• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಸ್ಟ್ರಾಂಗ್ ಮಹಿಳೆಯಾದವಳು ಒಬ್ಬ ಪುರುಷನಿಗಾಗಿ ಈ ವಿಚಾರಗಳಲ್ಲಿ ರಾಜಿಯಾಗುವುದಿಲ್ಲ

Sharadhi by Sharadhi
in ಲೈಫ್ ಸ್ಟೈಲ್
ಸ್ಟ್ರಾಂಗ್ ಮಹಿಳೆಯಾದವಳು ಒಬ್ಬ ಪುರುಷನಿಗಾಗಿ ಈ ವಿಚಾರಗಳಲ್ಲಿ ರಾಜಿಯಾಗುವುದಿಲ್ಲ
0
SHARES
0
VIEWS
Share on FacebookShare on Twitter

ಪ್ರೀತಿಯ ಹುಡುಗಿಯರೇ, ಹುಡುಗನನ್ನ ಪ್ರೀತಿಸೋದು, ಸಂಬಂಧದಲ್ಲಿದ್ದಾಗ ಆತನಿಗೆ ಎಲ್ಲವನ್ನೂ ಧಾರೆ ಎರೆಯುವುದು ನಿಜವಾದ ಪ್ರೀತಿಯ ಸಂಕೇತವೇ, ಆದರೆ ಆತನಿಗಾಗಿ ನಿಮ್ಮತನವನ್ನು ಕಳೆದುಕೊಳ್ಳುವುದು ಸರಿಯಲ್ಲ. ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳದೇ, ಆತನ ಹಿಂದೆ ಎಲ್ಲದಕ್ಕೂ ಓಡುವುದು ನೀವು ವೀಕ್ ಎಂದು ಬಿಂಬಿಸುತ್ತದೆ. ಪ್ರೀತಿಯಲ್ಲಿ ಬಿದ್ದ ತಕ್ಷಣ ಅವರನ್ನೇ ಸುತ್ತುವುದನ್ನು ಬಿಟ್ಟು, ಪರಸ್ಪರರ ಪ್ರತ್ಯೇಕತೆಯನ್ನು ಗೌರವಿಸಬೇಕು. ಆದ್ದರಿಂದ, ಪ್ರಬಲ ಮಹಿಳೆ ಒಬ್ಬ ಪುರುಷನಿಗೋಸ್ಕರ ಎಂದಿಗೂ ಮಾಡಬಾರದು ಎಂಬ ಪ್ರಮುಖ 5 ವಿಷಯಗಳನ್ನು ಇಲ್ಲಿ ನೀಡಲಾಗಿದೆ:

ಸ್ಟ್ರಾಂಗ್ ಮಹಿಳೆಯಾದವಳು ಒಬ್ಬ ಪುರುಷನಿಗಾಗಿ ಈ ವಿಚಾರಗಳಲ್ಲಿ ರಾಜಿಯಾಗುವುದಿಲ್ಲ, ಅವುಗಳಾವುದೆಂದರೆ:

ನಿಮ್ಮನ್ನು ಬದಲಾಯಿಸಿಕೊಳ್ಳುವುದು:
ನಿಮ್ಮ ಹುಡುಗನಿಗಾಗಿ ನಿಮ್ಮನ್ನು ಬದಲಾಯಿಸಿಕೊಳ್ಳಬಾರದು. ನಿಜವಾಗಿ ಆತ ನಿಮ್ಮನ್ನು ಪ್ರೀತಿಸುವವನಾದರೆ ನೀವು ಹೇಗಿದ್ದರೂ ಒಪ್ಪಿಕೊಳ್ಳುತ್ತಾನೆ. ಅದೇ ಗುಣಗಳನ್ನು ನೋಡಿ ತಾನೇ ಮೊದಲು ಪ್ರೀತಿ ಒಪ್ಪಿಕೊಂಡಿದ್ದು. ಹಾಗಾಗಿ ನಿಮ್ಮ ನಡವಳಿಕೆ ಮತ್ತು ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಅವರು ಒತ್ತಾಯಿಸಿದರೆ, ಅದನ್ನು ಮಾಡಬೇಡಿ. ಆದರೆ ನಿಮ್ಮಲ್ಲಿರುವ ಕೆಲಕೆಟ್ಟ ಗುಣಗಳನ್ನು ಬದಲಾಯಿಸಿಕೊಳ್ಳಲು ನೀವು ಬಯಸಿದರೆ, ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸಲು ಪ್ರಯತ್ಸಿಸುತ್ತಿದ್ದರೆ ಆಗ ಬದಲಾಯಿಸಿಕೊಳ್ಳಿ. ಆದರೆ ಬದಲಾವಣೆಗೆ ಆತ ಕಾರಣವಾಗಿರಬಾರದಷ್ಟೇ.

