Visit Channel

ಪುಟ್ಟ ಬಾಲಕಿಯ ಪ್ರಾಣ ಕಸಿದುಕೊಂಡ ಗ್ಯಾಸ್ ಆಟೋ!

bengaluru

ಮನೆ ಮನೆಗೆ ಗ್ಯಾಸ್ ಸಾಗಾಟ ಮಾಡುತ್ತಿದ್ದ ಆಟೋ ಚಾಲಕನ ನಿರ್ಲಕ್ಷಕ್ಕೆ ಪುಟ್ಟ ಮಗುವಿನ ಜೀವ ಬಲಿಯಾಗಿದೆ. ಹೌದು, ತನ್ನ ತಾಯಿಯೊಂದಿಗೆ ರಸ್ತೆಯಲ್ಲಿ ಎಳನೀರು ಕುಡಿಯುತ್ತಿದ್ದ ಬಾಲಕಿ ಮೇಲೆ ಆಟೋ ಹರಿದಿದೆ. ನಿಲ್ಲಿಸಿದ್ದ ಆಟೋಗೆ ಹ್ಯಾಂಡ್ ಬ್ರೇಕ್ ಹಾಕದೆ ಆಟೋದಿಂದ ಏಕಾಏಕಿ ಡ್ರೈವರ್ ಇಳಿದಿದ್ದಾನೆ. ರಸ್ತೆ ಕೊಂಚ ಇಳಿಜಾರಿದ್ದ ಕಾರಣ, ಆಟೋ ದಿಢೀರ್ ಮುಂದಕ್ಕೆ ಹೋಗಿದೆ.

ಈ ವೇಳೆ ಮಗುವಿಗೆ ಗುದ್ದಿದ ಆಟೋ, ಮಗುವಿನ ಕುತ್ತಿಗೆ ಮೇಲೆ ಹತ್ತಿಕೊಂಡು ಹೋಗಿರುವ ಪರಿಣಾಮ ಮಗು ಸ್ಥಳದಲ್ಲೇ ಸಾವನಪ್ಪಿದೆ. ತಾಯಿ ಮಗುವನ್ನು ರಕ್ಷಿಸಲು ಹರಸಾಹಸ ಪಟಿದ್ದಾರೆ. ಆದರೂ ಮಗುವಿನ ಜೀವ ಉಳಿದಿಲ್ಲ! ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಆಟೋ ಚಾಲಕ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಈ ದುರ್ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭುವನ ಸಾವನ್ನಪ್ಪಿದ ನಾಲ್ಕೂವರೆ ವರ್ಷದ ಬಾಲಕಿ ಎಂಬುದು ಘಟನೆ ಬಳಿಕ ತಿಳಿದುಬಂದಿದೆ. ಭುವನ ತಂದೆ-ತಾಯಿ ನಾಗಮಂಗಲ ಮೂಲದ ದಂಪತಿ ಎನ್ನಲಾಗಿದೆ. ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಿಚಾರ ತಿಳಿದ ಕೂಡಲೇ ಡ್ರೈವರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಎಸ್ಕೇಪ್ ಆದ ಆಟೋ ಚಾಲಕನ ಹೆಸರು ಧನಂಜಯ್ ಎಂಬುದು ತಿಳಿದುಬಂದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.