• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

APK ಸ್ಕ್ಯಾಮ್ ಬಗ್ಗೆ ಎಚ್ಚರ, ನಿಮ್ಮ ಖಾತೆ ಹಣ ಮಂಗಮಾಯ! ಹಣ ಎಗರಿಸಲು ಸೈಬರ್‌ ಖದೀಮರ ಹೊಸ ಪ್ಲಾನ್‌

Shwetha Mohan by Shwetha Mohan
in ಡಿಜಿಟಲ್ ಜ್ಞಾನ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
APK ಸ್ಕ್ಯಾಮ್ ಬಗ್ಗೆ ಎಚ್ಚರ, ನಿಮ್ಮ ಖಾತೆ ಹಣ ಮಂಗಮಾಯ! ಹಣ ಎಗರಿಸಲು ಸೈಬರ್‌ ಖದೀಮರ ಹೊಸ ಪ್ಲಾನ್‌
0
SHARES
21
VIEWS
Share on FacebookShare on Twitter
  • APK ಸ್ಕ್ಯಾಮ್ ಬಗ್ಗೆ ಎಚ್ಚರ ಇರಿ!
  • ಹಣ ಎಗರಿಸಲು ಸೈಬರ್‌ ಖದೀಮರ ಹೊಸ ಪ್ಲಾನ್‌
  • ಆಪ್‌ಗಳ ಮೂಲಕ ಕೂತಲ್ಲೇ ಜನರ ಹಣಕ್ಕೆ ಕನ್ನ (Beware of APK scam)
  • ಎಲ್ಲಾ ಕಡೆ ಹಬ್ಬುತ್ತಿದೆ APK ಸ್ಕ್ಯಾಮ್‌, ಬೀ ಕೇರ್‌ ಫುಲ್

APK ಸ್ಕ್ಯಾಮ್ ಬಗ್ಗೆ ಎಚ್ಚರ, ನಿಮ್ಮ ಖಾತೆ ಹಣ ಮಂಗಮಾಯ ಆಗುತ್ತೆ. ಜನಸಾಮಾನ್ಯರ ಹಣಕ್ಕೆ ಸೈಬರ್‌ ಖದೀಮರಿಂದ ಕೂತಲ್ಲೇ ಕನ್ನ, ಎಲ್ಲಾ ಕಡೆ ಹಬ್ಬುತ್ತಿದೆ APK ಸ್ಕ್ಯಾಮ್‌

ಇದು ಗೂಗಲ್‌ ಪೇ, ಫೋನ್‌ ಪೇ, ಪೇಟಿಎಮ್‌ ಬಳಕೆದಾರರು ನೋಡಲೇಬೇಕಾದ ಸುದ್ದಿ. ಸೈಬರ್‌ ಕ್ರೈಂ(Cybercrime) ಖದೀಮರು ಹಣ ಲೂಟಿ ಮಾಡೋಕೆ ಹೊಸ ಮಾರ್ಗ ಕಂಡು ಹಿಡಿದಿದ್ದಾರೆ.

ಅದುವೇ APK ಆಪ್‌. ಏನಿದು APK ಆಪ್‌, ಈ ಆಪ್‌ ಮುಖಾಂತರ ಆನ್‌ಲೈನ್‌ ಹೇಗೆ ಹಣ ಎಗರಿಸ್ತಾರೆ? ಈ ಸ್ಕ್ಯಾಮ್‌ನಿಂದ(Scam) ಬಚಾವಾಗಲು ನೀವು ಏನು ಮಾಡಬೇಕು ಎಲ್ಲವನ್ನೂ ಈವತ್ತಿನ ವಿಜಯಟೈಮ್ಸ್‌ನಲ್ಲಿ(Vijaya Times) ತಿಳಿಯೋಣ.


