ಬೆಂಗಳೂರು ಸೆ 18 : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ಪತ್ರಿಕೆಯ ಸಂಪಾದಕ ಶಂಕರ್ ಅವರ ಪತ್ನಿ ಭಾರತಿ (50), ಇಬ್ಬರು ಪುತ್ರಿಯರಾದ ಸಿಂಚನಾ (33), ಸಿಂಧುರಾಣಿ (30), ಪುತ್ರ ಮಧು ಸಾಗರ (27) ಹಾಗೂ 9 ತಿಂಗಳ ಮಗುವಿನ ಮೃತದೇಹಗಳು ಪತ್ತೆಯಾಗಿವೆ
ಆದರೆ ಮನೆಯಲ್ಲಿದ್ದಎರಡೂವರೆ ವರ್ಷದ ಮಗು ಪ್ರೇಕ್ಷಾ ಬದುಕುಳಿದಿದೆ. ಮಗು ಬದುಕುಳಿಯಲು ಶಂಕರ್ ಮಗ ಅಂದರೆ ಮಗುವಿನ ಮಾವ ಮಧುಸಾಗರ್ ಕಾರಣವಿರಬಹುದು. ತಾಯಿ ಮತ್ತು ಸೋದರಿಯರು ನೇಣಿಗೆ ಶರಣಾದ 1-2 ದಿನ ಬಳಿಕ ಮಧುಸಾಗರ್ ಆತ್ನಹತ್ಯೆಗೆ ಶರಣಾಗಿರುವ ಅನುಮಾನವಿದೆ. ಮನೆಯಲ್ಲಿ ಐವರು ಸಾವನ್ನಪ್ಪಿದ್ದರೂ ಎರಡೂವರೆ ವರ್ಷದ ಮಗು ಫವಾಡವಾಗಿ ಬದುಕುಳಿದೆ. ಆದರೆ ಈ ಮಗುವಿಗೂ ನಿದ್ರೆ ಮಾತ್ರೆ ತಿನ್ನಿಸಿರಬಹುದು ಎಂಬ ಅನುಮಾನ ಮೂಡಿದೆ. ಘಟನೆ ನಡೆದು ಆರು ದಿನಗಳಾದರೂ ಮಗು ಬದುಕಿಳಿದಿದೆ. ಮನೆಯಲ್ಲಿ ಯಾರು ಇಲ್ಲದಿದ್ದರೂ, ಊಟ, ತಿಂಡಿಯಿಲ್ಲದಿದ್ದರೂ ಮಗು ಬದುಕುಳಿದಿದೆ. ಬಹುಶಃ ಮಾತ್ರೆಯಿಂದ ಮಲಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ
ಕೌಟುಬಿಂಕ ಕಲಹಕ್ಕೆ ಆತ್ಮಹತ್ಯೆ ?
ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಶಂಕರ್ ಕುಟುಂಬದಲ್ಲಿಇತ್ತೀಚೆಗೆ ಕೌಟುಬಿಂಕ ಕಲಹ ಉಂಟಾಗಿತ್ತು. ಶಂಕರ್ ತಮ್ಮ ಪುತ್ರಿ ಸಿಂಧುರಾಣಿ ಎಂಬವರನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ, ಪತಿಯ ಜತೆಗೆ ಜಗಳವಾಡಿಕೊಂಡ ಪತ್ನಿ ಸಿಂಧುರಾಣಿ ತವರು ಮನೆಗೆ ವಾಪಸ್ ಆಗಿದ್ದರು. ತಿಂಗಳು ಕಳೆದರೂ ಗಂಡನ ಮನೆಗೆ ವಾಪಸ್ ಆಗದ ಪುತ್ರಿ ಮೇಲೆ ಬೇಸರಗೊಂಡ ಶಂಕರ್ ಕುಟುಂಬ ಸದಸ್ಯರ ಜತೆ ಭಾನುವಾರ ಜಗಳ ಮಾಡಿಕೊಂಡು ಮನೆಯಿಂದ ಹೊರ ಹೋಗಿದ್ದರು.ಜೊತೆಗೆ ನನ್ನ ಎಲ್ಲ ಆಸ್ತಿ, ಹಣವನ್ನು ಪತ್ನಿ, ಮಗನಿಗೆ ನೀಡಿಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಿತ್ತು ಎಂದು ದೂರಿನಲ್ಲಿ ಸ್ಪಷ್ಟ ಪಡಿಸಿದ್ದಾರೆ.