- ವಾಯು ಮಾಲಿನ್ಯದಿಂದ ಉಸಿರಾಟ ಸಂಬಂಧಿತ ಸಮಸ್ಯೆಗಳ ಹೆಚ್ಚಳ (Bengaluru Deteriorating air quality)
- ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ
- ಸಿಲ್ಕ್ ಬೋರ್ಡ್ ಸುತ್ತಮುತ್ತ 125 ಏರ್ ಕ್ವಾಲಿಟಿ ಇಂಡೆಕ್ಸ್ (AQI) ಪ್ರಮಾಣ
Bengaluru: ಮಹಾನಗರಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ(air quality) ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅದರಲ್ಲೂ ನಗರದಲ್ಲಿ ಅತಿ ಹೆಚ್ಚಿನ ಜನನದಟ್ಟಣೆ ಕಂಡುಬರುವ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸರಾಸರಿಗಿಂತ ಹೆಚ್ಚಿನ ದಾಖಲಾಗುತ್ತಿದ್ದು,
ಜನಸಾಮಾನ್ಯರ ಆರೋಗ್ಯದ(health) ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ವಾಯುಗುಣಮಟ್ಟ ಕುಸಿಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ನಗರದ ಹಲವು ಭಾಗಗಳಲ್ಲಿ ಮಂಡಳಿ ಅಳವಡಿಕೆ ಮಾಡಿರುವ ಏರ್ ಕ್ವಾಲಿಟಿ ಇಂಡೆಕ್ಸ್ ಮಾಪಕಗಳು ನೀಡಿರುವ ಮಾಹಿತಿ ಪ್ರಕಾರ, ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಕುಸಿತ ಸರಾಸರಿಗಿಂತ ಹೆಚ್ಚಾಗಿದೆ.
ಅದರಲ್ಲೂ ಸಿಲ್ಕ್ ಬೋರ್ಡ್(Silk board) ಸುತ್ತಮುತ್ತ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಪ್ರಮಾಣ 125 ಮುಟ್ಟಿದೆ.
ಮಾರ್ಗಸೂಚಿಗಳ ಪ್ರಕಾರ 63 ಸರಾಸರಿ AQI ಮಟ್ಟ ಆಗಿದ್ದು, ಮೆಜೆಸ್ಟಿಕ್ ಸಿಟಿ ರೈಲ್ವೆ ನಿಲ್ದಾಣ(Majestic City Railway Station),
ಪೀಣ್ಯ(Peenya), ಕಸ್ತೂರಿನಗರ(Kasturinagar), ಮೈಲಸಂದ್ರ(Mylasandra) ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚಿನ AQI ದಾಖಲಾಗಿದೆ.
ಇನ್ನು ದಿನಾಂಕ 10-7-2025ರ ಪ್ರಕಾರ ಬೆಂಗಳೂರಿನ ವಿವಿಧ ಪ್ರದೇಶಗಳ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಮಾಣವನ್ನು ಇಲ್ಲಿ ನೀಡಲಾಗಿದ್ದು ಸಿಲ್ಕ್ ಬೋರ್ಡ್ – 125,ಪೀಣ್ಯ – 73,ಸಿಟಿ ರೈಲ್ವೆ ನಿಲ್ದಾಣ – 93,ಕಸ್ತೂರಿ ನಗರ – 68,ಮೈಲಸಂದ್ರ – 72 ಒಟ್ಟಿನಲ್ಲಿ AQI ಪ್ರಮಾಣ 63 ಸರಾಸರಿಯಾಗಿದ್ದು,
ಅದು ದಾಟಿದರೆ ಅನಾರೋಗ್ಯಕರ(Unhealthy) ಎಂದು ಹೇಳಲಾಗಿದೆ. ಇನ್ನು ಸಿಲ್ಕ್ ಬೋರ್ಡ್ ನಲ್ಲಿ ಈ ಪ್ರಮಾಣ 125 ಮುಟ್ಟಿದ್ದು, ಇದು ಉಸಿರಾಡಲು ಅಪಾಯ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಆಹ್ವಾನ ಎನ್ನಲಾಗಿದೆ.
ಇದನ್ನು ಓದಿ : ಏರ್ ಇಂಡಿಯಾ ವಿಮಾನ ದುರಂತ: ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ
ಹೀಗಾಗಿ ಪರಿಸರ ಇಲಾಖೆ(Department of Environment) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ (Bengaluru Deteriorating air quality) ಮಂಡಳಿ ವಾಯು ಗುಣಮಟ್ಟ ಸುಧಾರಿಸುವತ್ತ ಗಮನ ಹರಿಸಬೇಕಿದೆ.