- ಟ್ರಾಫಿಕ್ ಫೈನ್ ಪಾವತಿಗೆ 50% ರಿಯಾಯಿತಿ ಅವಾಂತರ
- ಯಮಾರಿ ಸೈಬರ್ ಕಳ್ಳರ ಬಲೆಗೆ ಬಿದ್ದರೆ ಬ್ಯಾಂಕ್ ಖಾತೆ ಖಾಲಿ
- ರಸ್ತೆ ಸುರಕ್ಷತೆ vs ರಿಯಾಯಿತಿ: ಟ್ರಾಫಿಕ್ ಫೈನ್ ಹೊಸ ವಿವಾದ
Bengaluru: ಬೆಂಗಳೂರು ನಗರದಲ್ಲಿ ಟ್ರಾಫಿಕ್ ದಂಡ(Traffic fine) ಪಾವತಿ ಸಂಬಂಧಿಸಿದ ಘಟನೆ ಸೈಬರ್ ಸುರಕ್ಷತೆ ಬಗ್ಗೆ ಚಿಂತೆಯನ್ನು ಹೆಚ್ಚಿಸಿದೆ.
ಟ್ರಾಫಿಕ್ ಫೈನ್‌ಗಳಲ್ಲಿ ಸರ್ಕಾರ ನೀಡಿರುವ 50% ರಿಯಾಯಿತಿಯನ್ನು ಸೈಬರ್ ಅಪರಾಧಿಗಳು(cyber criminal) ದುರುಪಯೋಗ ಮಾಡಿಕೊಂಡು ವಾಹನ ಸವಾರರ ಖಾತೆಗಳಿಗೆ ಕನ್ನ ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಕೊಡಿಗೇಹಳ್ಳಿಯ(Kodigehalli) ಟೆಕ್ ಉದ್ಯೋಗಿಯೊಬ್ಬರು(tech employee) ಇಂತಹ ಬಲೆಗೆ ಸಿಲುಕಿ 2.65 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕರ್ನಾಟಕ ಸಾರಿಗೆ ಇಲಾಖೆ(Karnataka Transport Department) 2023ರಲ್ಲಿ ನೀಡಿದಂತೆ
ಈ ಬಾರಿಯೂ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಟ್ರಾಫಿಕ್ ಫೈನ್ ಪಾವತಿಗೆ 50% ರಿಯಾಯಿತಿ ನೀಡಿದೆ. ಸರ್ಕಾರದ ಉದ್ದೇಶವು ದೀರ್ಘಕಾಲದಿಂದ ಬಾಕಿ ಉಳಿದ ದಂಡವನ್ನು ಸುಲಭವಾಗಿ ವಸೂಲಿಸುವುದು.
ಆದರೆ ತಜ್ಞರ ಅಭಿಪ್ರಾಯದಲ್ಲಿ, ಈ ರಿಯಾಯಿತಿ ಕ್ರಮವು ನಿಯಮ ಉಲ್ಲಂಘಕರಿಗೆ ತಪ್ಪು ಸಂದೇಶ ಕಳುಹಿಸುತ್ತದೆ.ಅವರು ಹೇಳುವಂತೆ, “ರಿಯಾಯಿತಿ ಸಿಗುತ್ತದೆ ಕಾಯಿರಿ”

ಎಂಬ ಮನಸ್ಥಿತಿ ವಾಹನ ಸವಾರರಲ್ಲಿ ಬೆಳೆದು, ಟ್ರಾಫಿಕ್ ನಿಯಮ ಉಲ್ಲಂಘನೆ ಹೆಚ್ಚಲು ಕಾರಣವಾಗಬಹುದು. ರಸ್ತೆ ಸುರಕ್ಷತೆ ಕಾಪಾಡಬೇಕಾದ ಸಮಯದಲ್ಲಿ ಇಂತಹ ರಿಯಾಯಿತಿಗಳು ಅಪಾಯಕಾರಿಯಾಗಿದೆ.
ಇನ್ನು ರಿಯಾಯಿತಿ ಘೋಷಣೆಯ ನಂತರ ಸೈಬರ್ ಅಪರಾಧಿಗಳು ನಕಲಿ ಮೆಸೇಜ್‌ಗಳು(Fake message) ಮತ್ತು ಲಿಂಕ್‌ಗಳನ್ನು ಕಳುಹಿಸಿ “ಇಲ್ಲೇ ದಂಡ ಚೆಕ್ ಮಾಡಿ, ಪಾವತಿಸಿ”(“Check and pay the fine here”) ಎಂದು ವಾಹನ ಸವಾರರನ್ನು ಮೋಸಗೊಳಿಸುತ್ತಿದ್ದಾರೆ.
