Belgaum : ಮಹಾತ್ಮ ಗಾಂಧೀಜಿಯವರ (Mahatma Gandhi) ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ (Belgaum) ನಡೆದ ಅಖಿಲ ಭಾರತ ಕಾಂಗ್ರೆಸ್ (India Congress) ಅಧಿವೇಶನಕ್ಕೆ 100 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಬೆಳಗಾವಿಯ ಸುವರ್ಣ ಸೌಧದ (Survana Sowda) ಆವರಣದಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ 3 ಪ್ರಮುಖ ಒತ್ತಾಯಗಳು, 2 ಪ್ರಮುಖ ನಿರ್ಣಯ ಅಂಗೀಕಾರ ಮಾಡಲಾಗಿದೆ.

ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Former Prime Minister Manmohan Singh) ಅವರ ನಿಧನದ ಹಿನ್ನಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಕಾರ್ಯಕ್ರಮಗಳು ರದ್ದಾಗಿವೆ. ಕಾರ್ಯಕ್ರಮಗಳನ್ನು ರದ್ದು ಪಡಿಸಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ (Mallikarjun Kharge and MP Rahul Gandhi) ಅವರು ದೆಹಲಿಗೆ ತೆರಳಿದ್ದಾರೆ. ಇದಕ್ಕೂ ಮುನ್ನವೆ 3 ಪ್ರಮುಖ ಒತ್ತಾಯಗಳು, 2 ಪ್ರಮುಖ ನಿರ್ಣಯ ಅಂಗೀಕಾರ ಮಾಡಲಾಗಿದೆ.
ಎರಡು ಪ್ರಮುಖ ನಿರ್ಣಯಗಳು : (Two important resolutions)
1 – ಕೇಂದ್ರ ಸರ್ಕಾದ (Central Govt) ವಿರುದ್ದ ವರ್ಷವಿಡೀ ಹೋರಾಟ ನಡೆಸುವುದು.
2 – ಪಕ್ಷ ಸಂಘಟನೆಗೆ ವಿಶೇಷ ಒತ್ತನ್ನು ನೀಡುವುದು. ಸದಸ್ಯತ್ವ ನೊಂದಾಣಿಗೆ ಆದ್ಯತೆಯನ್ನು ನೀಡುವುದು.
ಮೂರು ಪ್ರಮುಖ ಒತ್ತಾಯಗಳು: (Three major imperatives)
- ಒಂದು ದೇಶ (Nation) ಒಂದು ಚುನಾವಣೆ (Election) ಜಾರಿಗೆ ತರಬಾರದು.
- ಡಾ. ಅಂಬೇಡ್ಕರ್ (Dr. Ambedkar) ಅವರ ಕುರಿತು ಅಸಭ್ಯವಾಗಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ವಿರುದ್ದ (Amit Shah) ಕ್ರಮ ಕೈಗೊಳ್ಳಬೇಕು.
- ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ (Socially and economically) ಜಾತಿಗಣತಿ ಮಾಡಬೇಕು. ಪರಿಶಿಷ್ಟರ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯ ಮೇಲಿನ ಶೇ. 50 ಮಿತಿಯನ್ನು ಹೆಚ್ಚಿಸಬೇಕು.