vijaya times advertisements
Visit Channel

ಸೋಲದೇವನಹಳ್ಳಿಯಲ್ಲಿ ಮಕ್ಕಳ ನಿಗೂಢ ನಾಪತ್ತೆ

ಬೆಂಗಳೂರು 11 : ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ಏಳು ಮಕ್ಕಳು ನಾಪತ್ತೆಯಾಗಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯ ಬೆನ್ನಲ್ಲೇ ಮಕ್ಕಳು  ಪೋಷಕರು ಕಂಗಾಲಾಗಿದ್ದಾರೆ. ನಾಪತ್ತೆಯಾಗಿರುವ ಮಕ್ಕಳ ಮನೆಯಲ್ಲಿ ಒಂದೇ ರೀತಿಯ ಪತ್ರ ದೊರೆತಿದ್ದು, ಅನುಮಾನ ಹುಟ್ಟುಹಾಕಿದೆ. 

 ಬೆಂಗಳೂರಿನ ಬಾಗಲಗುಂಟೆಯ ಶೇಷಾದ್ರಿ ಲೇಔಟ್‌ನ ನಿವಾಸಿಯಾಗಿರುವ ಕಿರಣ್‌ ಎನ್.‌ ( 15 ವರ್ಷ), ಪರೀಕ್ಷಿತ್‌ ವಿ. (15 ವರ್ಷ). ನಂದನ್‌ ಎಂ. (15 ವರ್ಷ) ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಸೋಲದೇವನಹಳ್ಳಿಯ  ಎಜಿಬಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಯನ್‌ ಸಿದ್ದಾರ್ಥ್‌ (12 ವರ್ಷ ) ಅಮೃತ ವರ್ಷೀಣಿ (21 ವರ್ಷ ), ಭೂಮಿ (12 ವರ್ಷ ) , ಚಿಂತನ್‌ (12 ವರ್ಷ) ನಾಪತ್ತೆಯಾಗಿದ್ದಾರೆ. 

ಮುಂಜಾನೆ 5 ಗಂಟೆಯ ಸುಮಾರಿಗೆ ಮನೆಯಲ್ಲಿ ವಾಕಿಂಗ್‌ಗೆ ಹೋಗುವುದಾಗಿ ಹೇಳಿ ಮಕ್ಕಳು ಮನೆಗೆ ವಾಪಾಸಾಗಿರಲಿಲ್ಲ. ಬೆಳಗ್ಗೆ 8 ಗಂಟೆಯ ವರೆಗೂ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾದ  ಪೋಷಕರು ಮಕ್ಕಳನ್ನು ಹುಡುಕಾಡುವುದಕ್ಕೆ ಶುರುಮಾಡಿದ್ದಾರೆ. ಸ್ನೇಹಿತರ ಮನೆಗೆ ಕರೆ ಮಾಡಿದಾಗ ತಮ್ಮ ಮಕ್ಕಳೂ ಕೂಡ ನಾಪತ್ತೆಯಾಗಿರೋದು ತಿಳಿದು ಬಂದಿದೆ. ನಂತರ ಮನೆಯಲ್ಲಿ ಹುಡುಕಾಟ ನಡೆಸಿದಾಗ ಎಲ್ಲಾ ಮಕ್ಕಳು ನಾಪತ್ತೆಯಾಗುವುದಕ್ಕೆ ಮೊದಲು ಬರೆದಿಟ್ಟಿದ್ದ ಪತ್ರಗಳು ಪತ್ತೆಯಾಗಿತ್ತು. 

ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ ನಂದನ್‌ ಎಂಬ ಬಾಲಕ ನನಗೆ ಕಬ್ಬಡ್ಡಿ ಆಟದಲ್ಲಿ ಹೆಚ್ಚಿನ ಆಸಕ್ತಿ ಇದ್ದು, ನಾನು ಏನಾದರೂ ಸಾಧನೆ ಮಾಡಿ, ಹಣಗಳಿಸಿ ಮನೆಗೆ ವಾಪಾಸು ಬರುತ್ತೇನೆ ಎಂದು ಪತ್ರ ಬರೆದಿದ್ದಾರೆ ಅಲ್ಲದೇ ಈತನ ಜೊತೆಗೆ ನಾಪತ್ತೆಯಾಗಿರುವ ಪರೀಕ್ಷಿತ್‌ ಕೂಡ ನನಗೆ ಓದಿನಲ್ಲಿ ಆಸಕ್ತಿಯಿಲ್ಲ, ನಾನು ಯಾವುದಾದರೂ ಕ್ರೀಡೆಯಲ್ಲಿ ಸಾಧನೆ ಮಾಡಿ ಬರುತ್ತೇನೆ. ಆದರ ನನ್ನನ್ನು ಹುಡುಕಬೇಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ನಾಗರಾಜ್‌ ಎಂಬವರ ಪುತ್ರ ಕಿರಣ್‌ ಎಂಬಾತ ಕೂಡ ನಾಪತ್ತೆಯಾಗಿದ್ದು, ಕಿರಣ್‌ ಮನೆಯಿಂದ ಹೋಗುವ ವೇಳೆಯಲ್ಲಿ ತಂದೆಯ ಮೊಬೈಲ್‌ ತೆಗೆದುಕೊಂಡು ಹೋಗಿದ್ದಾನೆ. ಆದರೆ ಮೊಬೈಲ್‌ಗೆ ಕರೆ ಮಾಡಿದ್ರೆ ಸ್ವಿಚ್‌ ಆಫ್‌ ಬರುತ್ತಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

 ಇನ್ನೊಂದೆಡೆಯಲ್ಲಿ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ರಾಯನ್‌ ಸಿದ್ದಾರ್ಥ್‌, ಅಮೃತ ವರ್ಷೀಣಿ, ಭೂಮಿ ಹಾಗೂ ಚಿಂತನ್‌ ನಾಪತ್ತೆಯಾಗಿರುವ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪೈಕಿ ಅಮೃತ ವರ್ಷೀಣಿ ಹೊರತು ಪಡಿಸಿದ್ರೆ ಉಳಿದ ಎಲ್ಲರೂ ಕೂಡ 12 ರಿಂದ 15 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ. 

ಎಲ್ಲಾ ಮಕ್ಕಳು ಮನೆಯಲ್ಲಿ ವಾಕಿಂಗ್‌ಗೆ ತೆರಳುವುದಾಗಿ ಹೋಗಿದ್ದರು. ಸೋಲದೇವನಹಳ್ಳಿಯಲ್ಲಿ ನಾಪತ್ತೆಯಾಗಿರುವ ಮಕ್ಕಳು ಮನೆಯಲ್ಲಿ ಒಂದೇ ರೀತಿಯ ಪತ್ರ ಸಿಕ್ಕಿದೆ. ಪತ್ರದಲ್ಲಿ ಸ್ಪೋರ್ಟ್‌ ಐಟಂ, ಚಪ್ಪಲಿ, ಬ್ರಶ್‌, ಪೇಸ್ಟ್‌, ವಾಟರ್‌ ಬಾಟಲಿ, ಹಣ ತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Latest News

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.

ದೇಶ-ವಿದೇಶ

ಪಾಕಿಸ್ತಾನಕ್ಕೆ ಎಫ್-16 : ಜೈಶಂಕರ್ ಹೇಳಿಕೆಗೆ ಅಮೇರಿಕಾ  ಪ್ರತಿಕ್ರಿಯೆ

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್  ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು  ತೀವ್ರವಾಗಿ ಟೀಕಿಸಿದ್ದರು.

ಲೈಫ್ ಸ್ಟೈಲ್

ಇಲ್ಲಿವೆ ನೋಡಿ ವಿಚಿತ್ರ ಸಾಕುಪ್ರಾಣಿಗಳು: ಇವುಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುವುದು ಖಂಡಿತ!

ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ

Priyank
ರಾಜಕೀಯ

‘ಲಂಚ ಕೊಡಬೇಕಾಗಿಲ್ಲ’ ಅಭಿಯಾನವನ್ನು ವಿಧಾನಸೌಧದಲ್ಲೂ ಮಾಡಿ – ಪ್ರಿಯಾಂಕ್ ಖರ್ಗೆ ಆಗ್ರಹ

ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ತಮ್ಮ ಮೇಲಿನ ಹಗರಣ ಆರೋಪಗಳನ್ನು ನ್ಯಾಯಾಂಗ (No bribe campaign) ತನಿಖೆಗೆ ವಹಿಸುತ್ತಿದ್ದರು.