ಕೊಡಿಗೇಹಳ್ಳಿ ಪ್ರದೇಶದ ಟೆಕ್ ಉದ್ಯೋಗಿಯೊಬ್ಬರು ಇಂತಹ ಲಿಂಕ್ ತೆರೆಯುತ್ತಿದ್ದಂತೆಯೇ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 2.65 ಲಕ್ಷ ರೂ. ಮಾಯವಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೈಬರ್ ಅಪರಾಧಿಗಳು ಎಪಿಕೆ ಫೈಲ್‌ಗಳು(APK files), ನಕಲಿ ಆ್ಯಪ್‌ಗಳು(Fake apps), ಫಿಷಿಂಗ್ ಲಿಂಕ್‌ಗಳನ್ನು ಬಳಸಿ ವಾಹನ ಸವಾರರ ಫೋನ್‌ಗೆ ಪ್ರವೇಶ ಪಡೆಯುತ್ತಾರೆ.
ಲಿಂಕ್ ತೆರೆಯುತ್ತಿದ್ದಂತೆಯೇ ಖಾತೆಯಲ್ಲಿದ್ದ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿಕೊಳ್ಳುತ್ತಾರೆ. ಈ ಕುರಿತಾಗಿ ಟ್ರಾಫಿಕ್ ತಜ್ಞ ಪ್ರೊ. ಎಂ.ಎನ್. ಶ್ರೀಹರಿ(M.N. Srihari) ಅವರ ಅಭಿಪ್ರಾಯದಲ್ಲಿ,
ದಂಡದಲ್ಲಿ ರಿಯಾಯಿತಿ ನೀಡುವುದು ಕಾನೂನು ಉಲ್ಲಂಘಕರಿಗೆ(lawbreakers) ಬಹುಮಾನ ನೀಡಿದಂತಾಗಿದೆ. “ಕಾನೂನು ಉಲ್ಲಂಘಿಸಿದವರಿಗೆ ಕಠಿಣ ದಂಡ ವಿಧಿಸಬೇಕು, ರಿಯಾಯಿತಿ ಕೊಡುವುದು ಕಾನೂನುಬಾಹಿರ” ಎಂದು ಅವರು ಹೇಳಿದ್ದಾರೆ.
ಹಿರಿಯ ಟ್ರಾಫಿಕ್ ಪೊಲೀಸ್(Traffic police) ಅಧಿಕಾರಿಯೊಬ್ಬರು, ದಂಡದಲ್ಲಿ ರಿಯಾಯಿತಿ ನೀಡುವುದು ಕೆಲ ನಾಗರಿಕರಿಗೆ ತಾತ್ಕಾಲಿಕ ಆರ್ಥಿಕ ನೆರವಾಗಬಹುದು ಎಂದು ಒಪ್ಪಿಕೊಂಡರೂ, ಡೆಲಿವರಿ ಬಾಯ್ಸ್,
ಆಟೋ ಮತ್ತು ಕ್ಯಾಬ್ ಚಾಲಕರು ನಿರಂತರವಾಗಿ ನಿಯಮ ಉಲ್ಲಂಘಿಸುವವರಾಗಿರುವುದರಿಂದ, ಅವರಿಗೆ ಇದು ಮರುಪರಾಧಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಟ್ರಾಫಿಕ್ ದಂಡ ಪಾವತಿಗೆ ರಾಜ್ಯ ಸರ್ಕಾರದಿಂದ ಶೇಕಡಾ 50ರಷ್ಟು ರಿಯಾಯಿತಿ ಘೋಷಣೆ
ಇನ್ನು ಈ ಘಟನೆಯ ನಂತರ ಪೊಲೀಸರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ:
- ಕೇವಲ ಅಧಿಕೃತ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕವೇ ದಂಡ ಪಾವತಿಸಬೇಕು.
- ಅಜ್ಞಾತ ಲಿಂಕ್ ಅಥವಾ ಎಪಿಕೆ ಫೈಲ್‌ಗಳನ್ನು ತೆರೆಯಬಾರದು.
- ಯಾವುದೇ ಅನುಮಾನಾಸ್ಪದ ಮೆಸೇಜ್ ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಎಂದು ಸೂಚನೆ ನೀಡಿದ್ದಾರೆ.