Bengaluru : ದಕ್ಷಿಣ ಬೆಂಗಳೂರಿನಲ್ಲಿ(South Bengaluru) ಈದ್-ಎ-ಮಿಲಾದ್(EID-Milad) ಸಮಾರಂಭದಲ್ಲಿ ಕತ್ತಿ ಮತ್ತು ಇತರ ಹರಿತವಾದ ಆಯುಧಗಳನ್ನು(Bengaluru Police Detained 18 people) ಝಳಪಿಸುತ್ತಿದ್ದ ಅಪ್ರಾಪ್ತರು ಸೇರಿದಂತೆ 18 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 9 ಭಾನುವಾರದಂದು ಘಟನೆ ನಡೆದಿದ್ದು, ಮಂಗಳವಾರ 18 ಆರೋಪಿಗಳನ್ನು ಪೊಲೀಸರು(Police) ವಶಪಡಿಸಿಕೊಂಡು ಬಳಿಕ ಬಂಧಿಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ(Videos) ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದಕ್ಷಿಣ ಉಪ ಪೊಲೀಸ್ ಆಯುಕ್ತ(Police Commissioner) ಪಿ. ಕೃಷ್ಣಕಾಂತ್ ಅವರು ನೀಡಿರುವ ಮಾಹಿತಿಯ ಅನುಸಾರ, ಅಕ್ಟೋಬರ್ 9 ರಂದು ಸಂಜೆ 5.45ರ ಸುಮಾರಿಗೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಕ್ರಮವಿತ್ತು.
ಈ ಸಂದರ್ಭದಲ್ಲಿ ಕೆಲವರು ಕತ್ತಿ, ಮಚ್ಚು ಮುಂತಾದ ಆಯುಧಗಳನ್ನು ಹಿಡಿದು ಕುಣಿದಿದ್ದಾರೆ.
ಇದನ್ನೂ ಓದಿ : https://vijayatimes.com/weird-face-artist-dain-yoon/
ಅಲ್ಲಿ ಒಟ್ಟು 24 ಜನರಿದ್ದರು, ಆ 24 ಜನರ ಪೈಕಿ 18 ಮಂದಿಯನ್ನು ಆಧಾರದ ಮೇರೆಗೆ ಬಂಧಿಸಿದ್ದೇವೆ(Bengaluru Police Detained 18 people). ಸದ್ಯ ನಾವು ಇನ್ನೂ ಐದು ಜನರನ್ನು ಹುಡುಕುತ್ತಿದ್ದೇವೆ ಎಂದು ಬೆಂಗಳೂರು ಪೊಲೀಸರು(Bengaluru Police) ಹೇಳಿದ್ದಾರೆ.
ಇಂಥ ಘಟನೆಗಳು ಹೆಚ್ಚಾಗಿ ಅಜ್ಞಾನದ ಕಾರಣದಿಂದ ನಡೆಯುತ್ತವೆ ಎಂದು ನಾವು ನಂಬುತ್ತೇವೆ.
https://twitter.com/ANI/status/1579934268285124610?s=20&t=6ybrZDDk3k6J4idpbVMNJw
ಇದು ಮೆರವಣಿಗೆಯಾಗಿ ಪ್ರಾರಂಭವಾಯಿತು. ಬಳಿಕ ಕೆಲವು ಜನರು ಜಮಾಯಿಸಿ ಕತ್ತಿಗಳೊಂದಿಗೆ ಈ ರೀತಿ ನೃತ್ಯ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ವಿಷಯದ ಕುರಿತು ಸದ್ಯ ಹೆಚ್ಚಿನ ತನಿಖೆಗಳು ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.