APK ಸ್ಕ್ಯಾಮ್‌ ನಿಮ್ಮ ಹಣವನ್ನು ನಿಮಗೆ ಗೊತ್ತಿಲ್ಲದ ಹಾಗೆ ನುಂಗಿ ಹಾಕುತ್ತೆ. HDFC ಬ್ಯಾಂಕ್‌ ಸೇರಿ ಎಲ್ಲಾ ಬ್ಯಾಂಕ್‌ನವರು ಎಚ್ಚರಿಕೆ ವಹಿಸಲು ಸೈಬರ್‌ ತಜ್ಞರು(Cyber ​​experts) ಸೂಚನೆ ನೀಡಿದ್ದಾರೆ.

APK ಇದನ್ನು ಆಂಡ್ರಾಯ್ಡ್‌ ಪ್ಯಾಕೆಜ್‌ ಕಿಟ್‌ ಎಂದು ಕರೆಯುತ್ತಾರೆ. ಎಲ್ಲಾ ಆನ್‌ಲೈನ್‌ ಸ್ಕ್ಯಾಮ್‌ಗಳ(Online scam) ರೀತಿಯೇ ಈ APK ಸ್ಕ್ಯಾಮ್‌ ಕೂಡ ನಡೆಯುತ್ತೆ.

ಎಲ್ಲಾ ಸೈಬರ್‌ ಕ್ರೈಂಗಳು ನಡೆಯೋದು ನಿಮ್ಮ ವೈಯಕ್ತಿಕ ಡೇಟಾದಿಂದ. ಈ ಡೇಟಾವನ್ನ ಸೈಬರ್‌ ಖದೀಮರು ಹಲವು ಮಾರ್ಗಗಳಲ್ಲಿ ಕಲೆಕ್ಟ್‌ ಮಾಡಿಕೊಳ್ತಾರೆ.

ಫೋನ್‌ ಕಾಲ್‌, SMS ಮೂಲಕ ನಿಮ್ಮ ಮಾಹಿತಿ ಕಲೆ ಹಾಕುತ್ತಾರೆ. ಇದೇ ರೀತಿ ಸೈಬರ್‌ ಖದೀಮರು ಇದೀಗ APK ಮೂಲಕ ನಿಮ್ಮ ಡೇಟಾ ಕಲೆಕ್ಟ್‌ ಮಾಡಿ ವಂಚನೆ ಮಾಡುತ್ತಿದ್ದಾರೆ.

ಅಫೀಶಿಯಲ್‌ ಆಪ್‌ಗಳನ್ನ ಬಿಟ್ಟು ಅಂದರೆ ಪ್ಲೇ ಸ್ಟೋರ್‌ನಲ್ಲಿ(Play Store) ಸಿಗುವ ಆಪ್‌ ಬಿಟ್ಟು ಅನೇಕರು ಬೇರೆ ಬೇರೆ ಲಿಂಕ್‌ ಮೂಲಕ ಇಂಡಿಯಾದಲ್ಲಿ ಅನುಮತಿ ಇಲ್ಲದ ಹಾಗೂ ಥರ್ಡ್‌ ಪಾರ್ಟಿಯ APK ಆಪ್‌ಗಳನ್ನ ಡೌನ್‌ ಲೋಡ್‌ ಮಾಡುತ್ತಾರೆ.

ಈ ರೀತಿಯ APK ಆಪ್‌ಗಳು ಅಫೀಶಿಯಲ್‌ ಆಪ್‌ಗಳಿಗಿಂತ ಹೆಚ್ಚಿನ ಫೀಚರ್ಸ್‌ ನೀಡುತ್ತವೆ. ಆದ್ರೆ ಇಂತಹ APK ಆಪ್‌ಗಳೇ ನಿಮ್ಮ ವ್ಯಯಕ್ತಿಕ ಮಾಹಿತಿಗಳನ್ನ ಸೈಬರ್‌ ವಂಚಕರಿಗೆ ಒದಗಿಸುತ್ತದೆ ಅನ್ನೋದು ಅನೇಕರಿಗೆ ಗೊತ್ತಿಲ್ಲ.

