ಕಾರು ಎಂದರೆ ಯಾರಿಗೆ ಇಷ್ಟ ಇಲ್ಲ? ಕಾರುಗಳ ಬಗ್ಗೆ ಯಾರಿಗೆ ಕ್ರೇಜ್ ಇರುವುದಿಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಅನೇಕರಿಗೆ ಕಾರುಗಳ ಬಗೆಗೆ ಹೆಚ್ಚು ಆಸಕ್ತಿ ಇರುತ್ತದೆ.ಈಗಿನ ಕಾಲದಲ್ಲಿ (Best selling cars) ಯುವಕರಂತೆ ಯುವತಿಯರೂ ಕೂಡ ಕಾರ್ ಮೇಲೆ ಅಪಾರ ಕ್ರೇಜ್ (Crazy) ಹೊಂದಿದ್ದಾರೆ. ಭಾರತದಲ್ಲಿ ಅನೇಕ ಕಂಪನಿಗಳ ಕಾರುಗಳು ಇವೆ.
ಈಗ ಎಲೆಕ್ಟ್ರಿಕ್ (Electric) ಕಾರುಗಳು ಕೂಡ ಉತ್ತಮ ಮೈಲೇಜ್ ನೀಡುತ್ತಿವೆ ಅಲ್ಲದೆ ಹೊಸ ಹೊಸ ಆವಿಷ್ಕಾರದಲ್ಲಿ ಕಾರುಗಳು ಬಿಡುಗಡೆಯಗುತ್ತಿವೆ.ಅದರಂತೆ
ನಮ್ಮ ಭಾರತದಲ್ಲಿ 2022 ರ ನವೆಂಬರ್ನಲ್ಲಿ ಮಾರುತಿ ಸುಜುಕಿ (Maruti Suzuki) ಬಲೆನೋ ಕಾರು ಅತೀ ಹೆಚ್ಚು ಮಾರಾಟ ಮಾಡುವ ಮೂಲಕ
ತನ್ನ ಪ್ರಾಬಲ್ಯವನ್ನ ಮುಂದುವರೆಸಿದೆ.ಆದರೆ 2022 ರಲ್ಲಿ ಮಾರುತಿ ಸುಜುಕಿ ಕಂಪನಿಯು ಇಡೀ ಜಗತ್ತಿನಲ್ಲಿ 13ನೇ ಸ್ಥಾನದಲ್ಲಿದೆ.
2022 ರಲ್ಲಿ ಜಗತ್ತಿನಾದ್ಯಂತ ಅತೀ ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ವರದಿ ಇಲ್ಲಿದೆ ನೋಡಿ.
- ಟೊಯೋಟಾ (Toyota) 2022 ರಲ್ಲಿ ವಿಶ್ವಾದಾದ್ಯಂತ ಸೇಲ್ ಆದ ಕಾರುಗಳಲ್ಲಿ ಟೊಯೋಟಾ ನಂ.1 ಸ್ಥಾನದಲ್ಲಿದೆ. ಟೊಯೋಟಾ ಜಪಾನ್ ಕಂಪನಿಯಾಗಿದೆ. 1933 ರಲ್ಲಿ ಇದನ್ನು ಪ್ರಾರಂಭಿಸಿದರು. 2020 ರಲ್ಲಿ ಕೇವಲ 9,528,753 ಕಾರ್ ಗಳು ಜಗತ್ತಿನಾದ್ಯಂತ ಸೇಲ್ (Best selling cars) ಆಗಿದ್ದವು. ಬಳಿಕ 2021 ರಲ್ಲಿ ಕೇವಲ 1% ಎರಿಕೆಯಾಗಿ ಸುಮಾರು 9,562,483 ಕಾರುಗಳು ಮಾರಾಟವಾಗಿದ್ದವು ಆದರೆ 2022 ರಲ್ಲಿ 9,566,961 ಕಾರುಗಳು ಮಾರಾಟವಾಗುವ ಮೂಲಕ ಇಡೀ ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿದೆ
2.ವೋಕ್ಸ್ವ್ಯಾಗನ್ (Volkswagen)
ಹೌದು ವೋಕ್ಸ್ ವ್ಯಾಗನ್ 2022 ರಲ್ಲಿ ಎರಡನೇ ಸ್ಥಾನವನ್ನು ಕಸಿದುಕೊಂಡಿದೆ.ವೋಕ್ಸ್ ವ್ಯಾಗನ್ ಕಾರು ಜರ್ಮನಿ ಮೂಲದಾಗಿದ್ದು ಜರ್ಮನ್ ಲೇಬರ್ ಫ್ರಂಟ್ನಿಂದ (German Labour Front) 1937 ರಲ್ಲಿ ಸ್ಥಾಪಿಸಲಾಗಿತ್ತು.
ಈ ಕಾರು 2020ರಲ್ಲಿ ಕೇವಲ 9,305,427 ರಷ್ಟು ಮಾರಾಟವಾಗಿತ್ತು ನಂತರ 2021 ರಲ್ಲಿ 5% ಏರಿಕೆಗೊಂಡು 8,882,346 ಕಾರುಗಳು ಮಾರಾಟವಾಗಿತ್ತು.
