Bangalore: ಹೊಸ ವರ್ಷ ಆಚರಣೆಗೆ (New Year celebration) ಕ್ಷಣಗಣನೆ ಶುರುವಾಗಿದೆ,ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ (Great preparation) ಕೂಡ ನಡೆದಿದೆ ಹೊಸ ವರ್ಷ ಅಂದರೆ ಪಾರ್ಟಿ (Party),ಕುಡಿತ (Drinks),ಮೋಜು ಮಸ್ತಿ.ಈ ಮೋಜು ಮಸ್ತಿ ಬೆಂಗಳೂರಿನಲ್ಲಿ ಹೆಚ್ಚು ಎಂದರೆ ತಪ್ಪಾಗಲಾರದು.ಹೊಸ ವರ್ಷದ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ (Unpleasant incident) ನಡೆಯದಂತೆ ಪೊಲೀಸ್ ಇಲಾಖೆ (Police Department) ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು (Precautionary measure) ಕೈಗೊಂಡಿದ್ದಾರೆ.ಎಂ ಜಿ ರೋಡ್ (MG Road) ,ಬ್ರಿಗೇಡ್ ರಸ್ತೆಯಲ್ಲಿ (Brigade Road) ಭದ್ರತೆ ಬಿಗಿಗೊಳಿಸಲಾಗಿದೆ.

ಹೊಸ ವರ್ಷ ಅಂದರೆ ಅಲ್ಲಿ ಅಮಲು ತೂರಾಟ ಇದ್ದೆ ಇರುತ್ತೆ,ಈಗಾಗಿ ಕುಡಿದು ತೇಲಾಡುವವರಿಗೆ ಪೊಲೀಸರು ಆ್ಯಂಬುಲೆನ್ಸ್ (Ambulance) ವ್ಯವಸ್ಥೆ ಮಾಡಿದ್ದಾರೆ.ಕುಡಿದು ತೇಲಾಡಿ ಬಿದ್ದು ಗಾಯಗೊಂಡವರನ್ನ ಆಸ್ಪತ್ರೆಗೆ (Hospital) ಸೇರಿಸಲು ಈ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು (Bangalore Police) ಹೇಳಿದ್ದಾರೆ.ಇನ್ನು ಪಬ್ಗಳ (Pubs) ಮುಂದೆ ಪೊಲೀಸ್ ವಿಡಿಯೋ ಕ್ಯಾಮರಾ (Video camera) ಅಳವಡಿಸಲಾಗುತ್ತದೆ. ಇದಕ್ಕಾಗಿ ಪಬ್ಗಳ ಮುಂದೆ ಒಬ್ಬೊಬ್ಬ ಸಿಬ್ಬಂದಿ ನಿಯೋಜನೆ ಮಾಡಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ (Police Department) ಸ್ಪಷ್ಟನೆ ನೀಡಿದೆ.ಕಳೆದ ಬಾರಿಗಿಂತ ಈ ಬಾರಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಇರುವ ಕ್ಯಾಮೆರಾಗಳನ್ನ ಬಿಟ್ಟು 180 ಕ್ಯಾಮೆರಾಗಳನ್ನ (Camera) ಅಳವಡಿಸಲಾಗಿದೆ.
ಮಹಿಳೆಯರ ಸುರಕ್ಷತೆಗಾಗಿ 15 ಸೇಫ್ಟಿ ಐಲ್ಯಾಂಡ್ (Safety Island),15 ವಾಚ್ ಟವರ್ (Watch Tower) ಸ್ಥಾಪಿಸಲಾಗಿದೆ. ಮೂರು ಆ್ಯಂಬುಲೆನ್ಸ್ ಜೊತೆ 2 ಪ್ರೈಮರಿ ಹೆಲ್ತ್ ಸೆಂಟರ್ (Primary Health Centre) ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ (St. John’s Hospital) 10 ಬೆಡ್ಗಳನ್ನು ರಿಸರ್ವ್ ಮಾಡಲಾಗಿದ್ದು. ಕೋರಮಂಗಲ (Koramangala) ಬಿಟ್ಟು ಮೈಕೋ ಲೇಔಟ್ (Mico Layout) ಕಡೆಯಲ್ಲೂ ವ್ಯವಸ್ಥೆ ಮಾಡಲಾಗಿದೆ.ಸದ್ಯಕ್ಕೆ 500ಕ್ಕಿಂತ ಹೆಚ್ಚು ಹೋಂಗಾರ್ಡ್, 700 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನ ಭದ್ರತೆಗೆ ನಿಯೋಜಿಸಲಾಗಿದೆ ಎಂದಿದ್ದಾರೆ.

ಇನ್ನು ಎಂಜಿ ರೋಡ್,ಬ್ರಿಗೇಡ್ ರೋಡ್,ಕೋರಮಂಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡುವುದರಿಂದ ವಾಹನ ಸಂಚಾರಕ್ಕೆ (Vehicular traffic) ಅಡಚಣೆಯಾಗದಂತೆ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರು (Bangalore City Traffic Police) ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ನಗರದಲ್ಲಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧಿಸಿದ್ದಾರೆ.ಎಂ.ಜಿ ರಸ್ತೆ (MG Road), ಬ್ರಿಗೇಡ್ ರಸ್ತೆ (Brigade Road), ಕೋರಮಂಗಲ (Koramangala) , ಇಂದಿರಾನಗರ (Indiranagar) 100 ಅಡಿ ರಸ್ತೆ ಇತ್ಯಾದಿ ಕಡೆಗಳಲ್ಲಿ ಹೆಚ್ಚಿನ ಜನ ಸೇರುತ್ತಾರೆ.ಈ ವೇಳೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ರಸ್ತೆಗಳಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ತಿಳಿಸಿದ್ದಾರೆ.