ಬೆಂಗಳುರು ಸೆ 23 : ನಗರದಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದ್ದು ಈ ಹಿನ್ನಲೆಯಲ್ಲಿ ಆರೋಪಿಯನ್ನು ದೇವರಾಜ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಜೀವನ್ಭೀಮಾನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗಲು ಯುವತಿ ನಗರದ ಹೆಚ್ಎಸ್ಆರ್ ಲೇಔಟ್ನಿಂದ ಮುರುಗೇಶಪಾಳ್ಯಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಚಾಲಕ ಯುವತಿ ಪಾನಮತ್ತಳಾಗಿರುವುದನ್ನು ಗಮನಿಸಿ ಆಕೆಯನ್ನು ಆಕೆ ಬುಕ್ ಮಾಡಿದ್ದ ಜಾಗಕ್ಕೆ ಕರೆದುಕೊಂಡು ಹೋಗದೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಚಾರ ಎಸಗಿದ್ದಾನೆಂದು ತಿಳಿದು ಬಂದಿದೆ ಆದರೆ ಯುವತಿ ನೀಡಿದ ಹೇಳಿಕೆ ಭಿನ್ನವಾಗಿದೆ. ಘಟನೆಗೆ ಸಂಬಂಧಿಸಿದಂತೆ ಜೀವನ್ ಭೀಮಾನಗರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಟ್ಟೆ ವಶಕ್ಕೆ ಪಡೆದ ಪೊಲೀಸರು : ಮೊದಲು ಅವನು ಅವನ ಬಟ್ಟೆ ಬಿಚ್ಚಿದ್ದ, ನಂತರ ನನ್ನ ಬಟ್ಟೆಯನ್ನು ಬಿಚ್ಚಿದ್ದ. ಬಳಿಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನ ಹಿನ್ನೆಲೆಯಲ್ಲಿ ಸದ್ಯ ಇಬ್ಬರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಅರೋಪಿ ಸಹ ಪೊಲೀಸರು ವಶಕ್ಕೆ ಪಡೆಯುವಾಗ ಅದೇ ಬಟ್ಟೆಯಲ್ಲಿ ಇದ್ದ, ಇತ್ತ ಆಕೆಯೂ ಅದೇ ಬಟ್ಟೆಯಲ್ಲಿ ಇದ್ದಳು. ನಂತರ ಇಬ್ಬರ ಬಟ್ಟೆ ವಶಕ್ಕೆ ಪಡೆದುಕೊಳ್ಳಲಾಗಿದೆ.