Even if you make a loan, eat ghee! Get many benefits.
Health Tips: ಶತಮಾನಗಳಿಂದಲೂ ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪದ ಬಳಕೆ ಸಾಮಾನ್ಯವಾಗಿದೆ. ತುಪ್ಪವು (Ghee) ತನ್ನ ಅದ್ಭುತ ಸುವಾಸನೆ ಮತ್ತು ಹಲವು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ನಿಮ್ಮ ಆಹಾರದಲ್ಲಿ ತುಪ್ಪವನ್ನು ಸರಿಯಾಗಿ ಹೇಗೆ ಸೇರಿಸುವುದು ಅನ್ನೋದನ್ನು ಅರ್ಥ ಮಾಡಿಕೊಂಡರೆ ಅದರ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೆಚ್ಚಿಸಬಹುದು.
ಭಕ್ಷ್ಯಗಳ ಮೇಲೆ ತುಪ್ಪವನ್ನು ಸೇರಿಸುವುದು ಬಹಳಷ್ಟು ಆರೋಗ್ಯ (Health) ಪ್ರಯೋಜನಗಳನ್ನು ನೀಡುತ್ತದೆ. ಆದಾಗ್ಯೂ ಈ ಪ್ರಯೋಜನಗಳನ್ನು ಪಡೆಯಲು ಆಹಾರದಲ್ಲಿ ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸುವುದು ಮುಖ್ಯ.ಅನೇಕ ಮಂದಿ ತಮ್ಮ ದೇಹದ ತೂಕ ಎಲ್ಲಿ ಹೆಚ್ಚಾಗುತ್ತದೆಯೋ ಎಂಬ ಕಾರಣಕ್ಕೆ ಇಷ್ಟವಿದ್ದರೂ ಕೂಡ ತುಪ್ಪ ತಿನ್ನುವುದಿಲ್ಲ.
ಆದರೆ ನಿಮ್ಮ ಈ ಭಾವನೆ ತಪ್ಪು. ಏಕೆಂದರೆ ಯಾವುದನ್ನೇ ಆದರೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ತುಪ್ಪ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಕೊಬ್ಬಿನಾಮ್ಲಗಳ ಉತ್ತಮ ಮೂಲ. ಈ ಕೊಬ್ಬು ವಿಟಮಿನ್ ಎ, ಇ, ಡಿ (Vitamin A,E,D) ಯಲ್ಲಿ ಸಮೃದ್ಧವಾಗಿದೆ.
ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಹಾಲಿನಲ್ಲಿ ಬ್ಯುಟರಿಕ್ ಆಮ್ಲವಿದೆ. ವಿಟಮಿನ್ ಎ ಸೇವನೆಯಿಂದ ದೇಹದಲ್ಲಿ ವಿಟಮಿನ್ ಎ ಕೊರತೆಯನ್ನು ಸರಿದೂಗಿಸಬಹುದು ಎಂದು ವೈದ್ಯರು ಹೇಳುತ್ತಾರೆ.
ತುಪ್ಪ ಸೇವನೆಯು ನಿದ್ರಾಹೀನತೆಯ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ. ಇದು ಅಲ್ಸರ್ ಸಮಸ್ಯೆಯನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ.ತುಪ್ಪ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಅಸಿಡಿಟಿ (Gas, Acidity)ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಕಾಫಿ ಅಥವಾ ಟೀ (Coffee, Tea) ಕುಡಿಯುವ ಬದಲು ಬೆಳಿಗ್ಗೆ ತುಪ್ಪ ತೆಗೆದುಕೊಳ್ಳುವುದು ಉತ್ತಮ.
ತುಪ್ಪ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಎ ದೊರೆಯುತ್ತದೆ. ತುಪ್ಪವನ್ನು ಸೇವಿಸುವುದರಿಂದ ಚರ್ಮವು (Skin) ಹೊಳೆಯುತ್ತದೆ. ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.