ಬೆಂಗಳೂರು : ರಾಜ್ಯದ(State) ರಾಜಧಾನಿ(Capital) ಬೆಂಗಳೂರಿನ(Bengaluru) 9 ಕಡೆಗಳಲ್ಲಿ ಏಕಕಾಲಕ್ಕೆ 100 ಸರ್ಕಾರಿ ಅಧಿಕಾರಿಗಳ(Govt Employees) ಮನೆ, ಕಛೇರಿ ಸೇರಿದಂತೆ ವೈಯಕ್ತಿಕ ಜಾಗಗಳ ಮೇಲೂ ಕಣ್ಣು ಹಾಯಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ACB) ರೇಡ್ ಮಾಡುವ ಮೂಲಕ ಶಾಕ್ ಕೊಟ್ಟಿದೆ. ಬೆಳ್ಳಂಬೆಳಿಗ್ಗೆ ಬೆಂಗಳೂರಿನ 9 ಕಡೆಗಳಲ್ಲಿ ಒಟ್ಟು 100 ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಪಿ.ಎಸ್ ಉಮಾ ಪ್ರಶಾಂತ್ ಅವರ ಮುಂದಾಳತ್ವದಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸ, ಕಛೇರಿ ಮೇಲೆ ದಾಳಿ ಮಾಡಿದ್ದು, ಕಡತಗಳ ಪರಿಶೀಲನೆಯನ್ನು ನಡೆಸಲಾಗುತ್ತಿದೆ.

ಬೆಂಗಳೂರು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಈ ಬಿಸಿ ಮುಟ್ಟಿಸದೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದ ಮಧ್ಯವರ್ತಿಗಳ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ಬಿಡಿಎ ಕಚೇರಿ ಒಳಗಿರಬೇಕಾದ ಅಷ್ಟು ದಾಖಲಾತಿಗಳು ಹೊರಗೆ ಬ್ರೋಕರ್ ಕೈಗಳಲ್ಲಿ ಹರಿದಾಡುತ್ತಿವೆ. ಈ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವುದು ಬಟಾಬಯಲಾಗಿದ್ದು, ಈ ಆರೋಪದ ಹಿನ್ನೆಲೆ ಮಧ್ಯವರ್ತಿಗಳ ಮನೆ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆ, ಆರ್.ಟಿ ನಗರ, ಮಲ್ಲತಹಳ್ಳಿ, ದೊಮ್ಮಲೂರು ಸೇರಿದಂತೆ ಪ್ರಮುಖ ನಗರಗಳ ಮೇಲೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಯಾವ ಅಧಿಕಾರಿ ಮೇಲೆ, ಎಲ್ಲೆಲ್ಲಿ ದಾಳಿ ಮಾಡಲಾಗಿದೆ ಎಂಬುದರ ಪಟ್ಟಿ ಹೀಗಿದೆ.
- ಲಕ್ಷಣ, ಚಾಮುಂಡೇಶ್ವರಿನಗರ, ಬಿಡಿಎ ಲೇಔಟ್
- ಮೋಹನ್, ಮನೋರಾಯನಪಾಳ್ಯ, ಆರ್.ಟಿ ನಗರ
- ಮುನಿರತ್ನ, ಮಲ್ಲತಹಳ್ಳಿ
- ರಾಮ, ಚಾಮುಂಡೇಶ್ವರಿನಗರ, ಬಿಡಿಎ ಲೇಔಟ್
- ಅಶ್ವಥ್, ಮುದ್ದಿನಪಾಳ್ಯ, ಮಲ್ಲತಹಳ್ಳಿ
- ಚಿಕ್ಕಹನುಮಯ್ಯ, ಮುದ್ದಿನಪಾಳ್ಯ
- ರಾಘು ಬಿ.ಎನ್, ಚಾಮರಾಜಪೇಟೆ
- ಮನೋಜ್, ದೊಮ್ಮಲೂರು
- ತೇಜಸ್ವಿ, ಆರ್.ಆರ್ ನಗರ