• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಐಸ್ ಕ್ರೀಮ್ ಪ್ರಿಯರೇ ಹುಷಾರ್: ಧೂಳು-ಗಲೀಜಿನ ನಡುವೆ ಉತ್ಪಾದನೆ ,ನಕಲಿ ದಿನಾಂಕ ಹಾಕಿ ಮಾರಾಟ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಐಸ್ ಕ್ರೀಮ್ ಪ್ರಿಯರೇ ಹುಷಾರ್: ಧೂಳು-ಗಲೀಜಿನ ನಡುವೆ ಉತ್ಪಾದನೆ ,ನಕಲಿ ದಿನಾಂಕ ಹಾಕಿ ಮಾರಾಟ
0
SHARES
25
VIEWS
Share on FacebookShare on Twitter
  • ಬಣ್ಣ ಬಣ್ಣದ ಐಸ್ ಕ್ರೀಮ್ ಎಂದು (Be careful before eating ice cream ) ತಿನ್ನುವ ಮುನ್ನ ಎಚ್ಚರ
  • ತಯಾರಿಕಾ ದಿನಾಂಕದಲ್ಲಿ ತಿರುಚಾಟ, ಅವಧಿ ಮೀರಿದ ಉತ್ಪನ್ನ ಮಾರಾಟ
  • ಆಹಾರ ಸುರಕ್ಷತಾ ಇಲಾಖೆಯಿಂದ ನೋಟಿಸ್ ಜಾರಿ

Bengaluru: ಇನ್ನೇನು ಬೇಸಿಗೆ ಕಾಲ ಶುರುವಾಯಿತು ತಣ್ಣನೆ ಐಸ್ ಕ್ರೀಮ್ ತಿನ್ನೋಣ (Be careful before eating ice cream) ಎಂದು ರಸ್ತೆ ಬದಿಯಲ್ಲಿ ಮಾರುವ ಐಸ್ ಕ್ರೀಮ್ ತಿನ್ನುವ ಮುನ್ನ ಹುಷಾರಾಗಿರಿ.

ರಾಜಧಾನಿ ಸುತ್ತಮುತ್ತ ಬೀದಿಬದಿ ಮಾರಾಟವಾಗುತ್ತಿರುವ ಐಸ್ ಕ್ರೀಂಗಳ ಬಗ್ಗೆ ಆತಂಕಕಾರಿ ವಿಚಾರಗಳು ಬೆಳಕಿಗೆ ಬಂದಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಐಸ್ ಕ್ರೀಂ (Ice Cream) ತಯಾರಿಕಾ ಘಟಕದ ಮೇಲೆ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯಲ್ಲಿ ಗಂಭೀರ ಅನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.

Be careful before eating ice cream

ಪಾಚಿ ಕಟ್ಟಿದ ನೀರು, ಧೂಳು ಮತ್ತು ಕಸಕಡ್ಡಿಗಳ ನಡುವೆ ಯಾವುದೇ ರಕ್ಷಣೆ ಕ್ರಮಗಳಿಲ್ಲದೆ ಐಸ್ ಕ್ರೀಂ ತಯಾರಿಸಲಾಗುತ್ತಿದ್ದದ್ದು ಅಧಿಕಾರಿಗಳಿಗೆ ಶಾಕ್ ನೀಡಿದೆ.

ಇಂತಹ ಅಶುಚಿ ಪರಿಸರದಲ್ಲಿ ತಯಾರಾಗುವ ಆಹಾರ ಪದಾರ್ಥಗಳು ಗ್ರಾಹಕರ ಆರೋಗ್ಯಕ್ಕೆ ನೇರ ಹಾನಿಯುಂಟುಮಾಡುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ದೇವನಹಳ್ಳಿ ತಹಶೀಲ್ದಾರ್ ಅನಿಲ್ ನೇತೃತ್ವದ ತಂಡವು ಈ ದಾಳಿ ನಡೆಸಿದ್ದು, ಘಟಕದ ಸ್ಥಿತಿಯನ್ನು (Be careful before eating ice cream) ಕಂಡು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ತಯಾರಿಕಾ ಸ್ಥಳದಲ್ಲಿ ಶುದ್ಧ ನೀರಿನ ಬಳಕೆ ಇಲ್ಲದೇ, ಪಾಚಿ ಮತ್ತು ದುರ್ವಾಸನೆಯ ನೀರನ್ನು ಉಪಯೋಗಿಸುತ್ತಿರುವುದು ಪತ್ತೆಯಾಗಿದೆ.

ಆಹಾರ ಪದಾರ್ಥಗಳನ್ನು ಮುಚ್ಚದೇ ಇಡುವುದು, ಕಾರ್ಮಿಕರು ಸುರಕ್ಷತಾ ಉಡುಪು ಧರಿಸದಿರುವುದು ಸೇರಿದಂತೆ ಹಲವು ಲೋಪಗಳು ಕಂಡುಬಂದಿವೆ.

