ನವದೆಹಲಿ : ಪಂಜಾಬ್(Punjab) ಮುಖ್ಯಮಂತ್ರಿ ಭಗವಂತ್ ಮಾನ್(Bhagwanth Mann admitted to hospital) ಅವರನ್ನು ದೆಹಲಿಯ ಅಪೊಲೋ ಆಸ್ಪತ್ರೆಗೆ(Apollo Hospital) ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಭಗವಂತ್ ಮಾನ್ (admitted to hospital)ಅವರು ಹೊಟ್ಟೆನೋವು ಎಂದು ತೀವ್ರ ಅಸ್ವಸ್ಥಗೊಂಡ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತು ಎಂದು ಸುದ್ದಿ ಸಂಸ್ಥೆ ANI ವರದಿಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು. ಈ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಾಸ್ಯ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಒಂದೆರೆಡು ದಿನಗಳ ಹಿಂದೆ, ಸಿಎಂ ಭಗವಂತ್ ಮಾನ್ ಅವರು ಪವಿತ್ರ ಸ್ಥಳದ ನೀರು ಶುದ್ಧವಾಗಿದೆ ಎಂದು ಸಾಬೀತಪಡಿಸಲು, ಕಲುಷಿತ ನೀರನ್ನು ಲೋಟದಲ್ಲಿ ತೆಗೆದುಕೊಂಡು ಸೇವಿಸಿದ್ದಾರೆ. ಈ ಮುಖೇನ ಅವರು ನೀರು ಕಲುಷಿತಗೊಂಡಿಲ್ಲ ಎಂದು ಸಾಬೀತುಪಡಿಸಲು ಈ ರೀತಿ ಮಾಡಿದರು.
ಇದರ ಕಾರಣವೇ ಅವರು ಆಸ್ಪತ್ರೆಗೆ ದಾಖಲಾಗಿರುವುದು ಎಂದು ಅಶೋಕ್ ಸ್ವೇನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಖದ್ದಾಗಿ ವೈದ್ಯರು ತಪಾಸಣೆ ನಡೆಸಿದಾಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಭಗವಂತ್ ಮಾನ್ ಅವರ ವಿರುದ್ಧ ಅನೇಕರು ಟ್ವಿಟರ್ ನಲ್ಲಿ(Twitter) ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ. ಇನ್ನು ಬುಧವಾರ, ಅಮೃತಸರ್(Amritsar) ಬಳಿ ಪಂಜಾಬ್ ಪೊಲೀಸರು(Punjab Police) ಸಿಧು ಮೂಸ್ ವಾಲಾ(Sidhu Moose Wala) ಹತ್ಯೆಯಲ್ಲಿ ಇಬ್ಬರು ಶಂಕಿತರನ್ನು ಹೊಡೆದುರುಳಿಸಿದ ನಂತರ ಪಂಜಾಬ್ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ಭಗವಂತ್ ಮಾನ್ ಅಭಿನಂದಿಸಿದ್ದಾರೆ.

ಹತ್ಯೆಗೀಡಾದ ಹಂತಕರು ಜಗ್ರೂಪ್ ಸಿಂಗ್ ರೂಪ ಮತ್ತು ಮನ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರಿಂದ ಎಕೆ 47(AK 47) ಮತ್ತು ಪಿಸ್ತೂಲ್(Pistool) ಅನ್ನು ಎನ್‌ಕೌಂಟರ್ ನಂತರ ವಶಪಡಿಸಿಕೊಳ್ಳಲಾಗಿದೆ.
https://vijayatimes.com/300-units-of-power-free-says-aap/