Health Tips : ನಮ್ಮ ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದರಲ್ಲಿ ಪೋಷಕಾಂಶಗಳು ಪ್ರಮುಖವಾದ ಪಾತ್ರ ವಹಿಸುತ್ತವೆ.
ನಮ್ಮ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅತೀ ಅಗತ್ಯವಾದ ಪೋಷಕಾಂಶಗಳಲ್ಲಿ ವಿಟಮಿನ್ ಸಿ(Vitamin C) ಮುಖ್ಯವಾದದ್ದು ಎಂದು ಹೇಳಬಹುದು.

ಇದು ದೇಹದಲ್ಲಿ ಕೊಲಾಜನ್ ಸರಿಯಾಗಿ ರೂಪುಗೊಳ್ಳುವುದಕ್ಕೆ ಕಾರಣವಾಗುವುದರ ಜೊತೆಗೆ, ಮೂಳೆಗಳ ಬೆಳವಣಿಗೆ, ರಕ್ತನಾಳದ ಆರೋಗ್ಯ ಮತ್ತು ಗಾಯ ಗುಣಪಡಿಸುವಿಕೆಗೆ ಮುಖ್ಯವಾಗಿದೆ. ಹಾಗಾಗಿಯೇ, ವಿಟಮಿನ್ ಸಿ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು.
ಅದೇ ರೀತಿ, ಚರ್ಮದ ಸೌಂದರ್ಯ(Skin Beauty) ಕಾಪಾಡಿಕೊಳ್ಳುವಲ್ಲಿಯೂ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ.
ಚರ್ಮದ ಕಾಂತಿ ಹೆಚ್ಚಿಸಿ ಹೊಳಪು ನೀಡುವಲ್ಲಿ ವಿಟಮಿನ್ ಸಿ ಸೆರಂ ಪ್ರಮುಖ ಪಾತ್ರವಹಿಸುತ್ತದೆ.
ಈ ವಿಟಮಿಸ್ ಸಿ ಸೆರಂ ಚರ್ಮವನ್ನು ಬಹು ಬೇಗ ಸುಕ್ಕು ಗಟ್ಟದಂತೆ ತಡೆಯುತ್ತದೆ.
ಚರ್ಮದ ಆರೋಗ್ಯವನ್ನು ಕಾಪಾಡುವ ಜೊತೆಗೆ ಶುಷ್ಕತೆಯನ್ನು ಇದು ಕಾಪಾಡುತ್ತದೆ. ಚರ್ಮವು ಬಿರಿಯದಂತೆ, ಒಣಗದಂತೆ ಇದು ಕಾಪಾಡುತ್ತದೆ. ಇದರಿಂದ ಮೃದುವಾದ, ಆರೋಗ್ಯಯುತ ತ್ವಚೆ ನಿಮ್ಮದಾಗುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುವ ಗುಣ ಈ ವಿಟಮಿನ್ ಸಿ ಅಂಶದಲ್ಲಿದೆ.
ಪ್ರತಿ ನಿತ್ಯ ಈ ವಿಟಮಿನ್ ಸಿ ಸೆರಂ ಅನ್ನು ಮುಖಕ್ಕೆ ಕೈ, ಕಾಲಿನ ಚರ್ಮಕ್ಕೆ ಹಚ್ಚುವುದರಿಂದ ಅದರ ಹೊಳಪು ಹೆಚ್ಚುತ್ತದೆ. ಚರ್ಮದ ಆರೋಗ್ಯದ ಜೊತೆಗೆ ಸ್ಕೀನ್ ಟೋನ್ ಕಾಪಾಡುವುದು ಕೂಡ ಅವಶ್ಯ.
ಇದರಲ್ಲಿನ ಈ ವಿಟಮಿನ್ ಸಿ, ಚರ್ಮದ ಗುಣಮಟ್ಟವನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ.

ವಿಟಮಿನ್ ಸಿ ಸೆರಂ ನಮ್ಮ ಪ್ರತಿನಿತ್ಯದ ಬ್ಯೂಟಿ ಪ್ರಾಡಕ್ಟ್ ಆಗಿ ಮಾತ್ರವಲ್ಲದೇ, ಆರೋಗ್ಯ ವರ್ಧಕವಾಗಿಯೂ ಸಹಾಯಕ ಎಂದು ನಮಗೆ ತಿಳಿದಿದೆ.
ಇದರಿಂದ ಚರ್ಮದ ಆರೋಗ್ಯವನ್ನು ದೀರ್ಘಕಾಲ ಕಾಪಾಡಬಹುದು. ಇನ್ನು, ಕಣ್ಣಿನ ಕೆಳಗೆ ಕಾಡುವ ಕಪ್ಪು ವರ್ತುಲಗಳ ಸಮಸ್ಯೆ ಅನೇಕರನ್ನು ಬಾಧಿಸುತ್ತದೆ.
ಅಂತಹ ಡಾರ್ಕ್ ಸರ್ಕಲ್ಗಳಿಂದ(Dark Circles) ಮುಕ್ತಿ ಬೇಕಾದರೆ, ಪ್ರತಿನಿತ್ಯ ಮಲಗುವ ಮುನ್ನ ಕಣ್ಣಿನ ಕೆಳಗೆ ಈ ವಿಟಮಿನ್ ಸಿ ಸೆರಂನಿಂದ ಮಸಾಜ್ ಮಾಡಿ, ವಿಟಮಿನ್ ಸಿ ಸೆರಂ ಅನ್ನು ಹೊರ ಹೋಗುವ ಮೊದಲು ಚೆನ್ನಾಗಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಬಹುದಾಗಿದೆ.
ಇದನ್ನೂ ಓದಿ : https://vijayatimes.com/slogans-near-hindu-temple/
ಇಲ್ಲವಾದಲ್ಲಿ ರಾತ್ರಿ ಮಲಗುವ ಮುನ್ನ ಈ ಸೆರಂ ಅನ್ನು ಮುಖ ಮತ್ತು ಕೈ ಕಾಲಿನ ಚರ್ಮಕ್ಕೆ ತಪ್ಪದೇ ಮಸಾಜ್ ಮಾಡುವುದರಿಂದ ಲಾಭ ಪಡೆಯಬಹುದು.
- ಪವಿತ್ರ