ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಜಾಸ್ತಿಯಾಗುತ್ತಿದ್ದು, ಕ್ರಿಮಿನಲ್ಗಳು ಅಮಾಯಕರನ್ನು (Beware of Scanning QR Codes) ಮೋಸಗೊಳಿಸಲು ನಾನಾ ಹೆಜ್ಜೆಯನ್ನು ಇಡುತ್ತಿದ್ದಾರೆ.
ಈಗ ಇಮೇಲ್ನಲ್ಲಿ ಕ್ಯೂಆರ್ ಕೋಡ್ (QR Code) ಕಳುಹಿಸುವ ಜಾಲವೂ (Beware of Scanning QR Codes) ಹೆಚ್ಚಾಗಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೈಬರ್ ಸೆಕ್ಯುರಿಟಿ ಕಂಪನಿಗಳ (Cyber Security Company) ವರದಿಗಳ ಪ್ರಕಾರ ಇಮೇಲ್ಗಳ ಮೂಲಕ ಫಿಶಿಂಗ್ ದಾಳಿಯ ಸಂಖ್ಯೆ ಹೆಚ್ಚಳವಾಗುತ್ತಿದೆ. ಫಿಶಿಂಗ್ ಮತ್ತು ಸ್ಕ್ಯಾಮ್ ಪೇಜ್ಗಳಿಗೆ
ಲಿಂಕ್ಗಳನ್ನು (Scam Page Link) ಎನ್ಕೋಡ್ ಮಾಡಲು ವಂಚಕರು QR ಕೋಡ್ಗಳನ್ನು ಬಳಸುತ್ತಿದ್ದಾರೆ ಎಂಬುದು ಈಗ ಗಮನಕ್ಕೆ ಬಂದಿದೆ. ಹೀಗಾಗಿ ಬಳಕೆದಾರರು ಈ ಬಗ್ಗೆ ಹೆಚ್ಚಿನ
ಜಾಗರೂಕತೆ ವಹಿಸಬೇಕಾಗಿದೆ.
ಹ್ಯಾಕರ್ಗಳು (Hackers) ಪ್ರತಿಷ್ಠಿತ ಮೂಲದಿಂದ ಬಂದಿದೆ ಎನ್ನುವಂತೆ ತೋರಿಸುವ ಮೋಸದ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು ಫಿಶಿಂಗ್ ದಾಳಿ ಎನ್ನುವುದು ಕೂಡಾ ಒಂದು ರೀತಿಯ ಸೈಬರ್
ದಾಳಿಯಾಗಿದೆ. ಇದರಲ್ಲಿ ಈ ಪ್ರತಿಷ್ಠಿತ ಹೆಸರನ್ನೇ ಅಸಲಿ ಎಂದು ನಂಬಿ ಮೋಸ ಹೋದರೆ ಕಷ್ಟ ಗ್ಯಾರಂಟಿ. ಈ ರೀತಿಯ ಮೋಸವನ್ನು ಸಾಮಾನ್ಯವಾಗಿ ಇಮೇಲ್ (E-Mail) ಮೂಲಕ ಮಾಡಲಾಗುತ್ತದೆ.
ಅಮಾಯಕರನ್ನು ಗುರಿಯಾಗಿಸಿಕೊಂಡು ಸೈಬರ್ ಕ್ರೈಮ್ ವಂಚಕರು ಬಳಸುವ ತಂತ್ರಗಳ ಬಗ್ಗೆ ಸಾಕಷ್ಟು ಜಾಗೃತಿಯನ್ನೂ ಮೂಡಿಸಲಾಗುತ್ತಿದ್ದು, ಸೈಬರ್ ದಾಳಿಯನ್ನು ಪ್ರಾರಂಭಿಸಲು ಸೈಬರ್
(Cyber) ಅಪರಾಧಿಗಳು ಲಿಂಕ್ಗಳನ್ನು ಕಳುಹಿಸುವುದು ಈಗೀಗ ಸರ್ವೇ ಸಾಮಾನ್ಯವಾಗಿದೆ. ಹಾಗಾಗಿ ಸಾಕಷ್ಟು ಸಂದರ್ಭದಲ್ಲಿ ಜನರು ಈಗ ಅನುಮಾನಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುತ್ತಿಲ್ಲ.
