ಬೆಂಗಳೂರು, ಜು. 09: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಜಟಾಪಟಿ ತಾರಕಕ್ಕೇರಿದೆ. ಇಷ್ಟು ದಿನಗಳ ಕಾಲ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಇವರಿಬ್ಬರ ಕಿತ್ತಾಟ ಇದೀಗ ವೈಯಕ್ತಿಯ ವಾಕ್ ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡುವ ಭರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿರುವ ಸಮಲತಾ, ತಮಗೆ ಸಂಸ್ಕಾರ ಇದ್ದರೆ ಅಂಬರೀಶ್ ಅವರ ಬಗ್ಗೆ ಮಾತಾಡೋದು ಬಿಡಿ.
ರಾಜ್‌ಕುಮಾರ್, ವಿಷ್ಣು, ಅಂಬಿ ಬಗ್ಗೆ ಮಾತಾಡೋ ಮುನ್ನ ಸಂಸ್ಕಾರ ಇಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಂಬರೀಶ್ ಸ್ಮಾರಕವನ್ನ ಕುಮಾರಸ್ವಾಮಿ ಮಾಡಿಲ್ಲ. ಸ್ಮಾರಕ ಕೇಳಲು ಹೋದಾಗ ಪೇಪರ್ ಮುಖದ ಮೇಲೆ ಎಸೆದಿದ್ರು. ಅಂಬರೀಶ್ ಹೆಸರು ಹೇಳಿ ಅನುಕಂಪ ಗಿಟ್ಟಿಸುತ್ತೀರಾ
ಯಾಕೆ ಕುಮಾರಸ್ವಾಮಿ ಹೀಗೆ ಆಟ ಆಡ್ತಿದ್ದೀರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಹರಿಹಾಯ್ದ ಅವರು, ಲೂಸ್ ಟಾಕೋ, ಆರೋಪನೋ, ಅವರು ಇದೇ ರೀತಿ ಮಾತಾಡ್ತಿರಲಿ. ಅವರ ನಿಜ ಸ್ವರೂಪ ಜನರಿಗೆ ಗೊತ್ತಾಗಿದೆ
ಅಂಬರೀಶ್ ಕಾಲದಲ್ಲಿ ನಡೆದಿರುವ ಅಕ್ರಮ ದಾಖಲೆ ತರಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಸವಾಲು ಹಾಕಿದರು.