Beware of APK scam
ಯಾವುದಾದರು ಟೈಟಲ್‌ ಅಡಿಯಲ್ಲಿ ಮೊದಲಿಗೆ ನಿಮ್ಮ ವಾಟ್ಸಾಪ್‌, SMS, ಟೆಲಿಗ್ರಾಮ್‌ ಮೂಲಕ APK ಫೈಲ್‌ ಬರುತ್ತದೆ. ಇದು ನೋಡಲು ಸೇಮ್‌ ಟೂ ಸೇಮ್‌ ಅಧಿಕೃತ ಫೈಲ್‌ ರೀತಿಯೇ ಕಾಣಿಸುತ್ತದೆ.

ನೀವೇನಾದ್ರೂ ಅಪ್ಪಿ ತಪ್ಪಿ ಈ ಫೈಲ್‌ ಓಪನ್‌ ಮಾಡಿದ್ದೇ ಆದಲ್ಲಿ ನಿಮ್ಮ ಖಾತೆಯಲ್ಲಿದ್ದ ಹಣವೆಲ್ಲಾ ಮಂಗಮಾಯ ಆಗುತ್ತೆ. ಖಾತೆಯಲ್ಲಿದ್ದ ಹಣ ಮಾಯ ಆಗೋದಲ್ಲದೆ ಮೈನೆಸ್‌ ಬ್ಯಾಲೆನ್ಸ್‌ ಕೂಡ ಆಗಲಿದೆ.

ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದ್ರೂ, ದೂರು ನೀಡಿದ್ರೂ ಪ್ರಯೋಜನ ಇಲ್ಲ, ನಿಮ್ಮ ಹಣ ವಾಪಾಸ್‌ ಬರೋದು ಇಲ್ಲ. ‌ ಈ APK ವಂಚನೆಯಿಂದಾಗಿ ಹೈದರಾಬಾದ್‌ನ ಇಬ್ಬರು ನಿವಾಸಿಗಳು 6 ಲಕ್ಷಕ್ಕೂ ಹೆಚ್ಚು ಹಣವನ್ನ ಕಳೆದುಕೊಂಡಿದ್ದಾರೆ. ಅವರ ಹಣ ಇನ್ನೂ ಅವರ ಕೈ ಸೇರಲೇ ಇಲ್ಲ.

ಕೆಲವೊಮ್ಮೆ APK ಡೆವಲೆಪ್‌ಮೆಂಟ್‌ ಮಾಡುವಾಗಲೇ ಸೈಬರ್‌ ಖದೀಮರು ಮಾಲ್‌ವೇರ್‌(Malware), ಸ್ಪೈ ವೇರ್‌ ಅಟ್ಯಾಚ್‌(Spyware Attach) ಮಾಡಿರ್ತಾರೆ. ಇದು ನಿಮ್ಮ ಮೊಬೈಲ್‌ ಡೇಟಾ, ಕಾಲ್‌ ಡೇಟಾ,

ಮೆಸೇಜ್‌ ಡೇಟಾ, ಓಟಿಪಿಗಳನ್ನ ಸೈಬರ್‌ ವಂಚಕರ ಕೈಗೆ ಸಿಗುವಂತೆ ಮಾಡುತ್ತೆ. APK ಆಪ್‌ಗಳು ನಿಮ್ಮ ಡಿವೈಸ್‌ಗೂ ಎಂಟ್ರಿ ಕೊಡುತ್ತೆ ಉದಾಹರಣೆಗೆ ವಾಲ್‌ಪೇಪರ್‌ ಆಪ್‌, ಗೇಮ್‌,

ಯಾವುದಾದರೂ ಇಷ್ಟ ಬಂದ ಸೈಟ್‌ಗಳನ್ನ ವಿಸಿಟ್‌ ಮಾಡಿದಾಗ ನಿಮಗೆ ಗೊತ್ತಿಲ್ಲದ ಹಾಗೆ ಬ್ಯಾಕ್‌ರೌಂಡ್‌ನಲ್ಲಿ ಈ APK ಡೌನ್‌ಲೋಡ್‌ ಆಗುತ್ತಿರುತ್ತೆ.

