• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 3 ಕೋಟಿ ರೂ. ಮೌಲ್ಯದ 1,949 ಕಳವಾದ ಮೊಬೈಲ್‌ಗಳು ಜಪ್ತಿ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 3 ಕೋಟಿ ರೂ. ಮೌಲ್ಯದ 1,949 ಕಳವಾದ ಮೊಬೈಲ್‌ಗಳು ಜಪ್ತಿ
0
SHARES
13
VIEWS
Share on FacebookShare on Twitter
  • ಮೊಬೈಲ್ ಮಾಫಿಯಾದ ವಿರುದ್ಧ ತೊಡೆ ತಟ್ಟಿದ ಪೊಲೀಸರು
  • ತಂತ್ರಜ್ಞಾನದ ನೆರವಿನಿಂದ 3 ಕೋಟಿ ರೂ. ಮೌಲ್ಯದ 1,949 ಕಳವಾದ ಮೊಬೈಲ್‌ಗಳು ಜಪ್ತಿ
  • ಸಿಇಐಆರ್ ಪೋರ್ಟಲ್‌ನಿಂದ ಮೊಬೈಲ್ ಹುಡುಕಾಟ ಸುಲಭ ಕಳೆದು ಹೋದ ಫೋನ್‌ಗಳ ಪತ್ತೆಗೆ ಹೊಸ ಭರವಸೆ

Bengaluru: ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.(Bengaluru Police’s seized stolen mobile)

ಭಾರತದ ಐಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಈ ನಗರ ಈಗ ಮೊಬೈಲ್ (Mobile) ಮಾಫಿಯಾ ನಗರ ಎಂಬ ಬಿರುದನ್ನು ಸಹ ಸಂಪಾದಿಸಿದೆ .

ಭಾರತದ ಐಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ  ನಗರ ಈಗ ಮೊಬೈಲ್ ಮಾಫಿಯಾ ನಗರ ಎಂಬ ಬಿರುದನ್ನು ಸಂಪಾದಿಸಿದೆ .

ಪ್ರತಿದಿನ ನೂರಾರು ಮೊಬೈಲ್‌ಗಳು ಕಳ್ಳರ ಪಾಲಾಗುತ್ತಿದ್ದು, ಪೊಲೀಸರು ತನಿಖೆಯಲ್ಲಿ ತೊಡಗಿದ್ದರೂ ಹೊಸ ಹೊಸ ತಂತ್ರಗಳಿಂದ ಕಳ್ಳರು ಪೊಲೀಸರಿಗೂ ತಲೆನೋವಾಗಿದ್ದಾರೆ. (Bengaluru Police’s seized stolen mobile)

ಆದರೆ ಇತ್ತೀಚೆಗೆ ನಗರ ಪೊಲೀಸರು ನಡೆಸಿದ ಬೃಹತ್ ಶೋಧಕಾರ್ಯದಲ್ಲಿ ಸುಮಾರು ₹3.36 ಕೋಟಿಯ ಮೌಲ್ಯದ 1,949 ಕಳವಾದ ಮತ್ತು ಕಳೆದು ಹೋದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ವಿವಿಧ ಠಾಣೆಗಳ ಪೊಲೀಸರು ಕಳೆದ ಕೆಲವು ತಿಂಗಳಿಂದ ಮೊಬೈಲ್ ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ನಿರಂತರ ಶ್ರಮವಹಿಸುತ್ತಿದ್ದರು.

ಈ ಶೋಧದ ಫಲವಾಗಿ ಅವರು ಸುಮಾರು 1,949 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ ಆಪಲ್ ಐಫೋನ್ 17 ಪ್ರೋ ಮ್ಯಾಕ್ಸ್ (Iphone 17 pro max) , ಸ್ಯಾಮ್ಸಂಗ್ ಎಸ್24, ಒನ್‌ಪ್ಲಸ್ (One Plus) , ರೆಡ್‌ಮಿ, ರಿಯಲ್‌ಮಿ, ಓಪ್ಪೊ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಮೊಬೈಲ್‌ಗಳಿವೆ.

ವಶಪಡಿಸಿಕೊಂಡ ಮೊಬೈಲ್‌ಗಳ ಒಟ್ಟು ಮೌಲ್ಯ ಸುಮಾರು ₹3 ಕೋಟಿ ಎಂದು ಅಂದಾಜಿಸಲಾಗಿದೆ.

ಈ ಮೊಬೈಲ್‌ಗಳನ್ನು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಪ್ರದರ್ಶನಕ್ಕಾಗಿ ಇಟ್ಟು ಬಳಿಕ ಮಾಲೀಕರಿಗೆ ಹಿಂತಿರುಗಿಸಲಾಗಿದೆ.

ತಮ್ಮ ಕಳೆದುಹೋದ ಮೊಬೈಲ್‌ಗಳನ್ನು ಮತ್ತೆ ಪಡೆದ ನಾಗರಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತನಿಖೆಯ ವೇಳೆ ಪೊಲೀಸರು ಮದನ್, ಶಾಂತಕುಮಾರ್ (Shanthakumar) ಮತ್ತು ಮೊಹಮ್ಮದ್ ಯಾಸಿನ್ ಎಂಬ ಮೂವರನ್ನು ಬಂಧಿಸಿದ್ದಾರೆ.

