Bengaluru : 2021 ತಂತ್ರಜ್ಞಾನದ ಮೂಲಕ ನಡೆಯುತ್ತಿದ್ದಈ ಮೆಟ್ರೋ ಕಾಮಗಾರಿಯನ್ನು ತೆಲಂಗಾಣದ ಹೈದ್ರಾಬಾದ್ ಮೂಲದ ಕಂಪನಿ ಒಂದು (NCC) ನಡೆಸುತ್ತಿತ್ತು.

ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ವೇಳೆ ಪಿಲ್ಲರ್‌ಗೆ ನಿಲ್ಲಿಸಿದಂತಹ ರಾಡ್‌ಗಳು ಏಕಾಏಕಿ ರಸ್ತೆಗೆ ಬಿದ್ದಿದೆ.

ಮೆಟ್ರೊ ಪಿಲ್ಲರ್ ಕುಸಿದ ಪರಿಣಾಮವಾಗಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಲೋಹಿತ್ ಕುಮಾರ್, ಆತನ ಪತ್ನಿ ತೇಜಸ್ವಿನಿ (35) ಹಾಗೂ ವಿಹಾನ್(2 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ. ದುರಾದೃಷ್ಟವಶಾತ್ ತಾಯಿ ಮತ್ತು ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸದ್ಯ ಕುಸಿದು ಬಿದ್ದ ನಿರ್ಮಾಣ ಹಂತದ ಪಿಲ್ಲರ್ ರಾಡ್ಗಳನ್ನು ತೆರವು ಮಾಡುವ ಕಾರ್ಯ ಆರಂಭವಾಗಿದೆ. ಗ್ಯಾಸ್ ಕಟರ್ ಮೂಲಕ ರಾಡ್ಗಳನ್ನು ಕಟ್ ಮಾಡಿ ಮೆಟ್ರೋ ಪಿಲ್ಲರ್ ತೆಗೆದು ಸ್ಥಳಾಂತರಿಸಲಾಗುತ್ತಿದೆ.