Foreign Drugs Coming to Bangalore: Drugs worth Rs. 21 Crore Seized
Bengaluru: ಬೆಂಗಳೂರು (Bengaluru) ಬೆಳದಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತೀಯ ಅಂಚೆ ಮೂಲಕ ವಿವಿಧ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಾಗಾದ್ರೆ ಈ ಡ್ರಗ್ಸ್ (Drugs) ಬೆಂಗಳೂರಿಗೆ ಎಲ್ಲಿಂದ ಬರುತ್ತಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಷೇಧಿತ ಮಾದಕ ವಸ್ತುವನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತೊಗೆಯಲು ಸಿಸಿಬಿಯ (CCB) ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ. ಈ ತನಿಖೆಯಲ್ಲಿ ಯು.ಎಸ್, ಯು.ಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರ್ಲ್ಯಾನ್ಡ್, (US, UK, Belgium, Thailand, Netherlands) ಹಾಗು ಯತರೇ ದೇಶಗಳಿಂದ ಬೆಂಗಳೂರಿಗೆ ತರಿಸಿಕೊಂಡಿದ್ದ ಸುಮಾರು 3500 ಅನುಮಾನಾಸ್ಪದ ಪಾರ್ಸೆಲ್ಗಳನ್ನು ಶ್ವಾನ ದಳದ ಸಹಾಯದಿಂದ ಪರಿಶೀಲನೆಗೊಳಪಡಿಸಲಾಗಿದೆ.
ಈ ಪಾರ್ಸಲ್ಗಳ ಪೈಕಿ 606 ಪಾರ್ಸೆಲ್ ಗಳಲ್ಲಿ (Parcel) ನಿಷೇಧಿತ ಡ್ರಗ್ಸ್ ಇರುವುದು ಖಚಿತವಾಗಿದ್ದರಿಂದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ ಮತ್ತು ಅಂದಾಜು 21,17,34000/- ಸಾವಿರ ರೂಪಾಯಿ ಮೌಲ್ಯದ ಡ್ರಗ್ಸನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಯಾವೆಲ್ಲಾ ಡ್ರಗ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ?
ಹೈಡ್ರೋ ಗಾಂಜಾ: 28 ಕೆ.ಜಿ 06 ಗ್ರಾಂ
ಎಲ್. ಎಸ್. ಡಿ : 2599 ನಂ.
ಎಂ. ಡಿ. ಎಂ.ಎ ಕ್ರಿಸ್ಟೆಲ್ : 1 ಕೆ.ಜಿ, 618 ಗ್ರಾಂ
ಎಕ್ಸ್ಟೇಸಿ ಮಾತ್ರೆಗಳು: 11908 ನಂಬರ್
ಹೆರಾಯಿನ್: 770 ಗ್ರಾಂ
ಕೊಕೇನ್ : 102 ಗ್ರಾಂ
ಆಮ್ ಫೀಟಮೈನ್ : 6 ಕೆ.ಜಿ 280 ಗ್ರಾಂ
ಚರಸ್ : 336 ಗ್ರಾಂ
ಗಾಂಜಾ ಎಣ್ಣೆ : 1 ಕೆಜಿ 217 ಗ್ರಾಂ
ಮ್ಯಾಥಕ್ಲಿನಾ : 445 ಗ್ರಾಂ
ಇ – ಸಿಗರೇಟ್ : 11 ನಂಬರ್
ನಿಕೋಟಿನ್: 102 ಎಂ.ಎಲ್
ಟೊಬ್ಯಾಕೋ : 400 ಗ್ರಾಂಗಳನ್ನೂ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಪೋಸ್ಟ್ ಮುಖಾಂತರ ವಿದೇಶಗಳಿಂದ ಡ್ರಗ್ಸ್ ತರಿಸಿಕೊಂಡು ಅವುಗಳನ್ನು ಹೆಚ್ಚಿನ ಬೆಲೆಗೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಿ ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗುತ್ತಿದ್ದರೆಂಬ ಮಾಹಿತಿ ದೊರಕಿದ್ದು, ತನಿಖೆ ಮುಂದುವರೆದಿದೆ.
Bengaluru Police Seized Foreign Drugs Kannada News
Bengaluru: Crime cases are increasing as Bangalore (Bengaluru) grows, CCB police have busted a huge network of bringing banned drugs from different countries through Indian post. So here is the complete information about where these drugs are coming to Bangalore.
Officers and staff of CCB’s Anti-Narcotics Squad have undertaken a joint operation with Customs officials at the Foreign Post Office, Chamarajpet to root out the banned narcotics. In this investigation, around 3500 suspicious parcels brought to Bangalore from US, UK, Belgium, Thailand, Netherlands and other countries were checked with the help of dog squad.
Out of these parcels, 606 parcels were confirmed to contain prohibited drugs, so a case was registered in the Anti-Narcotics Division of CCB and an investigation was conducted and drugs worth approximately 21,17,34000/- thousand rupees were seized.
What drugs were seized?
Hydro Ganja: 28 kg 06 g
L. S. D : 2599 NO.
M. D. MA Kristel : 1 kg, 618 g
Ecstasy Tablets: 11908 no
Heroin: 770 grams
Cocaine: 102 grams
Am Vitamin : 6 kg 280 gm
Charas : 336 grams
Cannabis oil: 1 kg 217 grams
Mathaklina : 445 grams
E-Cigarette: 11 no
Nicotine: 102 ml
Tobacco: 400 grams were also seized.
Information was received that the accused were involved in making illegal money by bringing drugs from abroad through post and selling them at high prices to acquaintances and the investigation is on.