RAT APK ಅಂದರೆ ರಿಮೋಟ್‌ ಆಕ್ಸೆಸ್‌ ಟ್ರೋಜನ್ಸ್‌ APK ಈ ಫೈಲ್‌ ನಿಮ್ಮ ಮೊಬೈಲ್‌ನ ಕಂಪ್ಲೀಟ್‌ ಕಂಟ್ರೋಲ್‌ನ ಹ್ಯಾಕರ್‌ ಕೈಗೆ ರಿಮೋಟ್‌ ಕಂಟ್ರೋಲ್‌ ಮೂಲಕ ನೀಡುತ್ತದೆ.

ನೀವು ಫೊನ್‌ ಯೂಸ್‌ ಮಾಡುವಾಗ ನಿಮ್ಮ ಎಲ್ಲಾ ಡೇಟಾಗಳು ಸೈಬರ್‌ ಖದೀಮರ ಕೈ ಸೇರುತ್ತದೆ. ಅಲ್ಲಿಂದಲೇ ಸೈಬರ್‌ ಕಳ್ಳರು ನಿಮಗೆ ಗೊತ್ತಿಲ್ಲದ ಹಾಗೆ ಫೋನ್‌ ಆಪರೇಟ್‌ ಮಾಡುತ್ತಾರೆ.

ಈ APK ಗೆ ಐಕಾನ್‌ ಇರೋದಿಲ್ಲ. ಉದಾಹರಣೆಗೆ ವಾಟ್ಸಾಪ್‌, ಇನ್ಸ್‌ಟ್ರಾಗಾಮ್‌ ರೀತಿ ಈ APK ಗೆ ಯಾವುದೇ ಐಕಾನ್‌ ಇರೋದಿಲ್ಲ. ಇದು ಹೋಮ್‌ ಸ್ಕ್ರೀನ್‌ನಲ್ಲಿ(Home screen) ಕಾಣಿಸುತ್ತೆ,

ಆದ್ರೆ ಈ APK ಕಾಣಿಸೋದಿಲ್ಲ. ನಿಮ್ಮ ಖಾಸಗಿ ಮಾಹಿತಿ, ಖಾಸಗಿ ಫೋಟೋ, ಖಾಸಗಿ ಮೆಸೇಜ್‌ ಎಲ್ಲಾ ಇಟ್ಕೊಂಡು ನಿಮ್ಮನ್ನ ಬ್ಲಾಕ್‌ ಮೇಲ್‌ ಮಾಡ್ತಾರೆ. KYC ಅಪ್‌ಡೇಟ್‌ ಆಗಿಲ್ಲ,

ಬ್ಯಾಂಕ್‌ ಅಕೌಂಟ್‌ ಫೀಸ್‌ ಆಗಿದೆ, ಅರೆಸ್ಟ್‌ ಮಾಡ್ತೀವಿ, ಕರೆಂಟ್‌ ಬಿಲ್‌ ಕಟ್ಟಿಲ್ಲ ಕರೆಂಟ್‌ ಕಟ್‌ ಮಾಡ್ತೀವಿ ಅಂತೆಲ್ಲಾ ಬ್ಲಾಕ್‌ ಮೇಲ್‌ ಮಾಡ್ತಾರೆ. ಈ ಬಗ್ಗೆ HDFC ಬ್ಯಾಂಕ್‌ ಗ್ರಾಹಕರಿಗೆ ಎಚ್ಚರಿಕೆ ಕೂಡ ನೀಡಿದೆ.