ಆದರೆ ಈಗ 2022ರಲ್ಲಿ 7% ಹೆಚ್ಚಾಗಿ 8,263,104 ಕಾರುಗಳು ಮಾರಾಟವಾಗುವ ಮೂಲಕ ಎರಡನೇ ಸ್ಥಾನದಲ್ಲಿದೆ.
- ಹುಂಡೈ ಮತ್ತು ಕಿಯಾ (Hyundai Kia)
ಹುಂಡೈ ಮತ್ತು ಕಿಯಾ ಎರಡು ಕೂಡ ದಕ್ಷಿಣ ಕೊರಿಯಾ ಕಂಪನಿಗಳಾಗಿವೆ.ಕಿಯಾ ಕಂಪನಿಯನ್ನ 1944 ರಲ್ಲಿ, ಹಾಗೂ ಹುಂಡೈ ಕಂಪನಿಯನ್ನು 1967 ರಲ್ಲಿ ಸ್ಥಾಪನೆ ಮಾಡಿದ್ದಾರೆ.
2020 ರಲ್ಲಿ ಕೇವಲ 6,353,514 ಕಾರುಗಳು ಮಾರಾಟವಾಗಿದ್ದವು. ನಂತರ 2021 ರಲ್ಲಿ 5% ಏರಿಕೆಯಾಗಿತ್ತು. ಆದರೆ ಕಳೆದ 2022 ರಲ್ಲಿ 6,848,198 ಕಾರುಗಳು ಮಾರಾಟವಾಗುವ ಮೂಲಕ ವಿಶ್ವದಲ್ಲಿಯೇ 3 ನೇ ಸ್ಥಾನದಲ್ಲಿದೆ.
- ಸ್ಟೆಲ್ಲಂಟಿಸ್ (Stellantis)
ಸ್ಟೆಲ್ಲಂಟಿಸ್ ಕಂಪನಿ ಬಗ್ಗೆ ಹೇಳುವುದಾದರೆ ಈ ಕಾರು ಸ್ಥಾಪನೆಯಾಗಿ ಕೇವಲ 2 ವರ್ಷಗಳಾಗಿವೆ ಹೌದು 2020 ಜನವರಿಯಲ್ಲಿ ಇದನ್ನು ನೆದರ್ಲ್ಯಾಂಡ್ ನಲ್ಲಿ ಸ್ಥಾಪಿಸಿದರು.
ಮೊದಲ ವರ್ಷದಲ್ಲಿ 6,205,996 ಕಾರುಗಳು ಮಾರಾಟವಾಗಿದ್ದವು ನಂತರ 2021 ರಲ್ಲಿ 1% ಪ್ರತಿಶತ ಮಾತ್ರ ಹೆಚ್ಚಾಳವಾಗಿತ್ತು. ಆದರೆ 2022 ರಲ್ಲಿ 6,002,900 ಕಾರುಗಳನ್ನು ಮಾರಾಟ ಮಾಡುವ ಮೂಲಕ 4 ನೇ ಸ್ಥಾನವನ್ನು ಪಡೆದುಕೊಂಡಿದೆ.
- ಜನರಲ್ ಮೋಟರ್ಸ್(GM)
1908 ರಲ್ಲಿ ಸ್ಥಾಪನೆಯಾದ ಜನರಲ್ ಮೋಟರ್ಸ್ ಅಮೆರಿಕದ ಡೆಟ್ರಾಯ್ ನಗರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ.2020ರಲ್ಲಿ 6,833,592 ಮಾತ್ರ ಕಾರುಗಳನ್ನು ಮಾರಾಟ ಮಾಡಿದ್ದವು.
ಮಾರುತಿ ಸುಜುಕಿ(Maruti Suzuki)
ಮಾರುತಿ ಸುಜುಕಿ ಕಂಪನಿಯು ಭಾರತದ ಪ್ರಮುಖ ಕಾರು ಕಂಪನಿಗಳಲ್ಲಿ ಒಂದಾಗಿದೆ.2020 ರಲ್ಲಿ 1,457,861 ಕಾರುಗಳನ್ನು ಮಾರಾಟ ಮಾಡಿತ್ತು ಆದರೆ 2021 ರಲ್ಲಿ 13% ಪ್ರತಿಶತ ಏರಿಕೆಯಾಗಿ 1,652,653 ಕಾರುಗಳನ್ನು ಮಾರಾಟ ಮಾಡಿತ್ತು.ಆದರೆ 2022 ರಲ್ಲಿ 13% ಏರಿಕೆಯಾಗಿ 1,940,067 ಕಾರುಗಳನ್ನು ಮಾರಾಟ ಮಾಡುವ ಮೂಲಕ 13ನೇ ಸ್ಥಾನದಲ್ಲಿದೆ. ಚೀನಾದ ಗೀಲಿ, ಅಮೆರಿಕಾದ ಟೆಸ್ಲಾ ಕಂಪನಿಗಳು ಇನ್ನು ನಂತರದ ಸ್ಥಾನದಲ್ಲಿ ಇವೆ.
ರಶ್ಮಿತಾ ಅನೀಶ್