Bengaluru : ಬೆಂಗಳೂರಿನ ಹನುಮಂತನಗರದ(Bengaluru Gang sets Ablaze) ಹೋಟೆಲ್ ನಲ್ಲಿ ತಮಗೆ ಮೊಟ್ಟೆ ಮತ್ತು ಚಿಕನ್ ರೋಲ್ ನೀಡಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ನಿವಾಸಕ್ಕೆ ಗುಂಪೊಂದು ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಕೊಠಡಿಯ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪುಂಡರನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ!
ಘಟನೆಯ ವಿವರ : ಭಾನುವಾರ ರಾತ್ರಿ ಬೆಂಗಳೂರಿನ (Bengaluru Gang sets Ablaze) ಹನುಮಂತನಗರದ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಮೂರು ಜನರ ಗ್ಯಾಂಗ್ ಹೋಟೆಲ್‌ಗೆ ಆಗಮಿಸಿ, ಚಿಕನ್ ರೋಲ್, ಮೊಟ್ಟೆಯನ್ನು ಆರ್ಡರ್ ಮಾಡಿದೆ.
ಆದ್ರೆ, ಇದನ್ನು ಪೂರೈಸಲು ಹೋಟೆಲ್(Hotel) ಸಿಬ್ಬಂದಿ ನಿರಾಕರಿಸಿದ್ದಾರೆ.
ಕಾರಣ, ಹೋಟೆಲ್ ಸಿಬ್ಬಂದಿ ವಸ್ತುಗಳನ್ನು ಸ್ವಚ್ಛಗೊಳಿಸಿ ಮನೆಗೆ ತೆರಳುವ ವೇಳೆಗೆ ಪುಂಡರು ಈ ತಕರಾರು ತೆಗೆದಿದ್ದಾರೆ ಎನ್ನಲಾಗಿದೆ.
ಹೋಟೆಲ್ ಸಿಬ್ಬಂದಿ ಊಟ ಇಲ್ಲ, ಈಗ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಕ್ಕೆ ಕೋಪಗೊಂಡ ಮೂವರು, ನಮಗೆ ಹಸಿವಾಗಿದೆ! ಊಟ ಬೇಕು, ಕೊಡಿ ಎಂದು ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/top-10-football-players/
ಹೋಟೆಲ್ ಸಿಬ್ಬಂದಿ ಮತ್ತು ಮೂರು ಜನರ ನಡುವೆ ಪ್ರಾರಂಭವಾದ ವಾಗ್ವಾದ ತಾರಕಕ್ಕೇ ಏರಿದೆ. ಮಾತಿಗೆ ಮಾತು ಬೆಳೆದಂತೆ ಸ್ಥಳೀಯರು ಮಧ್ಯೆಪ್ರವೇಶಿಸಿ, ಹೋಟೆಲ್ ಸಿಬ್ಬಂದಿ ಮತ್ತು ಗ್ಯಾಂಗ್ ಅನ್ನು ಸಮಾಧಾನಪಡಿಸಿ ಕಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಗಲಾಟೆ ಬಗೆಹರಿದು ಎಲ್ಲಾ ಸರಿಹೋಯಿತು ಎಂದು ಎಲ್ಲರು ಹಿಂದಿರುಗಿದ ವೇಳೆ,
ಮೂವರು ಸ್ಥಳದಿಂದ ಹೋಗದೆ, ಹೋಟೆಲ್ ಸಿಬ್ಬಂದಿ ಮನೆಗೆ ಹೋಗುವಾಗ ಅವರನ್ನು ಹಿಂಬಾಲಿಸಿಕೊಂಡು ಹೋಗಿ, ಬೆಳಿಗ್ಗೆ 3:30ರ ಸುಮಾರಿಗೆ ಅವರ ಮನೆಯ ಬಾಗಿಲಿಗೆ, ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಮನೆಗೆ ಬೆಂಕಿ ಹಚ್ಚಿದ ಕೂಡಲೇ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : https://vijayatimes.com/drishyam-2-reaches-cr-club/
ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಆರೋಪಿಗಳು ಕೊಪ್ಪಳ ಮತ್ತು ಗುಲ್ಬರ್ಗದ ಕಟ್ಟಡ ಕಾರ್ಮಿಕರು ಎಂದು ಹೇಳಿದ್ದಾರೆ. ನೆರೆಹೊರೆಯವರು ಬೆಂಕಿಯನ್ನು ಕಂಡು ನಂದಿಸಲು ಕೂಡಲೇ ಸ್ಥಳಕ್ಕೆ ಧಾವಿಸಿ, ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಹೋಟೆಲ್ ಮಾಲೀಕ ನಿತೀಶ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ದೇವರಾಜ್ (23) ಮತ್ತು 15 ವರ್ಷದ ಇಬ್ಬರು ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಮೂರನೇ ಆರೋಪಿ ಗಣೇಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 436 (ಬೆಂಕಿ ಅಥವಾ ಮನೆ ಧ್ವಂಸ ಮಾಡುವ ಉದ್ದೇಶದಿಂದ ಸ್ಫೋಟಕ ವಸ್ತುಗಳಿಂದ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.