ನಿಮ್ಮ ನೋಟವನ್ನು ಬದಲಾಯಿಸುವುದು:
ನಿಮಗೆ ನೀವು ದೇವತೆ ಮತ್ತು ನಿಮ್ಮ ದೇಹವು ದೇವಾಲಯವಾಗಿರಬೇಕು. ದೇಹದ ಆಕಾರ ಏನೇ ಇರಲಿ, ಅದು ನಿಮ್ಮದು ಮತ್ತು ಅದನ್ನು ಪ್ರೀತಿಸುವುದು ಮತ್ತು ಕಾಳಜಿ ವಹಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ದೇಹದ ಬಗ್ಗೆ ಇತರರ ಅಭಿಪ್ರಾಯಕ್ಕೆ ನೀವು ಸೊಪ್ಪು ಹಾಕಬಾರದು, ಅದಕ್ಕೆ ಚಿಂತಿಸಲೂ ಬಾರದು. ಒಂದು ವೇಳೆ ನಿಮ್ಮ ನೋಟವನ್ನು ಬದಲಾಯಿಸಲು ನಿಮ್ಮ ಹುಡುಗ ನಿಮ್ಮನ್ನು ಕೇಳಿದರೆ, ಒಂದು ಅರ್ಥ ಮಾಡಿಕೊಳ್ಳಿ, ಆತ ನಿಮ್ಮೊಂದಿಗಿರುವುದು ಪ್ರೀತಿಗಾಗಿ ಅಲ್ಲ, ಬೇರಾವುದೋ ತಪ್ಪು ಉದ್ದೇಶಗಳಿಗಾಗಿ ಎಂದು.

ಒಪ್ಪಿಗಾಗಿ ಕಾಯಬೇಡಿ:
ನಿಮಗೆ ಯಾರ ಅನುಮೋದನೆ ಅಥವಾ ಒಪ್ಪಿಗೆಯ ಅಗತ್ಯವಿಲ್ಲ. ನೀವು ಪ್ರಬುದ್ಧರಾಗಿರುವುದರಿಂದ ಯಾವ ಸಮಯಕ್ಕೆ ಯಾವ ನಿರ್ಧಾರಗಳನ್ನು ತಗೆದುಕೊಳ್ಳಬೇಕು ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ಯಾವುದಾದರೂ ಒಂದು ಸಣ್ಣಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾರದೋ ಒಪ್ಪಿಗೆ ಕೇಳುವ ಅಗತ್ಯವಿಲ್ಲ. ನಿಮಗೆ ಸಂಬಂಧಿಸಿದ ಸಣ್ಣಸಣ್ಣ ವಿಚಾರಗಳಿಗೂ ನಿಮ್ಮ ಹುಡುಗನ ಬಳಿ ಹೋಗಬೇಡಿ. ಈ ಅಭ್ಯಾಸವವನ್ನು ಎಂದಿಗೂ ಬೆಳೆಸಿಕೊಳ್ಳಬೇಡಿ. ನೀವು ಪ್ರೀತಿಸುವ ಮತ್ತು ಮಾಡಲು ಬಯಸುವ ಯಾವುದೇ ಕೆಲಸಕ್ಕೆ ನಿಮ್ಮ ಹುಡುಗನ ಅನುಮೋದನೆ ನೀಡುವವರೆಗೆ ನೀವು ಕಾಯಬಾರದು.

ಪ್ಲಾನ್ ಚೇಂಜ್ ಮಾಡಿಕೊಳ್ಳಬೇಡಿ:
ನಿಮ್ಮ ಹುಡುಗ ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ನಿರಂತರವಾಗಿ ಮುಂದೆ ತಳ್ಳುತ್ತಿದ್ದಾನೆ ಎಂದರೆ ಆತ ನಿಮಗೆ ಯೋಗ್ಯನಲ್ಲ ಎಂದರ್ಥ. ಒಬ್ಬರಿಗೊಬ್ಬರು ಸಮಯ ಕಳೆಯುವುದು ಅಗತ್ಯವಿದ್ದರೂ, ನಿಮ್ಮ ಹತ್ತಿರದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದು ಅವಶ್ಯಕವಾಗಿದೆ. ನಿಮ್ಮ ಹುಡುಗ ಇದನ್ನು ಮಾಡಲು ಹಿಂಜರಿಯುತ್ತಿದ್ದಾನೆ ಎಂದರೆ ನೀವು ಆ ಪ್ಲಾನ್ ಬದಲಾವಣೆ ಮಾಡಿಕೊಳ್ಳಬೇಡಿ.

ರಾಜಿ:
ನಿಮ್ಮ ಗುರಿ, ಮಹತ್ವಾಕಾಂಕ್ಷೆ, ಕನಸಿನ ಕೆಲಸವು ನಿಮ್ಮ ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ತಾಳ್ಮೆಯ ಫಲ. ಆತನಿಗಾಗಿ ಇವುಗಳ ಜೊತೆ ರಾಜಿ ಮಾಡಿಕೊಳ್ಳಬೇಡಿ. ಕೇವಲ ಆತನನ್ನು ಮೆಚ್ಚಿಸಲು ನಿಮ್ಮ ಕನಸುಗಳನ್ನು ಮರೆಯಬೇಡಿ. ಒಬ್ಬ ಸ್ಟ್ರಾಂಗ್ ಮಹಿಳೆ ತನ್ನ ಕನಸುಗಳಿಗೆ ಹಸ್ತಕ್ಷೇಪ ಮಾಡುವುದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ಅಂತಹರನ್ನು ತನ್ನ ಜೀವನದಲ್ಲಿ ಹತ್ತಿರವೂ ಸೇರಿಸುವುದಿಲ್ಲ. ನಿಮ್ಮ ಹುಡುಗ ನಿಮ್ಮ ಗುರಿಗಳಿಗೆ ಪ್ರೋತ್ಸಾಹ ನೀಡುವವನಾಗಿದ್ದರೆ, ಅದನ್ನ ಮುಟ್ಟಲು ಉತ್ತಮವಾಗಿ ಸಲಹೆ ನೀಡುತ್ತಾರೆ.

Related News

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!
ಆರೋಗ್ಯ

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

May 26, 2023
ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!
ಆರೋಗ್ಯ

ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!

May 2, 2023
ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?
Lifestyle

ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?

April 27, 2023
2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.