Sub-title: ಮಧ್ಯಮ ವರ್ಗದ ಕುಟುಂಬಗಳಿಗೆ ಸುರಕ್ಷಿತ ಮತ್ತು ದೀರ್ಘಾವಧಿಯ ಹಣಕಾಸು ಪರಿಹಾರ.
- ಕಡಿಮೆ ಅಪಾಯ, ನಿಶ್ಚಿತ ಲಾಭ: 2026ಕ್ಕೆ (best savings investment options ) ಸೂಕ್ತವಾದ ಹೂಡಿಕೆ ಗೈಡ್
- ಹೊಸ ವರ್ಷದಲ್ಲಿ ಅಪಾಯವಿಲ್ಲದೆ ಹಣವನ್ನು ಬೆಳೆಸಲು ಸರ್ಕಾರದ ಬೆಂಬಲದ ಯೋಜನೆಗಳೇ ಸರಿಯಾದ ಆಯ್ಕೆ
- ಪಿಪಿಎಫ್‌ನಿಂದ ಎನ್‌ಪಿಎಸ್‌ವರೆಗೆ – ಸಾಮಾನ್ಯರಿಗೆ ಸೂಕ್ತವಾದ ಹೂಡಿಕೆ ಆಯ್ಕೆಗಳ ವಿವರ ಹೀಗಿವೆ
ಹೊಸ ವರ್ಷಕ್ಕೆ ಕಾಲಿಟ್ಟಾಗ ಹಣಕಾಸಿನ ಭದ್ರತೆ ಮತ್ತು ಭವಿಷ್ಯದ ಸ್ಥಿರತೆ (best savings investment options) ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ.
ಆದರೆ, ತೆರಿಗೆ ಉಳಿಸುವ ಅವಸರದಲ್ಲಿ ಅಥವಾ ಹೆಚ್ಚಿನ ಲಾಭದ ಆಸೆಯಲ್ಲಿ ಕೆಲವೊಮ್ಮೆ ಜನರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ನಷ್ಟ ಅನುಭವಿಸುತ್ತಾರೆ.
ವಾಸ್ತವವಾಗಿ, ಭಾರತದಲ್ಲಿ ಸರ್ಕಾರದ ಬೆಂಬಲವಿರುವ ಹಲವು ಸುರಕ್ಷಿತ ಹೂಡಿಕೆ ಆಯ್ಕೆಗಳು ಲಭ್ಯವಿದ್ದು, ಅವುಗಳು ಕಡಿಮೆ ಅಪಾಯದೊಂದಿಗೆ ಸ್ಥಿರ ಲಾಭ ನೀಡುವ ಸಾಮರ್ಥ್ಯ ಹೊಂದಿವೆ.
2026ರಲ್ಲಿ ಆರ್ಥಿಕವಾಗಿ ಬಲಿಷ್ಠರಾಗಬೇಕೆಂದಿರುವವರು ಈ (best savings investment options) ಯೋಜನೆಗಳತ್ತ ಗಮನ ಹರಿಸುವುದು ಅತ್ಯಂತ ಸೂಕ್ತ.
ಭಾರತೀಯರ ವಿಶ್ವಾಸದ ಪ್ರತೀಕವಾಗಿರುವ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಇಂದಿಗೂ ಮಧ್ಯಮ ವರ್ಗದ ಜನರಿಗೆ ಮೊದಲ ಆಯ್ಕೆಯಾಗಿದೆ.
ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (Post Office Time Deposit) , ಮಾಸಿಕ ಆದಾಯ ಯೋಜನೆ (MIS), ಮತ್ತು ರಾಷ್ಟ್ರೀಯ ಉಳಿತಾಯ
ಪ್ರಮಾಣಪತ್ರ (NSC) ಮುಂತಾದ ಯೋಜನೆಗಳು ಸರ್ಕಾರದ ಭದ್ರತೆಯೊಂದಿಗೆ ನಿಶ್ಚಿತ ಆದಾಯವನ್ನು ಒದಗಿಸುತ್ತವೆ.
ಷೇರು ಮಾರುಕಟ್ಟೆಯ ಏರಿಳಿತದಿಂದ ದೂರವಿರಲು ಬಯಸುವವರು ಹಾಗೂ ನಿವೃತ್ತರು ಈ ಯೋಜನೆಗಳನ್ನು ಆಯ್ಕೆ
ಮಾಡುವುದರಿಂದ ಮನಶಾಂತಿ ಜೊತೆಗೆ ನಿಯಮಿತ ಆದಾಯವನ್ನು ಪಡೆಯಬಹುದು.
ವಿಶೇಷವಾಗಿ, ಬಂಡವಾಳದ ಸುರಕ್ಷತೆ ಮುಖ್ಯವಾದವರಿಗೆ ಈ ಯೋಜನೆಗಳು ಆರ್ಥಿಕ ಸ್ಥಿರತೆಗೆ ಗಟ್ಟಿ ನೆಲೆಯಾಗಿ ಕಾರ್ಯನಿರ್ವಹಿಸುತ್ತವೆ.
ದೀರ್ಘಾವಧಿಯಲ್ಲಿ ದೊಡ್ಡ ನಿಧಿಯನ್ನು ನಿರ್ಮಿಸಲು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.
ವರ್ಷಕ್ಕೆ ಕನಿಷ್ಠ ₹500 ರಿಂದ ಹೂಡಿಕೆ ಆರಂಭಿಸಬಹುದಾದ ಈ ಯೋಜನೆ, ಗರಿಷ್ಠ ₹1.5 ಲಕ್ಷವರೆಗೆ ಹೂಡಿಕೆಗೆ ಅವಕಾಶ ನೀಡುತ್ತದೆ.
