ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್ ಪಕ್ಷ(Congress Party) ಆಡಳಿತದಲ್ಲಿದ್ದಾಗ ಪಠ್ಯ ಪರಿಷ್ಕರಣೆ ಮಾಡಿದ ಸಾಹಿತಿ(Literature) ಬರಗೂರು ರಾಮಚಂದ್ರಪ್ಪ(Bargur Ramachandrappa) ನೇತೃತ್ವದ ಸಮಿತಿ ರೂಪಿಸಿದ್ದ ಪಠ್ಯಪುಸ್ತಕದಲ್ಲಿ 19 ಬ್ರಾಹ್ಮಣ ಲೇಖಕರಿದ್ದರು ಎಂದು ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ತಿರುಗೇಟು ನೀಡಿದ್ದಾರೆ.

ಪಠ್ಯಪುಸ್ತಕಗಳ ಬಗ್ಗೆ ಎಲ್ಲೆಡೆ ಗೊಂದಲ ಸೃಷ್ಟಿಯಾದ ನಂತರ ಸುದ್ದಿಗೋಷ್ಠಿ ನಡೆಸಿ ಸುಧೀರ್ಘ ವಿವರಣೆ ನೀಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಕಾಂಗ್ರೆಸ್ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ. ಬ್ರಾಹ್ಮಣವನ್ನು ಹೇರಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿದ್ದ 8ನೇ ತರಗತಿಯ ಪಠ್ಯದಲ್ಲಿ 19 ಬ್ರಾಹ್ಮಣ ಲೇಖಕರ ಅಧ್ಯಾಯಗಳನ್ನು ಸೇರ್ಪಡೆ ಮಾಡಲಾಗಿತ್ತು ಎಂದರು.
ಅದೇ ರೀತಿ ಬರಗೂರು ಸಮಿತಿ ಲಿಂಗಾಯತ ಸಮುದಾಯ ಲೇಖಕರ ಲೇಖನಗಳನ್ನು ಕೈಬಿಟ್ಟಿದ್ದರು. ಸಾ.ಶಿ.ಮುರಳಯ್ಯ, ಸಿದ್ದಯ್ಯ ಪುರಾಣಿಕ, ಸಂಗಮೇಶ್ ನಿಡಗುಂದಿ ಸೇರಿದಂತೆ ಕೆಲ ಲೇಖಕರ ಪಠ್ಯಗಳನ್ನು ತೆಗೆದು ಹಾಕಲಾಗಿತ್ತು. ಇನ್ನು ಬೆಂಗಳೂರಿನ ಪರಿಚಯವಿರುವ ಪಾಠದಲ್ಲಿ ಕೆಂಪೇಗೌಡರ ಬಗ್ಗೆ ಒಂದೇ ಒಂದು ಸಾಲು ಕೂಡಾ ಇರಲಿಲ್ಲ. ಆದರೆ ಟಿಪ್ಪುವಿನ ಕುರಿತು ಆರು ಪುಟಗಳ ಪಠ್ಯವನ್ನು ನೀಡಲಾಗಿತ್ತು. ಅದೇ ರೀತಿ ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ್ದ ಸಂಗೋಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ವೀರ ಮದಕರಿ ನಾಯಕರ ಪಠ್ಯಗಳನ್ನು ಅವರೆಲ್ಲಾ ಹಿಂದೂಗಳು ಎನ್ನುವ ಕಾರಣಕ್ಕೆ ಕೈಬಿಡಲಾಗಿತ್ತು.

ಪ್ರತಿ ಪಠ್ಯದಲ್ಲಿಯೂ ಹಿಂದೂಗಳ ವಿಷಯವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗಿತ್ತು. ‘ಹಿಂದೂ ಮಹಾಸಾಗರ’ ಎನ್ನುವುದನ್ನು ‘ಇಂಡಿಯನ್ ಓಷನ್’ ಎಂದು ಬದಲಾಯಿಸಲಾಗಿತ್ತು. ಇದೆಲ್ಲವನ್ನು ನೂತನ ಪಠ್ಯ ಪರಿಷ್ಕರಣ ಸಮಿತಿ ಸರಿಪಡಿಸಿದೆ ಎಂದು ಸ್ಪಷ್ಟನೆ ನೀಡಿದರು.