Coconut: ತೆಂಗಿನಕಾಯಿ ಆರೋಗ್ಯಕ್ಕೆ ಅಮೃತವಿದ್ದಂತೆ. ತೆಂಗಿನ ಕಾಯಿಯೊಳಗಿನ ಪೌಷ್ಟಿಕಾಂಶಗಳಿಗೆ ಲೆಕ್ಕವೇ ಇಲ್ಲ ಬಿಡಿ. ತೆಂಗಿನಕಾಯಿ ಮಿನರಲ್ಸ್ (benefits of coconut sprouts) ಹಾಗೂ ವಿಟಮಿನ್‌ಗಳ ಆಗರವಾಗಿದೆ.
ಹಾಗಾಗಿಯೇ ತೆಂಗಿನ ಕಾಯಿ ಹಾಲನ್ನು ತಾಯಿಯ ಎದೆ ಹಾಲಿಗೆ (benefits of coconut sprouts) ಹೋಲಿಸಲಾಗುತ್ತೆ.
ತೆಂಗಿನ ಕಾಯಿಯ ಮಹತ್ವ ಹೆಚ್ಚಿನವರಿಗೆ ಗೊತ್ತು, ಆದ್ರೆ ತೆಂಗಿನಕಾಯಿಯ ಇನ್ನೊಂದು ಭಾಗದ ಹೆಚ್ಚಿನವರಿಗೇ ಪರಿಚಯವೇ ಇಲ್ಲ. ಪರಿಚಯ ಇದ್ರೂ ಅದನ್ನು ಕಸದ ಬುಟ್ಟಿಗೆ ಎಸೆಯುವವರೇ ಹೆಚ್ಚು.
ಆದ್ರೆ ಇನ್ಮುಂದೆ ಅಂಥಾ ತಪ್ಪು ಮಾಡಬಾರದು. ಹಾಗಾದ್ರೆ ತೆಂಗಿನ ಕಾಯಿಯ ಆ ಮಹತ್ವದ ಭಾಗ ಯಾವುದು ಅದರ ಪ್ರಯೋಜನ ಏನು ತಿಳಿಯೋಣ ಬನ್ನಿ.
ಮೊಳಕೆಯಲ್ಲಿದೆ ಅದ್ಭುತ ಶಕ್ತಿ : ತೆಂಗಿನಕಾಯಿ ಹೆಚ್ಚು ಬಲಿತಾಗ ಮೊಳಕೆಯೊಡೆಯುತ್ತದೆ. ಈ ಮೊಳಕೆಯೊಡೆದ ತೆಂಗಿನಕಾಯಿಯ ಒಳ ತಿರುಳು ಸ್ಪಂಜ್ ರೀತಿಯಲ್ಲಿ ಇರುತ್ತದೆ. ಇದು ಆರೋಗ್ಯಕ್ಕೆ ಒಂದು ದೈವದತ್ತ ವರದಾನವೆಂದೆ ಹೇಳಬಹುದು.
ತೆಂಗಿನ ಸೇಬು, ತೆಂಗಿನ ಮೊಳಕೆ, ಭ್ರೂಣ ಅಥವಾ ತೆಂಗಿನ ಕೂಬು ಎಂದೇ ಕರೆಯಲ್ಪಡುತ್ತದೆ. ತೆಂಗಿನಕಾಯಿ ಮೊಳಕೆಯನ್ನು ಆಂಗ್ಲ ಭಾಷೆಯಲ್ಲಿ coconut apple, sprouted coconut or coconut embryo ಎಂದು ಕರೆಯುತ್ತಾರೆ.

ತೆಂಗಿನಕಾಯಿಯ ಮೊಳಕೆಯಲ್ಲಿ ವಿಟಮಿನ್ ಸಿ (Vitamin C), ವಿಟಮಿನ್ ಬಿ, ವಿಟಮಿನ್ ಬಿ3, ಬಿ5, ಬಿ6, ಬಿ7, ರಂಜಕ, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಅಂಶಗಳು ಹೇರಳವಾಗಿದೆ. ಅಲ್ಲದೆ ಒಮೆಗಾ (Omega) 3 ಹಾಗೂ ಒಮೆಗಾ 6,
ಆರೋಗ್ಯಕರ ಕೊಬ್ಬಿನ ಅಂಶ ಅಧಿಕವಾಗಿದೆ. ಈ ಆರೋಗ್ಯಕರ ಕೊಬ್ಬಿನಂಶ ನಮ್ಮ ದೇಹಕ್ಕೆ ಅತ್ಯಗತ್ಯ ಅಲ್ಲದೆ ಥೈರಾಯಿಡ್, ಹೈಪರ್ ಥೈರಾಯ್ಡ್ ಸಮಸ್ಯೆ ಇರುವವರಿಗೆ ಇದು ರಾಮಬಾಣ.
