Beauty Tips : ತ್ವಚೆಯ (Skin) ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಿ ಬೇಸತ್ತಿದ್ದರೆ, ಇಲ್ಲಿದೆ ನಿಮಗೊಂದು ಅದ್ಭುತ ಪರಿಹಾರ.
ಹೌದು, ಹಲವಾರು ತ್ವಚೆಯ ಸಮಸ್ಯೆಗಳಿಗೆ ಪರಿಹಾರ ಈ ಬಾದಾಮಿ ಎಣ್ಣೆ(Badam Oil).
ಹಲವರಿಗೆ, ಒಣ ತ್ವಚೆ ಕೊಂಚ ಸವಾಲಿನದ್ದಾಗಿದೆ.

ಒಣ ತ್ವಚೆಯನ್ನು ತಡೆಗಟ್ಟಲು ಹಲವಾರು ಔಷಧಿಗಳಿವೆ. ಆದರೆ ಬಾದಾಮಿ ಎಣ್ಣೆ ಅತ್ಯುತ್ತಮವಾಗಿದ್ದು, ಟೋನರ್ ನಂತೆ ಇದನ್ನು ತ್ವಚೆಗೆ ಬಳಸಬಹುದಾಗಿದೆ.
ಯೌವನವನ್ನು ಕಾಪಾಡಲು ಮತ್ತು ತಾಜಾ ಆಗಿರಿಸಲು ಬಾದಾಮಿ ಎಣ್ಣೆ ಪ್ರಮುಖವಾದುದು. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ, ಆದ್ದರಿಂದ ಬಾದಾಮಿ ಎಣ್ಣೆ ಅತ್ಯುತ್ತಮವಾಗಿದೆ.
ಇದನ್ನೂ ಓದಿ : https://vijayatimes.com/fir-filed-over-trs-leader/
ಸ್ಪ್ರೇ ಬಾಟಲಿನಲ್ಲಿ 2 ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮತ್ತು ಅದಕ್ಕೆ 1 ಚಮಚ ರೋಸ್ ವಾಟರ್ ಬೆರೆಸಿ, ಚೆನ್ನಾಗಿ ಶೇಕ್ ಮಾಡಿ. ನಿಮ್ಮ ಮುಖಕ್ಕೆ ಇದನ್ನು ಸ್ಪ್ರೇ ಮಾಡಿ.
ನಿತ್ಯವೂ ಇದನ್ನು ಬಳಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ನೀವು ಫ್ರಿಡ್ಜ್ನಲ್ಲಿ ಕೂಡ ಸಂಗ್ರಹಿಸಿಡಬಹುದಾಗಿದೆ.

ಅದೇ ರೀತಿ, 1 ಚಮಚ ಕಡಲೆಹಿಟ್ಟನ್ನು ಒಂದು ಬೌಲ್ನಲ್ಲಿ ತೆಗೆದುಕೊಳ್ಳಿ, ಇದಕ್ಕೆ 1 ಚಮಚ ಲಿಂಬೆ ರಸ ಸೇರಿಸಿ ಮತ್ತು 1 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿಕೊಳ್ಳಿ. ಟ್ಯಾನ್(TAN) ಇರುವ ಸ್ಥಳಕ್ಕೆ ಇದನ್ನು ಹಚ್ಚಿ. 15 ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.
ಇದನ್ನೂ ಓದಿ : https://vijayatimes.com/iran-women-protest/
ಕಪ್ಪು ವರ್ತುಲವನ್ನು ನಿವಾರಿಸಲು : ನೀವು ಕಣ್ಣುಗಳ ಸುತ್ತಲು ಕಪ್ಪಗಿನ ವರ್ತುಲವನ್ನು ಹೊಂದಿದ್ದೀರಿ ಎಂದಾದಲ್ಲಿ ಬಾದಾಮಿ ಎಣ್ಣೆ ಇದಕ್ಕೆ ಪರಿಹಾರವನ್ನು ಒದಗಿಸಲಿದೆ.
ಹತ್ತಿಯನ್ನು ಈ ಎಣ್ಣೆಯಲ್ಲಿ ಮುಳಗಿಸಿ ಮತ್ತು ಕಪ್ಪು ವರ್ತುಲದ ಕೆಳಗೆ ಹಚ್ಚಿ. ಇದು ಕಣ್ಣುಗಳ ಕೆಳಗಿರುವ ಊತವನ್ನು ನಿವಾರಿಸುತ್ತದೆ ಮತ್ತು ಕಪ್ಪು ವರ್ತುಲವನ್ನು ದೂರ ಮಾಡುತ್ತದೆ.

ಹಾಗೆಯೇ, Ph ನಿಯಂತ್ರಣವನ್ನು ಮಾಡುವ ಮೂಲಕ ಹೆಚ್ಚಿನ ಎಣ್ಣೆಯನ್ನು ನಿಯಂತ್ರಿಸಿ ಮೊಡವೆ(Pimples) ತಡೆಗಟ್ಟಲು ಬಾದಾಮಿ ಎಣ್ಣೆ ಕೆಲಸ ಮಾಡುತ್ತದೆ.
ನಿತ್ಯವೂ ಈ ಎಣ್ಣೆಯನ್ನು ಬಳಸಲು ಇದನ್ನು ಲಿಂಬೆ ರಸದೊಂದಿಗೆ ಬೆರೆಸಿ ಹಚ್ಚಿಕೊಳ್ಳಿ. ಹತ್ತಿಯ ಉಂಡೆಯನ್ನು ಬಳಸಿಕೊಂಡು ಮೊಡವೆ ಇರುವ ಜಾಗಕ್ಕೆ ಇದನ್ನು ಹಚ್ಚಿ ಮೊಡವೆ ಕೂಡಲೇ ನಿವಾರಣೆಯಾಗುತ್ತದೆ.
- ಪವಿತ್ರ