಲ್ಲಾ ಅಕ್ರಮ ಒತ್ತುವರಿ ತೆರವು ಮಾಡುವ ಗುರಿಯನ್ನು ಈಡೇರಿಸಲು ಬಿಬಿಎಂಪಿ ಬದ್ಧವಾಗಿದೆ.

ಕಳೆದ ಶನಿವಾರ ಮಹದೇವಪುರದ (Mahadevpura) ಸ್ಪೈಸ್ ಗಾರ್ಡನ್‌ನಲ್ಲಿ ಬಿಬಿಎಂಪಿಗೆ ಆಗಿದ್ದು ಅಕ್ಷರಶಃ ಮುಖಭಂಗ. ಏಕೆಂದರೆ ತೆರವು ನಡೆಯುತ್ತಿದ್ದಾಗ ಅಲ್ಲಿ ತಡೆಯಾಜ್ಞೆ ಪ್ರತಿ ತೋರಿಸಿದಾಗ ಬಿಬಿಎಂಪಿ
ಅಧಿಕಾರಿಗಳು ತಬ್ಬಿಬ್ಬಾದರು. ಆದರೆ ಒತ್ತುವರಿ ತೆರವು ಕಾರ್ಯಾಚರಣೆಗೆಂದು ಬಂದಿದ್ದ ಪಾಲಿಕೆ ಅಧಿಕಾರಿಗಳು ನಿನ್ನೆ ಒತ್ತುವರಿ ತೆರವು ಮಾಡಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.
ದೊಡ್ಡೇನಕುಂದಿ ಕೆರೆಗೆ ಸಂಪರ್ಕ ಕಲ್ಪಿಸುವ 60 ಅಡಿ ಅಗಲದ ರಾಜಕಾಲುವೆ (Rajakaluve)ಸಂಪೂರ್ಣ ಒತ್ತುವರಿಯಾಗಿದೆ.ಇದರ ಮೇಲೆ ದೊಡ್ಡ ದೊಡ್ಡ ವಿಲ್ಲಾಗಳು, ಕ್ಲಬ್‌ಹೌಸ್‌ಗಳು, ಅಪಾರ್ಟ್‌ಮೆಂಟ್‌ಗಳು,
ಸ್ವಿಮ್ಮಿಂಗ್‌ಪೂಲ್‌ಗಳು ಇತ್ಯಾದಿಗಳನ್ನು ಶ್ರೀಮಂತರು ನಿರ್ಮಿಸಿದ್ದಾರೆ ಮತ್ತು ಇದರ ತೆರವಿಗೆ ಬಿಬಿಎಂಪಿ ಮುಂದಾಗಿದ್ದು ಈ ವೇಳೆ ಪ್ರೈವೇಟ್ ಲೇಔಟ್ ನ ನಿವಾಸಿಗಳು ನಿವಾಸಿಗಳು ಜೆಸಿಬಿ ಎದುರು
ನಿಂತು ಹೈಡ್ರಾಮಾ ನಡೆಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ನಂದೀಶ್ ರೆಡ್ಡಿ, ನಿವಾಸಿಗಳ ಜತೆಗೂಡಿ ತೆರವು ತಡೆಗೆ ಮುಂದಾದರು.

ಈ ವೇಳೆ ಪಾಲಿಕೆ ಅಧಿಕಾರಿಗಳು ಹಾಗೂ ನಂದೀಶ್ ರೆಡ್ಡಿ(Nandish Reddy) ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಸಂಪೂರ್ಣ ಬಿಗಿಗೊಂಡಿತು.
ನಂತರ ಮಹದೇವಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪಾಲಿಕೆ ಅಧಿಕಾರಿಗಳ ಜೊತೆ ಮಾತಿನ ಯುದ್ದಕ್ಕೆ ಬಿದ್ದಿದ್ದ ನಂದೀಶ್ ರೆಡ್ಡಿ ನಿವಾಸಿಗಳ ಜೊತೆ ಸೇರಿ ಬಿಬಿಎಂಪಿ
ಬುಲ್ಡೋಜರ್ ನ ಕೀ ಕಿತ್ತುಕೊಂಡು ಬಿಬಿಎಂಪಿ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಇದು ವಾತಾವರಣವನ್ನು ಮತ್ತಷ್ಟು ಹದಗೆಡಿಸಿತು.
ಇದನ್ನೂ ಓದಿ : ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್ ಅರ್ಜಿಗೆ ದಿನಾಂಕ ವಿಸ್ತರಣೆ
ನಂತರ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡ ಬಿಬಿಎಂಪಿ ಅಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ಮುಂದುವರೆಸಿದರು.ಈ ವೇಳೆ ಫರ್ನ್ಸ್ ಸಿಟಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಿಸಿದ್ದ
ವಾಕಿಂಗ್ ಪಾಥ್, ತಡೆಗೋಡೆ, ಹೈಟೆಕ್ ಸ್ವಿಮ್ಮಿಂಗ್ ಪೂಲ್ ಹಾಗೂ ಐಶಾರಾಮಿ ಕ್ಲಬ್ ಗಳನ್ನು ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣ ಪುಡಿ ಪುಡಿ ಮಾಡಿ ಹಾಕಿದರು.
ರಶ್ಮಿತಾ ಅನೀಶ್