APK ಸ್ಕ್ಯಾಮ್‌ನಿಂದ ಬಚಾವಾಗೋದು ಹೇಗೆ?
  1. ಅಫೀಶಿಯಲ್‌ ಆಪ್‌ ಅದರಲ್ಲೂ ಪ್ಲೇ ಸ್ಟೋರ್‌ನಲ್ಲಿ ಮಾತ್ರ ಡೌನ್‌ಲೋಡ್‌ ಮಾಡಿ. ಥರ್ಡ್‌ ಪಾರ್ಟಿ ಆಪ್‌ಗಳನ್ನ ಡೌನ್‌ಲೋಡ್‌ ಮಾಡಿ.
  2. ಬಂದಿರುವ ಎಲ್ಲಾ ಮೆಸೇಜ್‌, ಈ ಮೇಲ್‌ ಲಿಂಕ್‌ಗಳನ್ನ ದಿಢೀರ್‌ ಕ್ಲಿಕ್‌ ಮಾಡಬೇಡಿ.
  3. ಆಂಟಿ ವೈರಸ್‌ ಸಾಫ್ಟ್‌ವೇರ್‌ಗಳನ್ನ ಬಳಕೆ ಮಾಡುವುದು, ಅಪ್‌ಡೇಟ್‌ ಮಾಡುತ್ತಿರಿ.
  4. ಫೋನ್‌ ಸೆಟ್ಟಿಂಗ್‌ನಲ್ಲಿ ಇನ್‌ಸ್ಟಾಲ್‌ ಫ್ರಮ್‌ ಅನೌನ್‌ ಸೋರ್ಸಸ್‌ ಆಪ್ಶನ್‌ನ ಆನ್‌ ಇಡಲೇಬೇಡಿ. ಇದನ್ನ ಆನ್‌ ಇಟ್ಟರೆ ಈಸಿಯಾಗಿ ಸ್ಕ್ಯಾಮ್‌ APK ಗಳು ನಿಮ್ಮ ಫೋನ್‌ ಸೇರಲಿದೆ.
  5. ನಕಲಿ ಬ್ಯಾಂಕ್‌ ಕಾಲ್‌ ಡೀಟೇಲ್ಸ್‌ ನೀಡಬೇಕು, ಸಮಸ್ಯೆ ಇದ್ದರೆ ಬ್ಯಾಂಕ್‌ಗೆ ನೀವೆ ಭೇಟಿ ನೀಡಿ.

ಈ ಮೇಲಿನ ಎಲ್ಲವನ್ನೂ ಪಾಲಿಸಿದ ಮೇಲೂ ನಿಮಗೆ ಸೈಬರ್‌ಫ್ರಾಡ್‌ನಿಂದ ಹಣ ವಂಚನೆಯಾದ್ರೆ ನೀವು ಸೈಬರ್‌ ಕ್ರೈಂಗೆ ದೂರು ನೀಡಬಹುದು.

ಇಲ್ಲವಾದ್ರೆ https://cybercrime.gov.in ಇಲ್ಲಿ ಭೇಟಿ ನೀಡಿ ಕಂಪ್ಲೆಂಟ್‌ ನೀಡಬಹುದು. ಹಾಗೂ ಸೈಬರ್‌ ಕ್ರೈಂ ಹೆಲ್ಪ್‌ಲೈನ್‌ 1930 ಗೆ ಕರೆ ಮಾಡಿ ರಿಪೋರ್ಟ್‌ ಮಾಡಬಹುದು.

ಇದನ್ನು ಓದಿ :  ಲಕ್ಕಿ ಸ್ಕೀಮ್‌ ಗೋಲ್‌ಮಾಲ್‌ ಬಯಲು! ವಿಜಯಟೈಮ್ಸ್‌ ಬಯಲು ಮಾಡಿದೆ ಲಕ್ಕೀ ಸ್ಕೀಮ್‌ಗಳ ಅಸಲಿಯತ್ತು

ಇನ್ನೊಂದು ನೆನಪಿಟ್ಟುಕೊಳ್ಳಿ APK ಸ್ಕ್ಯಾಮ್‌‌ ಬ್ಲಾಕ್‌ ಮಾಡಿದ್ರೂ ಕೂಡ ಪುನಃ ನಿಮ್ಮ ಮೊಬೈಲ್‌ ಸೇರುತ್ತೆ. ಸೋ APK ಸೇರಿ ಇನ್ನಿತರ ಸ್ಕ್ಯಾಮ್‌ಗಳ ಬಗ್ಗೆ ಜಾಗರೂಕರಾಗಿರಿ. (Beware of APK scam)

ಸೌಜನ್ಯ ವಿಜಯಟೈಮ್ಸ್‌ ಬೆಂಗಳೂರು

Tags: APK scamCyber ​​expertscybercrimeHDFConline scamvijaya times

Related News

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025
2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ
ದೇಶ-ವಿದೇಶ

2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.