ಕೇವಲ ಮಹಿಳೆಯರಷ್ಟೇ ಅಲ್ಲದೇ, ಪುರುಷರೂ ಕೂಡ ಸೌಂದರ್ಯ (Beauty) ಪ್ರಜ್ಞೆ ಹೊಂದಿರಬೇಕು. ಸ್ತ್ರೀಯರಿಗೆ ಸೌಂದರ್ಯವರ್ಧಕ, ಸೌಂದರ್ಯ ಸಲಹೆಗಳು ಇರುವಂತೆಯೇ,
ಪುರುಷರಿಗೂ ಕೂಡ ಸೌಂದರ್ಯವರ್ಧಕ (Beauty Products) ಹಾಗೂ ಸೌಂದರ್ಯ ಪೋಷಕ ಸಲಹೆಗಳಿವೆ. ಅಂತಹ ಸಲಹೆಗಳಲ್ಲಿ ಕೆಲವು ಇಲ್ಲಿವೆ.

ಮಹಿಳೆಯರಷ್ಟೇ ಅಲ್ಲ ಪುರುಷರನ್ನೂ ಕಾಡುವ ಈ ಮೊಡವೆ (Pimples) ಹಾಗೂ ಕಲೆಗಳು (Marks) ಹದಿಹರೆಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.
ತುಳಸಿಯ ಎಲೆಯನ್ನು (Tulasi Leaves) ಒಣಗಿಸಿ ಪುಡಿ ಮಾಡಿ ನಿತ್ಯ ಇದರ ಫೇಸ್ ಪ್ಯಾಕ್ (Beauty Tips for Men) ಲೇಪಿಸಿ 10 ರಿಂದ 15 ನಿಮಿಷದ ಬಳಿಕ ತೊಳೆದರೆ ಮೊಡವೆ ಮತ್ತು ಕಲೆ ನಿವಾರಣೆಯಾಗುತ್ತದೆ.
ಜೇನು ತುಪ್ಪ, ನಿಂಬೆರಸ, ರೋಸ್ ವಾಟರ್ ಬೆರೆಸಿ (Beauty Tips for Men) ಮೊಡವೆಗಳಿಗೆ ಲೇಪಿಸಿದರೆ ಶಮನಕಾರಿ. ಹಾಲು ಹಾಗೂ ಜೇನು ಬೆರೆಸಿ ಹಚ್ಚಿದರೆ ಕಲೆ ನಿವಾರಣೆಯಾಗುತ್ತದೆ. ಪುದೀನಾ ಸೊಪ್ಪಿನ ರಸ ಹಾಗೂ ಜೇನು ಬೆರೆಸಿ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ.
ಇದನ್ನೂ ಓದಿ : https://vijayatimes.com/bjp-mla-slams-adipurush-film/
ಮುಖದ ನೆರಿಗೆ ನಿವಾರಣೆಗೂ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ : ಹಾಲಿನ ಕೆನೆಗೆ ಸೌತೆ ರಸ, ಅರಸಿನ ಪುಡಿ ಬೆರೆಸಿ ಮೃದುವಾಗಿ ಮಾಲೀಶು ಮಾಡಿದರೆ ನೆರಿಗೆಗಳು ಕಡಿಮೆಯಾಗುತ್ತದೆ.
ಕ್ಯಾರೆಟ್(Carrot) ಅರೆದು ಹಾಲಿನ ಜೊತೆಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿದರೆ ಮುಖದ ನೆರಿಗೆಗಳು ಕಡಿಮೆಯಾಗುತ್ತದೆ.
ಇನ್ನು, ಪುರುಷರನ್ನು ಹೆಚ್ಚು ಕಾಡುವ ಕೂದಲು ಉದುರುವಿಕೆ ಸಮಸ್ಯೆಗೆ ಬಯೊಟಿನ್ ಹೆಚ್ಚಿರುವ ಆಹಾರ ಸೇವನೆ ಹಿತಕರ.
ಕಿತ್ತಳೆ, ನೆಲ್ಲಿ,ಸೀಬೆ, ನಿಂಬೆ ಮುಂತಾದ ವಿಟಮಿನ್ ಸಿ ಅಧಿಕವಿರುವ ಹಣ್ಣುಗಳ ಸೇವನೆ ಫಲಕಾರಿ. ಸೊಪ್ಪು ತರಕಾರಿಗಳು ,ಮೊಳಕೆ ಬರಿಸಿದ ಧಾನ್ಯ, ಹಾಲು-ಮೊಸರು ಉಪಯುಕ್ತ.

ಅರ್ಧ ಕಪ್ ಎಳನೀರಿಗೆ ಅರ್ಧ ನಿಂಬೆರಸ ಹಿಂಡಿ ಕೂದಲಿಗೆ ಲೇಪಿಸಬೇಕು, ಬಳಿಕ ಬೆರಳ ತುದಿಯಿಂದ ಮಾಲೀಶು ಮಾಡಿದರೆ ರಕ್ತ ಸಂಚಾರ ವರ್ಧಿಸಿ ಪೋಷಕಾಂಶಗಳು ದೊರೆತು ಕೂದಲು ಉದುರುವಿಕೆ ನಿಲ್ಲುತ್ತವೆ. ಮೆಂತೆ ಸೊಪ್ಪನ್ನು ಮೊಸರಿನೊಂದಿಗೆ ಅರೆದು ಹೇರ್ ಪ್ಯಾಕ್ ಮಾಡಬೇಕು.
ಇದನ್ನೂ ಓದಿ : https://vijayatimes.com/amit-shah-speech-video-goes-viral/
ಒಂದು ಗಂಟೆಯ ಬಳಿಕ ತಲೆ ಸ್ನಾನ ಮಾಡಿದರೆ ಹೆಚ್ಚು ಉದುರುವುದು ನಿಲ್ಲುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.
ಕೊಬ್ಬರಿ ಎಣ್ಣೆಗೆ ತುಳಸಿ ಎಲೆ, ಬಿಳಿ ದಾಸವಾಳದ ಹೂ ಹಾಗೂ ಮೆಂತೆ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಈ ಎಣ್ಣೆಯನ್ನು ನಿತ್ಯ ಹಚ್ಚಿದರೆ ಕೂದಲು ಉದುರುವಿಕೆ ನಿಲ್ಲುತ್ತದೆ.
- ಪವಿತ್ರ