ಪಿಪಿಎಫ್‌ನ ಪ್ರಮುಖ ಆಕರ್ಷಣೆಯೆಂದರೆ, ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿ ದೊರಕುವುದಲ್ಲದೆ,
ಮೆಚ್ಯೂರಿಟಿ (Maturity) ಸಮಯದಲ್ಲಿ ಸಿಗುವ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
ಶಿಸ್ತುಬದ್ಧವಾಗಿ ಹೂಡಿಕೆ ಮುಂದುವರೆಸಿದರೆ, ಸಾಮಾನ್ಯ ವೇತನದ ಉದ್ಯೋಗಿಯೂ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ
ನಿಧಿಯನ್ನು ಸಂಗ್ರಹಿಸಬಹುದು. ಭವಿಷ್ಯದ ಶಿಕ್ಷಣ, ಮನೆ ಖರೀದಿ ಅಥವಾ ನಿವೃತ್ತಿ ಜೀವನಕ್ಕೆ ಪಿಪಿಎಫ್ ಉತ್ತಮ ಆಧಾರವಾಗುತ್ತದೆ.
ನಿವೃತ್ತಿಯ ನಂತರವೂ ಆರ್ಥಿಕ ಸ್ವಾವಲಂಬನೆ ಬೇಕೆಂದಿರುವವರಿಗೆ ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS) ಪ್ರಮುಖ ಆಯ್ಕೆಯಾಗಿದೆ.
ಈ ಯೋಜನೆಯ ಮೂಲಕ ಹೂಡಿಕೆದಾರರು ಪಿಪಿಎಫ್ ಹೊರತಾಗಿ ಹೆಚ್ಚುವರಿ ₹50,000 ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
NPSನಲ್ಲಿ ಹೂಡಿಕೆಯಾದ ಹಣದ ಒಂದು ಭಾಗ ಮಾರುಕಟ್ಟೆಗೆ ಸಂಪರ್ಕ ಹೊಂದಿರುವುದರಿಂದ, ದೀರ್ಘಾವಧಿಯಲ್ಲಿ ಉತ್ತಮ ಲಾಭದ ಸಾಧ್ಯತೆ ಇದೆ.
ನಿವೃತ್ತಿಯ ಸಮಯದಲ್ಲಿ ಒಟ್ಟಾರೆ ಮೊತ್ತದ ಜೊತೆಗೆ ನಿಯಮಿತ ಪಿಂಚಣಿ ದೊರಕುವುದರಿಂದ, ಜೀವನದ ನಂತರದ ಹಂತದಲ್ಲೂ ಆರ್ಥಿಕ ಭದ್ರತೆ ಕಾಪಾಡಿಕೊಳ್ಳಬಹುದು.
ಜೊತೆಗೆ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಹಿರಿಯ ನಾಗರಿಕರಿಗಾಗಿ ಇರುವ ಸೀನಿಯರ್
ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS) ಕೂಡ ಸರ್ಕಾರದ ಭದ್ರತೆಯೊಂದಿಗೆ ಉತ್ತಮ ಬಡ್ಡಿದರ ಮತ್ತು ನಿಯಮಿತ ಆದಾಯವನ್ನು ಖಚಿತಪಡಿಸುತ್ತವೆ.
ಒಂದೇ ಸಮಯದಲ್ಲಿ ವಿಮೆ ಮತ್ತು ಹೂಡಿಕೆಯ ಲಾಭ ಬಯಸುವವರಿಗೆ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ (ULIP) ಉತ್ತಮ ಪರ್ಯಾಯವಾಗಿದೆ.
ಯುಲಿಪ್‌ನಲ್ಲಿ ಪಾವತಿಸುವ ಪ್ರೀಮಿಯಂನ ಒಂದು ಭಾಗ ಜೀವ ವಿಮೆ ರಕ್ಷಣೆಗೆ ಬಳಕೆಯಾಗುವುದರೆ, ಉಳಿದ ಭಾಗವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಐದು ವರ್ಷಗಳ ಲಾಕ್-ಇನ್ ಅವಧಿಯುಳ್ಳ ಈ ಯೋಜನೆ ದೀರ್ಘಾವಧಿಯಲ್ಲಿ ಉತ್ತಮ ನಿಧಿ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.
ಸರಿಯಾದ ಫಂಡ್ ಆಯ್ಕೆ ಮತ್ತು ದೀರ್ಘಾವಧಿಯ ದೃಷ್ಟಿಕೋನ ಹೊಂದಿದ್ದರೆ, ಯುಲಿಪ್ ಮೂಲಕ ಭವಿಷ್ಯದ ಅನಿಶ್ಚಿತತೆಗಳನ್ನು ಎದುರಿಸಲು ಆರ್ಥಿಕ ಬಲವನ್ನು ನಿರ್ಮಿಸಬಹುದು.
ಯಾವುದೇ ಹೂಡಿಕೆಗೆ ಮುನ್ನ ನಿಮ್ಮ ಆದಾಯ, ಗುರಿ ಮತ್ತು ಅಪಾಯ ಸಹಿಷ್ಣುತೆಗಳನ್ನು ಪರಿಗಣಿಸಿ ಹಣಕಾಸು ತಜ್ಞರ ಸಲಹೆ ಪಡೆಯುವುದು ಸದಾ ಒಳಿತು.
ಇದನ್ನು ಓದಿ : https://vijayatimes.com/new-tax-on-tobacco-products-2/
