vijaya times advertisements
Visit Channel

Health Tips : ಸನ್ ಟ್ಯಾನ್ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು ಅನುಸರಿಸಿ

A beautiful young woman looking at her face in the mirror

Health Tips : ನೀವು ತುಂಬಾ ಹೊತ್ತು ಬಿಸಿಲಿನಲ್ಲಿದ್ದರೆ ನಿಮ್ಮ ತ್ವಚೆಯ(Skin) ಮೇಲೆ ಕಂದು(Tan) ಅಥವಾ ಕೆಂಪು ಕಂದು ಬಣ್ಣವನ್ನು ಗಮನಿಸಬಹುದು. ಸೂರ್ಯನ ನೇರಳಾತೀತ ಕಿರಣಗಳು ಅಥವಾ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಚರ್ಮದೊಳಗೆ ಮೆಲನಿನ್(Melanin) ಎಂಬ ವರ್ಣದ್ರವ್ಯದ ರಚನೆಯಿಂದ ಉಂಟಾಗುವ ಚರ್ಮದ ಕಂದು ಬಣ್ಣವನ್ನು ಸನ್ ಟ್ಯಾನ್(Sun Tan) ಎಂದು ಕರೆಯುತ್ತಾರೆ.

skin tips

ಸಾಮಾನ್ಯವಾಗಿ ಮೆಲನಿನ್ ಎಂಬ ಚರ್ಮದ ವರ್ಣದ್ರವ್ಯವು ಹಾನಿಯ ಸಂಕೇತವಾಗಿದೆ. ಹಾಗಾಗಿ ಸನ್ ಟ್ಯಾನನ್ನು ಅಲ್ಲಗಳೆಯುವಂತಿಲ್ಲ. ಹಾಗಾದರೆ ನೀವು ಸುಲಭವಾಗಿ ಮನೆಯಲ್ಲಿ ಉಪಯೋಗಿಸುವ ಕೆಲವು ದಿನಬಳಕೆ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಕಡಲೆ ಹಿಟ್ಟು : ಕಡಲೆ ಹಿಟ್ಟು(Gram Flour) ಆರೋಗ್ಯಕರ ಪೋಷಕಾಂಶಗಳಿಂದ ಕೂಡಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಗಳನ್ನು(Carbohydrates) ಹೊಂದಿರುತ್ತದೆ, ಇತರ ಹಿಟ್ಟುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ.

https://youtu.be/goe0pevvNrg ಭ್ರಷ್ಟ ಜಿವಿಕೆಯ 108 ಹಗರಣ!

ಸಾಮಾನ್ಯವಾಗಿ ಭಾರತದಲ್ಲಿ ಮೊದಲಿನಿಂದಲೂ ಚರ್ಮದ ಹಲವಾರು ಸಮಸ್ಯೆಗಳಿಗೆ ಈ ಕಡಲೆಹಿಟ್ಟು ಮನೆಮದ್ದು. ಕಡಲೆ ಹಿಟ್ಟು ಸನ್ ಟ್ಯಾನ್ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಒಣ ಚರ್ಮವನ್ನು ಹೊಂದಿದ್ದರೆ ಅಥವಾ ಮೊಡವೆಗಳಿದ್ದರೆ(Pimples) ಉಪಯೋಗಿಸಬೇಡಿ.

beauty tips

ಸಾಮಾನ್ಯವಾಗಿ ಕಡಲೆ ಹಿಟ್ಟನ್ನು ಫೇಸ್ ಮಾಸ್ಕ್ ಆಗಿ ಬಳಸಿದಾಗ ಯಾವುದೇ ಅಡ್ಡ ಪರಿಣಾಮಗಳುವುದಿಲ್ಲ ಹಾಗೂ ಅಲರ್ಜಿ ಸಮಸ್ಯೆ ಇದ್ದಲ್ಲಿ ಇದನ್ನು ಬಳಸದಿರುವುದೇ ಉತ್ತಮ. ಚರ್ಮದ ಮೇಲಿರುವ ಕಪ್ಪು ಚುಕ್ಕೆಗಳು, ಸೂರ್ಯನ ಕಿರಣಗಳಿಂದ ಹಾನಿಗೊಳಗಾದ ಚರ್ಮ, ಹಾಗೂ ಸುಕ್ಕುಗಳನ್ನು ಹೋಗಲಾಡಿಸಲು ಈ ಕಡಲೆ ಹಿಟ್ಟು ಸಹಾಯ ಮಾಡುತ್ತದೆ. ಕಡಲೆ ಹಿಟ್ಟು ಟ್ಯಾನ್ ಆದ ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ.

