Bangalore: ರಾಜಧಾನಿ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿರುವವರು BDA ಫ್ಲ್ಯಾಟ್ ಮೇಳದಲ್ಲಿ (BDA Flat Mela) ಭಾಗಿಯಾಗಿ ಕಡಿಮೆ ದರದಲ್ಲಿ ಹೊಸ ಮನೆ ಖರೀದಿ ಮಾಡಬಹುದು. ಮೈಸೂರು ರಸ್ತೆಯ ಕಣಿಮಿಣಿಕೆ ವಸತಿ ಸಮುಚ್ಛಯದ ಮನೆಗಳ ಮಾರಾಟ ಜನವರಿ 18ರಂದು ನಡೆಯುತ್ತಿದೆ. 1 BHK, 2 BHK, 3 BHK ಫ್ಲ್ಯಾಟ್ಗನ್ನು ಮಾರಾಟ ಮಾಡಲಾಗುತ್ತಿದೆ. ಜನವರಿ 18ರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಈ ಮೇಳ ನಡೆಯಲಿದೆ. ಸ್ಥಳದಲ್ಲಿಯೇ ಮುಂಗಡ ಹಣವನ್ನು ನೀಡಿ ಖರೀದಿ ಮಾಡಬಹುದು.

ಸ್ಥಳದಲ್ಲಿಯೇ ಸಾಲ ಸೌಲಭ್ಯ : ಈ ಮೇಳಕ್ಕೆ ಆಗಮಿಸುವವರಿಗೆ ಸ್ಥಳದಲ್ಲಿಯೇ ವಿವಿಧ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ. ಆರಂಭಿಕ ಠೇವಣಿ ಮೊತ್ತವನ್ನು DD/ಆನ್ಲೈನ್ (DD/Online) ಮೂಲಕ ಪಾವತಿಸಿದರೇ ಸ್ಥಳದಲ್ಲಿಯೇ ಪ್ಲ್ಯಾಟ್ ಹಂಚಿಕೆ ಪತ್ರವನ್ನು ನೀಡಲಾಗುತ್ತದೆ ಎಂದು BDA ಅಧಿಕಾರಿಗಳು (BDA officials) ಮಾಹಿತಿ ನೀಡಿದ್ದಾರೆ.
ಪ್ಲ್ಯಾಟ್ಗಳ ದರ ಎಷ್ಟಿದೆ?
1 BHK ದರವು 15 ಲಕ್ಷ ರೂಪಾಯಿಯಿಂದ ಆರಂಭವಾಗಲಿವೆ.
2 BHK ದರವು 30 ಲಕ್ಷ ರೂ. ಮತ್ತು 3 BHK ದರವು 40 ಲಕ್ಷ ರೂ ಇರಬಹುದು.
BDA ಫ್ಲ್ಯಾಟ್ಗಳ ವಿಶೇಷತೆಗಳು ಏನು?
50 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣ.
1, 2, 3 BHK ಫ್ಲ್ಯಾಟ್ಗಳು ಲಭ್ಯ.
ಹಸಿರು ಪರಿಸರ ಪರಿಕಲ್ಪನೆಯಡಿ ನಿರ್ಮಾಣ
ಹೆಜ್ಜಾಲ ರೈಲು ನಿಲ್ದಾಣಕ್ಕೆ 2 ಕಿ. ಮೀ. ದೂರದಲ್ಲಿದೆ.
ಮೈಸೂರು ಹೆದ್ದಾರಿಯಿಂದ 1 ಕಿ. ಮೀ. ದೂರದಲ್ಲಿದೆ.
ಚಲ್ಲಪಟ್ಟ ಮೆಟ್ರೋದಿಂದ 3 ಕಿ. ಮೀ. ದೂರದಲ್ಲಿದೆ.
ರೇರಾ ಪ್ರಮಾಣೀಕರಿಸಿದೆ.
ಫ್ಲ್ಯಾಟ್ ಮೇಳ ಕುರಿತು ಹೆಚ್ಚಿನ ಮಾಹಿತಿಗಾಗಿ BDA ಅಧಿಕೃತ ವೆಬ್ಸೈಟ್ www.housing.bdabangalore.org / www.bda.karnataka.gov.in ಭೇಟಿ ನೀಡಿ.