ಬೆಂಗಳೂರು : ಬೆಂಗಳೂರಿನ(Bengaluru) ಬಂಡೆಪಾಳ್ಯದಲ್ಲಿ(Bandepalya) ಇಬ್ಬರು ಮಹಿಳಾ ಟೈಲರ್‌ಗಳ ಮನೆಗಳಲ್ಲಿ 16 ವರ್ಷದ ಬಾಲಕಿಯ ಮೇಲೆ ಆರು ದಿನಗಳ ಕಾಲ ಅತ್ಯಾಚಾರವೆಸಗಿರುವ ಪ್ರಕರಣ(Rape) ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಆರೋಗ್ಯದಲ್ಲಿ ಬದಲಾವಣೆಗಳು ಕಾಣಸಿದ ಪರಿಣಾಮ ಬಾಲಕಿಯ ತಾಯಿ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿಯನ್ನು ಪರೀಕ್ಷಿಸಿ ವರದಿ ನೀಡಿದ ವೈದ್ಯರು, ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿರುವುದನ್ನು ವೈದ್ಯಕೀಯ ವರದಿಗಳು ಖಚಿತಪಡಿಸಿವೆ. ಬಾಲಕಿಯ ತಾಯಿ ಕೊಟ್ಟಿರುವ ದೂರಿನ ಆಧಾರದ ಮೇಲೆ, ಎಚ್‌ಎಸ್‌ಆರ್ ಲೇಔಟ್(HSR Layout) ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (Pocso Act) ಕಾಯ್ದೆ ಮತ್ತು ಐಪಿಸಿ 376 (Rape) ಅಡಿಯಲ್ಲಿ ಆರೋಪಿಗಳಾದ ರಾಜೇಶ್ವರಿ, ಕೇಶವ ಮೂರ್ತಿ, ಕಲಾವತಿ, ರಫೀಕ್, ಶರತ್ ಮತ್ತು ಸತ್ಯರಾಜು, ಎಲ್ಲರೂ 30ರ ದಶಕದ ಮಧ್ಯಭಾಗದಲ್ಲಿ ಮತ್ತು ಬಂಡೆಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು.

ಶಾಲೆ ಮುಗಿಸಿ ಟೈಲರಿಂಗ್ ಕಲಿಯಲು ಮನೆಗೆ ಬರುತ್ತಿದ್ದ ಬಾಲಕಿಯ ಮನೆಯ ಸಮೀಪವೇ ರಾಜೇಶ್ವರಿ ಮತ್ತು ಕಲಾವತಿ ವಾಸವಾಗಿದ್ದರು ಎನ್ನಲಾಗಿದೆ.