ಇದನ್ನೂ ಓದಿ : https://vijayatimes.com/girl-cried-for-rahul-gandhi/

ಕಸ್ತೂರಿ ಅರಿಶಿನ : ನಾವು ದಿನನಿತ್ಯ ಬಳಸುವ ಅರಿಶಿನ ಹಾಗೂ ಕಸ್ತೂರಿ ಅರಿಶಿನ ಬೇರೆ ಬೇರೆಯಾಗಿದೆ. ನಾವು ಉಪಯೋಗಿಸುವ ಅರಿಶಿನಗಿಂತ ಕಸ್ತೂರಿ ಅರಿಶಿನವು ತುಂಬಾ ಪ್ರಯೋಜನಕಾರಿಯಾಗಿದೆ. ಕಸ್ತೂರಿ ಅರಿಶಿನದಲ್ಲಿರುವ ಆಂಟಿ – ಆಕ್ಸಿಡೆಂಟ್ ಗುಣಗಳು ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

health


ಸಾಮಾನ್ಯವಾಗಿ ದಿನ ಬಳಕೆಯ ಅರಿಶಿನದಲ್ಲಿ ‘ ಕರ್ಕ್ಯುಮಿನ್ ‘ ಎಂಬ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಹೊಂದಿರುವಂತಹ ಔಷಧೀಯ ಗುಣಗಳಿವೆ,ಆದರೆ ಅದಕ್ಕಿಂತ ಹತ್ತು ಪಟ್ಟು ಶಕ್ತಿಯುತವಾದ ಅಂಶಗಳು ಈ ಕಸ್ತೂರಿ ಅರಿಶಿನದಲ್ಲಿರುತ್ತವೆ.


ಇದು ಮುಖದ ಮೇಲೆ ಮೊಡವೆಗಳು ಹಾಗೂ ಎಣ್ಣೆಯ ಚರ್ಮ ಹೊಂದಿರುವವರಿಗೆ ಪರಿಹಾರವಾಗಿದೆ. ಮಖ್ಯವಾಗಿ ಟ್ಯಾನ್ ಆದ ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ತುಂಬಾ ಸೂಕ್ಷ್ಮ ಚರ್ಮ ಹೊಂದಿರುವವರು ಅರಿಶಿನ ಕಸ್ತೂರಿಯನ್ನು ನೇರವಾಗಿ ಉಪಯೋಗಿಸಬೇಡಿ. ಮೊದಲು ನಿಮ್ಮ ಚರ್ಮಕ್ಕೆ ಸರಿ ಹೊಂದುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ಯಾಚ್ ಟೆಸ್ಟ್ ಮೂಲಕ ಕಂಡು ಹಿಡಿದುಕೊಳ್ಳಬಹುದು.

curd

ಮೊಸರು(Curd) : ಮೊಸರಿನ ವಿಶೇಷತೆಯೆಂದರೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಮುಖಕ್ಕೆ ಹೆಚ್ಚು ಮೊಯಶ್ಚೈಸರ್ ನೀಡುವುದು. ನಾವು ದಿನನಿತ್ಯ ಬಳಸುವ ಮೊಸರಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ವಿಟಮಿನ್ ಡಿ ಅಧಿಕವಾಗಿದೆ ಹಾಗೂ ಕೂದಲಿನ ಸಮಸ್ಯೆಗಳಿಗೂ ಪರಿಹಾರವಾಗಿದೆ.

ಇದನ್ನೂ ಓದಿ : https://vijayatimes.com/siddaramaiah-for-kolar-vidhansabha/


ಇದು ಸೂರ್ಯನ ಕಿರಣಗಳಿಂದ ಆಗುವ ಹಾನಿಯಿಂದ ಕಾಪಾಡುತ್ತದೆ ಹಾಗೂ ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ.
ಚಳಿಗಾಲದಲ್ಲಿ ಶುಷ್ಕ ಚರ್ಮದ ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ. ಇದು ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ ಹಾಗೂ ಮೊಸರು ಸನ್ ಟ್ಯಾನ್ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

face beauty

ಉಪಯೋಗಿಸುವ ವಿಧಾನ : ಕಡಲೆಹಿಟ್ಟು, ಕಸ್ತೂರಿ ಅರಿಶಿನ,ಮೊಸರು,ಸಕ್ಕರೆ ನಂತರ ಟೊಮೆಟೋ ಹಣ್ಣಿನ ರಸ ಇವೆಲ್ಲವನ್ನೂ ಮಿಶ್ರಣ ಮಾಡಿ ಸನ್ ಟ್ಯಾನ್ ಆಗಿರುವಲ್ಲಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ತಣ್ಣನೆಯ ನೀರಿನಲ್ಲಿ ನಿಧಾನವಾಗಿ ಸ್ಕ್ರಬ್ ಮಾಡಿಕೊಳ್ಳಬೇಕು.

  • ರಶ್ಮಿತಾ ಅನೀಶ್

Latest News

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.