ಈ ಖದೀಮರು ಬಿಎಂಟಿಸಿ (BMTC) ಬಸ್‌ಗಳಲ್ಲಿ ಪ್ರಯಾಣಿಸುತ್ತಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್‌ ಕಳ್ಳತನ ಮಾಡುತ್ತಿದ್ದರು.

ಕಳವಾದ ಮೊಬೈಲ್‌ಗಳನ್ನು ತಕ್ಷಣ ತಮ್ಮ ಜೊತೆಗಿದ್ದ ಸಹಚರರಿಗೆ ಹಸ್ತಾಂತರ ಮಾಡುತ್ತಿದ್ದರು.

ಅವರು ಕಳವಾದ ಮೊಬೈಲ್‌ಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ (Aluminum Foil) ಸುತ್ತಿ ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು.

ಇದರಿಂದ ಮೊಬೈಲ್‌ಗಳಿಗೆ ನೆಟ್‌ವರ್ಕ್ ಸಿಗದೆ ಸ್ವಿಚ್ ಆಫ್ ಸ್ಥಿತಿಯಲ್ಲೇ ಕಾಣಿಸುತ್ತಿತ್ತು.

ಮಾಲೀಕರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ತೋರಿಸುವುದರಿಂದ ಕಳ್ಳತನ ಪತ್ತೆಯಾಗುವುದು ಕಷ್ಟವಾಗುತ್ತಿತ್ತು.

ಕಮಾಂಡ್ ಸೆಂಟರ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಇಐಆರ್ (Central Equipment Identity Register) ಪೋರ್ಟಲ್ ಮೂಲಕ 894 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಪೋರ್ಟಲ್ ಕಳೆದುಹೋದ ಅಥವಾ ಕಳವಾದ ಮೊಬೈಲ್‌ಗಳನ್ನು ಪತ್ತೆ ಮಾಡಲು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.

ಮಾಲೀಕರು ತಮ್ಮ ಮೊಬೈಲ್‌ನ ಐಎಂಇಐ ನಂಬರನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದಾಗ, ಯಾವಾಗಲಾದರೂ ಆ ಮೊಬೈಲ್‌ಗೆ ಹೊಸ ಸಿಮ್ ಹಾಕಿ ಆನ್ ಮಾಡಿದರೆ ತಕ್ಷಣ ದೂರುದಾರ ಹಾಗೂ ಪೊಲೀಸರಿಗೆ ಮೆಸೇಜ್ ಬರುತ್ತದೆ.

ಅಲ್ಲದೆ ಆ ಮೊಬೈಲ್‌ನಲ್ಲಿ ಬಳಸುತ್ತಿರುವ ಸಿಮ್ ನಂಬರಿನ ಮಾಹಿತಿ ಹಾಗೂ ಲೊಕೇಶನ್ (Location) ಕೂಡ ಪೋರ್ಟಲ್‌ನಲ್ಲಿ ತೋರಿಸಲಾಗುತ್ತದೆ.

ಈ ಮಾಹಿತಿ ಆಧರಿಸಿ ಪೊಲೀಸರು ಮೊಬೈಲ್ ಪತ್ತೆ ಮಾಡಿ ಮಾಲೀಕರಿಗೆ ಹಿಂತಿರುಗಿಸುತ್ತಾರೆ.

ಪೊಲೀಸರು ಸಾವಿರಾರು ಮೊಬೈಲ್‌ಗಳನ್ನು ರಿಕವರ್ ಮಾಡಿದರೂ, ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

ಕೆಲವರು ಬೇಗ ಹಣ ಸಂಪಾದನೆಗಾಗಿ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ.

ಪೊಲೀಸರು ಕಳ್ಳತನ ತಡೆಯಲು ಪ್ರಯತ್ನಿಸುತ್ತಿದ್ದರೂ ನಾಗರಿಕರ ಸಹಕಾರವೂ ಅತಿ ಮುಖ್ಯವಾಗಿದೆ.

ಸಾರ್ವಜನಿಕರು ತಮ್ಮ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

ಬಸ್, ಮೆಟ್ರೋ ಅಥವಾ ಜನಸಂದಣಿ ಪ್ರದೇಶಗಳಲ್ಲಿ ಜೇಬು, ಬ್ಯಾಗ್ ಅಥವಾ ಹ್ಯಾಂಡ್ ಬ್ಯಾಗ್‌ನಲ್ಲಿ ಮೊಬೈಲ್ ಇಡುವಾಗ ಎಚ್ಚರಿಕೆ ವಹಿಸಬೇಕು.

ಕಳೆದುಹೋದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸಿಇಐಆರ್ ಪೋರ್ಟಲ್‌ನಲ್ಲಿ ವರದಿ ಮಾಡುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags: bengalurucustodydepartmentmissingphonepolice

Related News

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026
100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ
ಪ್ರಮುಖ ಸುದ್ದಿ

100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ

September 10, 2026
ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ
ಪ್ರಮುಖ ಸುದ್ದಿ

ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ

September 10, 2026
ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ
ದೇಶ-ವಿದೇಶ

ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.