Bengaluru: ಇನ್ನೇನು ಬೇಸಿಗೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು (Drinking water) ಪೋಲು ಮಾಡುವವರ ವಿರುದ್ಧ ದಂಡ (Penalty) ವಿಧಿಸುವ ಅಭಿಯಾನವನ್ನು ಬೆಂಗಳೂರು ಜಲಮಂಡಳಿ (Bangalore Water Board) ಆರಂಭಿಸಿದೆ. ಎಚ್ಚರಿಕೆ ನೀಡಿದ ನಂತರವೂ ನೀರನ್ನು ಹಾಳು (Spoil the water) ಮಾಡುತ್ತಿದ್ದ 112 ಪ್ರಕರಣಗಳನ್ನು ದಾಖಲಿಸಿ (Record 112 cases) 5.60 ಲಕ್ಷ ರೂಪಾಯಿ ದಂಡ ವಸೂಲಿ (Collection of fines) ಮಾಡಿದೆ.
ಕಳೆದ ವಾರವಷ್ಟೇ ಕುಡಿಯುವ ನೀರನ್ನು (Drinking water) ಅನ್ಯ ಉದ್ದೇಶಕ್ಕೆ ಬಳಸದಂತೆ (Any other purpose) ಜಲಮಂಡಳಿ ಕಳೆದ ವಾರ ಸುತ್ತೋಲೆ (Circular) ಹೊರಡಿಸಿತ್ತು. ನೀರು ಪೋಲು ಮಾಡುವವರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ (Bangalore Water Supply and Sewerage Act) ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.ಆದರೂ ಕುಡಿಯುವ ನೀರನ್ನು ಅನ್ಯ ಉದ್ಧೇಶಗಳಿಗೆ ಬಳಸುತ್ತಿದ್ದ ನಾಗರೀಕರನ್ನು (Citizens) ಪತ್ತೆಹಚ್ಚಿ ದಂಡ ವಿಧಿಸಲಾಗಿದೆ. ಫೆಬ್ರುವರಿ 23 ರವರೆಗೆ 112 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ದಕ್ಷಿಣ ವಲಯದಲ್ಲಿ (Southern zone) ಹೆಚ್ಚು ಪ್ರಕರಣಗಳು (33) ದಾಖಲಾಗಿವೆ. ಉತ್ತರ ವಲಯದಲ್ಲಿ 23 (23 in North Zone), ಪಶ್ಚಿಮ ವಲಯದಲ್ಲಿ (West Zone) 28, ಪೂರ್ವ ವಲಯದಲ್ಲಿ 28 (28 in Eastern Zone) ಪ್ರಕರಣಗಳು ದಾಖಲಾಗಿವೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ (Jalmandal Chairman Ramprasat Manohar) ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ (Bangalore city) ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ (Cleanliness of vehicles), ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿ ಬಳಸಬಾರದು. ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಯ ಉದ್ದೇಶಗಳಿಗೆ ಬಳಸದಂತೆ ನಿಷೇಧಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ (Bangalore Water Supply and Sewerage Act)-1964ರ ಕಲಂ 33 ಮತ್ತು 34 ರ ಅನುಸಾರ ಈ ಆದೇಶ ಹೊರಡಿಸಲಾಗಿದೆ ಎಂದು ಜಲಮಂಡಳಿಯ ಅಧ್ಯಕ್ಷ ಡಾ. ರಾಮ್‍ಪ್ರಸಾತ್ ಮನೋಹರ್ ತಿಳಿಸಿದ್ದಾರೆ.