ತೆಂಗಿನಕಾಯಿಯ ಮೊಳಕೆ ಸುಲಭವಾಗಿ ಜೀರ್ಣವಾಗುವುದರಿಂದ ಶಿಶುಗಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಸೇವಿಸಬಹುದು. ಇದರಿಂದ ಉತ್ತಮ ಆರೋಗ್ಯ ಪ್ರಯೋಜನಗಳಿವೆ.
ಇದನ್ನು ಓದಿ: ಎಎಪಿ ತೊರೆದು ಬಿಜೆಪಿ ಸೇರ್ಪಡೆಯಾದ ಭಾಸ್ಕರ್‌ರಾವ್; ದಿಢೀರ್ ನಿರ್ಧಾರಕ್ಕೆ ಕಾರಣ ಏನು?
ಇದರ ಪೌಷ್ಟಿಕಾಂಶದ ಗುಣವು ಮಾನವನ ರಕ್ತದ ಎಲೆಕ್ಟ್ರೋಲೈಟ್ (Electrolyte) ಮಟ್ಟಗಳಿಗೆ ಸಮಾನವಾಗಿರುವುದರಿಂದ ಶಕ್ತಿಯನ್ನು ವೇಗವಾಗಿ ಹೆಚ್ಚಿಸುತ್ತದೆ. ನಿಶ್ಯಕ್ತಿಯನ್ನು ದೂರಗೊಳಿಸುತ್ತದೆ.
ಅಕಾಲಿಕ ಮುಪ್ಪು ಮತ್ತು ಚರ್ಮದ ತೊಂದರೆಗಳನ್ನು ತಡೆಗಟ್ಟುವ ಸೌಂದರ್ಯವರ್ಧಕ ಮೌಲ್ಯವನ್ನು ಹೊಂದಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮಾರಣಾಂತಿಕ ವೈರಸ್ ಗಳಿಂದ ದೂರವಿರಿಸುತ್ತದೆ. ನಮ್ಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣ ಸಮಸ್ಯೆ ಹಾಗೂ ಕೆಟ್ಟ ಹ್ಯಾಂಗೋವರ್ಗಳಿAದ ನಮ್ಮ ಮಾನಸಿಕ ಬಲವನ್ನು ಹೆಚ್ಚಿಸಲು ಸಹಕರಿಸುತ್ತದೆ.
ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಕರಿಸುತ್ತದೆ. ಮಧುಮೇಹಕ್ಕೆ ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತೆ.

ತೆಂಗಿನ ಕಾಯಿಯ ಮೊಳಕೆಯನ್ನು ಶೇಖರಿಸುವ ವಿಧಾನ…
- ತೆಂಗಿನ ಮೊಳಕೆಯನ್ನು ಎರಡು ದಿನ ಹೊರಗಿನ ವಾತಾವರಣದಲ್ಲಿ ಇಡಬಹುದು.
- ಒಂದು ವಾರದವರೆಗೆ ಫ್ರಿಡ್ಜ್ ನಲ್ಲಿ ಇಡಬಹುದು.
- ಗಾಳಿಯಾಡದ ಫ್ರೀಜರ್ ಗಳಲ್ಲಿ ಎರಡು ಮೂರು ತಿಂಗಳು ಶೇಖರಿಸಬಹುದು. ಈ ಮೊಳಕೆಯಿಂದ ತಯಾರಿಸುವ ವಿಶೇಷ ಖಾದ್ಯಗಳು. ತೆಂಗಿನ ಮೊಳಕೆ ಸಲಾಡ್, ತೆಂಗಿನಕಾಯಿ ಮಿಲ್ಕ್ ಶೇಕ್, ಮೊಳಕೆಯ ದೋಸೆ,ಮೊಳಕೆಯ ಕೀರು,ಮೊಳಕೆಯ ಸಿಹಿ ತಿಂಡಿಗಳು,ಮತ್ತು ತಿರುಳಿನ ರಸಗಳು. ಹೀಗೆ ಹತ್ತು ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು.
ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ತೆಂಗಿನ ಕಾಯಿಯಮೊಳಕೆ ಅಮೃತಕ್ಕೆ ಸಮ ಎಂದರು ತಪ್ಪಿಲ್ಲ.
ಯಶಸ್ವಿನಿಗೌಡ ಆರ್.