Mahalakshmi Murder Case: Fingerprints of many people found in the house of the murdered, investigation intensified.
Bengaluru: ಬೆಂಗಳೂರು ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಕೊಲೆ (Bengaluru Mahalaxmi Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಕೊಲೆಯಾದ ಮನೆಯಲ್ಲಿ ಹಲವರ ಬೆರಳಚ್ಚು ಗುರುತು ಪತ್ತೆಯಾಗಿದೆ.
ಮಹಾಲಕ್ಷ್ಮೀಯನ್ನು(Mahalakshmi) 50 ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟು, ಆರೋಪಿ ಪರಾರಿಯಾಗಿದ್ದಾನೆ. ಕೊಲೆಯಾದ ಮನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಆರೋಪಿಯ ಗುರುತಿಗಾಗಿ ಶೋಧ ನಡೆಸಿದಾಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿದ್ದು, ಈ ಮೂಲಕ, ಮಹಾಲಕ್ಷ್ಮೀಯನ್ನು ಹಲವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.
ಈ ನಡುವೆ ಮಹಾಲಕ್ಷ್ಮಿಯ ತಾಯಿ ಮೀನಾ ಕೊಟ್ಟಿರುವ ದೂರಿನಲ್ಲಿ ಹಲವು ಸಂಗತಿಗಳು ಬಯಲಾಗಿವೆ. ಕೊಲೆಯಾದ ಈ ಮಹಾಲಕ್ಷ್ಮೀ ಎರಡನೇ ಮಗಳು. ಹೇಮಂತ್ ದಾಸ್ ಎಂಬುವುರ ಜೊತೆ ಅರೇಂಜ್ಡ್ ಮ್ಯಾರೆಜ್ (Arranged Marriage) ಆಗಿದ್ದರು. ಮೂರನೇಯವನು ಮಗ ಉಕ್ಕುಂ ಸಿಂಗ್, ಡೆಲಿವರಿ ಬಾಯ್ (Delivery Boy) ಆಗಿದ್ದಾರೆ. ನಾಲ್ಕನೆಯವನು ನರೇಶ್, ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಮಹಾಲಕ್ಷ್ಮೀ ಕಳೆದ ಒಂಬತ್ತು ತಿಂಗಳಿನಿಂದ ಪತಿಯಿಂದ ದೂರವಿದ್ದಳು. ಕಳೆದ ವರ್ಷ ಅಕ್ಟೋಬರ್ನಲ್ಲಿ ವೈಯಾಲಿಕಾವಲ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಉಕ್ಕುಂ ಸಿಂಗ್ (Ukkum Singh) ಮತ್ತು ಆತನ ಪತ್ನಿ ಹಾಗೂ ಮಹಾಲಕ್ಷ್ಮೀ ಒಟ್ಟಿಗೆ ಇದ್ದರು. ಅಕ್ಕ ಮಹಾಲಕ್ಷ್ಮೀ, ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದಳು ಅಂತ ಉಕ್ಕುಂ ಸಿಂಗ್ ಬೇರೆ ಮನೆ ಮಾಡಿದರು. ಹೀಗೆ ಗಂಡನ ಜೊತೆಗಿನ ಜಗಳ, ಸಹೋದರನ ಜೊತೆಗಿನ ಮುನಿಸು, ಮನೆ ಬಿಟ್ಟು ಹೋಗಿದ್ದು ಎಲ್ಲವೂ ಬಯಲಾಗಿದೆ.
ಆದರೆ, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ (B Dayanand)ಅವರು ಹೇಳುವ ಪ್ರಕಾರ ಆರೋಪಿ ಹೊರ ರಾಜ್ಯದವನಾಗಿದ್ದು, ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದನಂತೆ. ಆರೋಪಿ, ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಕೊಲೆ ಮಾಡಿದ್ದು ಒಬ್ಬರ ಅಥವಾ ಇಬ್ಬರಾ ಎಂಬವುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.