ಇದನ್ನು ತಿಳಿದಿರುವ ಸೈಬರ್ ಕ್ರೈಂ ಅಪರಾಧಿಗಳು ಬೇರೆಯದ್ದೇ ದಾರಿಯನ್ನು ಕಂಡುಕೊಂಡಿದ್ದು, ಅದೇ ಕ್ಯೂಆರ್ ಕೋಡ್ಗಳನ್ನು ಇಮೇಲ್ ಮೂಲಕ ಕಳುಹಿಸಿಕೊಡುವುದು. ಮೋಸದ ಕ್ಯೂಆರ್ ಕೋಡ್ಗಳು
ಬಳಕೆದಾರರು ಅವುಗಳನ್ನು ಬರೀ ಸ್ಕ್ಯಾನ್ (Scan) ಮಾಡಲು ಅನುಮತಿಸುತ್ತದೆ ಮತ್ತು ಅಲ್ಲಿಗೆ ಅವರ ಕೆಲಸ ಮುಗಿಯುತ್ತದೆ.
ಅಪರಾಧಿಗಳು, ಅಮಾಯಕರನ್ನು ಗುರಿಯಾಗಿಸಲು ಈ ವೈಶಿಷ್ಟ್ಯದ ಲಾಭವನ್ನು ಪಡೆದುಕೊಳ್ಳುತ್ತಿದ್ದು, QR ಕೋಡ್ ಅನ್ನು ಪರಿಶೀಲಿಸಲು ಮತ್ತು ನಿರ್ಬಂಧಿಸಲು ಯಾವುದೇ ಮಾರ್ಗವಿಲ್ಲ. ಅದೂ ಅಲ್ಲದೆ,
ಸ್ಕ್ಯಾನ್ ಮಾಡಿದಾಗ ಯಾವ ಲಿಂಕ್ ತೆರೆದುಕೊಳ್ಳುತ್ತದೆ ಎಂಬುದನ್ನು ಕ್ಯೂಆರ್ ಕೋಡ್ ಹೇಳುವುದಿಲ್ಲ. ಹೀಗಾಗಿ ಫಿಶಿಂಗ್ ಮತ್ತು ಸ್ಕ್ಯಾಮ್ ಪುಟಗಳಿಗೆ ಲಿಂಕ್ಗಳನ್ನು ಎನ್ಕೋಡ್ (Encode) ಮಾಡಲು
ವಂಚಕರು QR ಕೋಡ್ಗಳನ್ನು ಬಳಸುತ್ತಾರೆ.
ಸಲಹೆಗಳು
- QR ಕೋಡ್ ಹೊಂದಿರುವ ಇಮೇಲ್ ಅಪಾಯಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳುವುದಲ್ಲದೆ ಇಮೇಲ್ನಲ್ಲಿ ಕೋಡ್ ಇದ್ದರೆ ಅದನ್ನು
ಹಾನಿಕಾರಕ ಎಂದು ಪರಿಗಣಿಸಿ.
*ನಿಮ್ಮ ಪಾಸ್ವರ್ಡ್ (Password) ಅವಧಿ ಮುಗಿಯಲಿದೆ ಅಥವಾ ನಿಮ್ಮ ಮೇಲ್ ಬಾಕ್ಸ್ಗೆ ನೀವು ಅಕ್ಸೆಸ್ ಅನ್ನು ಕಳೆದುಕೊಳ್ಳಬಹುದು ಎಂಬ ರೀತಿಯ
ಸಂದೇಶವುಳ್ಳ ಕೆಲವು ನಕಲಿ ಇಮೇಲ್ ಎಚ್ಚರಿಕೆ ಅಥವಾ ನೋಟಿಫಿಕೇಷನ್ (Notification) ನಿಮಗೆ ಬರಬಹುದು. ಇಮೇಲ್ QR ಕೋಡ್ ಅನ್ನು ಹೊಂದಿದ್ದರೆ
ಹಾನಿಕಾರಕ ವೆಬ್ಸೈಟ್ಗೆ (Website) ನಿಮ್ಮನ್ನು ಕೊಂಡೊಯ್ಯುವ ಸಾಧ್ಯತೆಯೇ ಜಾಸ್ತಿ - ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಕ್ಷಣ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂಬ ಸಂದೇಶ ಕೂಡಾ ಇರುತ್ತದೆ.
ಇದನ್ನು ಓದಿ: ಸಾರ್ವಜನಿಕರ ಆಕ್ರೋಶ: ಬಡವರಿಗೆ ಒಂದು ನ್ಯಾಯ? ಸೆಲೆಬ್ರಿಟಿಗಳಿಗೆ ಇನ್ನೊಂದು ನ್ಯಾಯನಾ?
- ಭವ್ಯಶ್ರೀ ಆರ್.ಜೆ