ಮಹಿಳೆಯರಲ್ಲಿ ಸಾಮಾನ್ಯವಾಗಿ (Be aware of early menopause) 50 ರಿಂದ 55 ವರ್ಷಗಳ ನಡುವೆ ಮುಟ್ಟು ನಿಲ್ಲುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮಹಿಳೆಯರಲ್ಲಿ 40 ರಿಂದ 45 ವರ್ಷಗಳ ನಡುವೆಯೇ ಮುಟ್ಟು ನಿಲ್ಲುತ್ತಿರುವುದು ಕಂಡುಬರುತ್ತಿದೆ. ಇದನ್ನು ಆರಂಭಿಕ ಮೆನೋಪಾಸ್ (Early Menopause) ಎಂದು ಕರೆಯಲಾಗುತ್ತದೆ.

ವೈದ್ಯರ ಪ್ರಕಾರ, ಮಹಿಳೆಯರಿಗೆ 45 ವರ್ಷಕ್ಕೂ ಮುನ್ನ ಮೆನೋಪಾಸ್ (Menopause) ಸಂಭವಿಸಿದರೆ (Be aware of early menopause) ಅದನ್ನು ಆರಂಭಿಕ ಮೆನೋಪಾಸ್ ಎಂದು ಹೇಳಲಾಗುತ್ತದೆ. 40 ವರ್ಷಕ್ಕೂ ಮುನ್ನ ಮುಟ್ಟು ನಿಂತರೆ ಅದನ್ನು ಅಕಾಲಿಕ ಮೆನೋಪಾಸ್ ಎಂದು ಕರೆಯುತ್ತಾರೆ.
ಅಂಡಾಶಯದಲ್ಲಿರುವ ಅಂಡಾಣುಗಳ ಸಂಖ್ಯೆ ಕಡಿಮೆಯಾಗುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕೆಲವು ಸಂದರ್ಭಗಳಲ್ಲಿ ಅನುವಂಶಿಕ ಸಮಸ್ಯೆ, ಸ್ವಯಂ ನಿರೋಧಕ ಕಾಯಿಲೆಗಳು ಹಾಗೂ ಕೆಲವು ವೈದ್ಯಕೀಯ ಚಿಕಿತ್ಸೆಗಳು ಕೂಡ ಇದಕ್ಕೆ ಕಾರಣವಾಗಬಹುದು.

ಆರಂಭಿಕ ಮೆನೋಪಾಸ್‌ನ ಲಕ್ಷಣಗಳೇನು?
ಮುಟ್ಟು ಸರಿಯಾಗಿ ಆಗದಿರುವುದು, ದೇಹ ಹಠಾತ್ ಬಿಸಿಯಾಗುವುದು, ಅತಿಯಾದ ಬೆವರು, ಹೃದಯ ಬಡಿತ ಹೆಚ್ಚಾಗುವುದು, ನಿದ್ರೆಯ ಸಮಸ್ಯೆ, ಆತಂಕ, ಕಿರಿಕಿರಿ ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಆರೋಗ್ಯದ ಮೇಲೆ ಪರಿಣಾಮವೇನು?
ಚಿಕ್ಕ ವಯಸ್ಸಿನಲ್ಲೇ ಮುಟ್ಟು ನಿಲ್ಲುವುದರಿಂದ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ (Estrogen hormone) ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮೂಳೆಗಳ ಬಲ ಕಡಿಮೆಯಾಗಿ ಆಸ್ಟಿಯೊಪೊರೋಸಿಸ್ (Osteoporosis) ಸಮಸ್ಯೆ ಉಂಟಾಗಬಹುದು.
ಜೊತೆಗೆ ಹೃದಯದ ಆರೋಗ್ಯದ ಮೇಲೂ ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆಯಿದೆ. ಮಕ್ಕಳನ್ನು ಪಡೆಯುವ ಸಾಮರ್ಥ್ಯವೂ ಕಡಿಮೆಯಾಗಬಹುದು.
ಏನು ಮಾಡಬೇಕು?
45 ವರ್ಷಕ್ಕೂ ಮುನ್ನ ಮುಟ್ಟಿನಲ್ಲಿ ನಿರಂತರ ಏರುಪೇರು ಕಂಡುಬಂದರೆ ನಿರ್ಲಕ್ಷಿಸಬಾರದು. ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ವೈದ್ಯರ ಸಲಹೆ ಪಾಲಿಸುವುದು ಮುಖ್ಯ. ಅಗತ್ಯವಿದ್ದರೆ ವೈದ್ಯರು ಹಾರ್ಮೋನ್ ಚಿಕಿತ್ಸೆ ನೀಡಬಹುದು.
ಆರಂಭಿಕ ಮೆನೋಪಾಸ್ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಮುಂದಿನ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು.
ಇದನ್ನು ಓದಿ : https://vijayatimes.com/new-guidelines-for-bottled-water/