ಆಹಾರ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಉತ್ಪಾದನೆ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ಘಟಕವನ್ನು ತಕ್ಷಣವೇ ಸೀಲ್ ಮಾಡಲಾಗಿದ್ದು, ಮುಂದಿನ ತನಿಖೆ ಆರಂಭಿಸಲಾಗಿದೆ.

ಇನ್ನು ದಾಳಿಯ ವೇಳೆ ಇನ್ನೊಂದು ಗಂಭೀರ ಅಂಶವೂ ಬೆಳಕಿಗೆ ಬಂದಿದೆ. ತಯಾರಾದ ಐಸ್ ಕ್ರೀಂ ಪ್ಯಾಕೆಟ್‌ಗಳ ಮೇಲೆ ತಯಾರಿಕೆಯ ದಿನಾಂಕ (MFG Date) ಹಾಗೂ ಅವಧಿ ಮುಗಿಯುವ ದಿನಾಂಕ (Expiry Date) ಅನ್ನು ಮನಬಂದಂತೆ ಬದಲಾಯಿಸಿ ಮುದ್ರಿಸಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ.

ಕೆಲವೊಂದು ಪ್ಯಾಕೆಟ್‌ಗಳಲ್ಲಿ ದಿನಾಂಕಗಳು ಅಳಿಸಿಹೋಗಿರುವುದು ಅಥವಾ ಕೈಬರಹದಲ್ಲಿ ತಿದ್ದಿರುವುದು ಕಂಡುಬಂದಿದೆ. ಇದರಿಂದ ಗ್ರಾಹಕರು ಅವಧಿ ಮೀರಿದ ಉತ್ಪನ್ನಗಳನ್ನು ಖರೀದಿಸುವ ಅಪಾಯ ಹೆಚ್ಚುತ್ತದೆ. ಇದು ಕೇವಲ ಮೋಸವಷ್ಟೇ ಅಲ್ಲ, ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅಕ್ರಮವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆ ಈ ಘಟಕಕ್ಕೆ ನೋಟಿಸ್ ನೀಡಿದ್ದು, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಜೊತೆಗೆ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸಣ್ಣ ಉತ್ಪಾದನಾ ಘಟಕಗಳ ಮೇಲೂ ತಪಾಸಣೆ ತೀವ್ರಗೊಳಿಸುವುದಾಗಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಅಸ್ವಚ್ಛ ಆಹಾರ ಸೇವನೆಯಿಂದ ಜಠರ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದರ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದು, ಇಂತಹ ಘಟನೆಗಳು ಸಾರ್ವಜನಿಕ ಆರೋಗ್ಯದ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಹಕರು ಐಸ್ ಕ್ರೀಂ ಸೇರಿದಂತೆ ಯಾವುದೇ ಪ್ಯಾಕೆಟ್ ಆಹಾರ ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

FSSAI ಪರವಾನಗಿ ಹೊಂದಿರುವ ವಿಶ್ವಾಸಾರ್ಹ ಬ್ರ್ಯಾಂಡ್‌ಗಳನ್ನು ಮಾತ್ರ ಆಯ್ಕೆ ಮಾಡಬೇಕು. ಪ್ಯಾಕೆಟ್ ಮೇಲೆ ಮುದ್ರಿಸಲಾದ ತಯಾರಿಕೆ ಮತ್ತು ಅವಧಿ ದಿನಾಂಕಗಳು ಸ್ಪಷ್ಟವಾಗಿದೆಯೇ ಎಂದು ಪರಿಶೀಲಿಸಬೇಕು.

ಪ್ಯಾಕೆಟ್ ಒಳಗೆ ಅತಿಯಾದ ಐಸ್ ಹರಳುಗಳು ಕಂಡುಬಂದರೆ ಅದು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿರುವ ಸೂಚನೆ ಆಗಿರಬಹುದು. ತಿನ್ನುವಾಗ ಹಳಸಿದ ವಾಸನೆ ಅಥವಾ ವಿಚಿತ್ರ ರುಚಿ ಕಂಡುಬಂದರೆ ತಕ್ಷಣ ಸೇವನೆ ನಿಲ್ಲಿಸಬೇಕು. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗ್ರಾಹಕರು ಜಾಗೃತರಾಗಿರುವುದು ಅಗತ್ಯವೆಂದು ಇಲಾಖೆ ಮನವಿ ಮಾಡಿದೆ.

ಇದನ್ನು ಓದಿ : https://vijayatimes.com/road-development-western-ghats/

Tags: Adulterationdustfakeicecreamicecream

Related News

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026
100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ
ಪ್ರಮುಖ ಸುದ್ದಿ

100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ

September 10, 2026
ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ
ಪ್ರಮುಖ ಸುದ್ದಿ

ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ

September 10, 2026
ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ
ದೇಶ-ವಿದೇಶ

ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.